“ಸಿದ್ದರಾಮಯ್ಯರದು ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ”

ಮಳೆಗಾಲದಲ್ಲಿ ಮಾತ್ರ ಮಿನುಗುವ ಮಿಂಚುಳ್ಳಿ ಹುಳಕ್ಕೆ  ಜಗತ್ತಿಗೆಲ್ಲಾ ಬೆಳಕು ನೀಡೋದು ನಾನೇ ಎನ್ನುವ ಭ್ರಮೆಯಂತೆ. ಸಿದ್ದರಾಮಯ್ಯರದು ಕೂಡ ಅದೇ ರೀತಿಯ ಭ್ರಮೆ. ಯಾರೊ ಬೆಳಕು ನೀಡಿದರೆ, ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗವಾಡಿದ್ದಾರೆ.

Last Updated : Nov 11, 2022, 11:35 PM IST
  • ಹಲವಾರು ಪ್ರಯತ್ನಗಳ ನಂತರ 2013 ಜುಲೈನಲ್ಲಿ ರಾಜ್ಯದ ಈ ಪ್ರಸ್ತಾವನೆಯನ್ನು ಅಂದಿನ ಯು.ಪಿ.ಎ ಸರ್ಕಾರ ಅನುಮೋದಿಸಿತು.
  • ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
  • ಈಗ ಹೇಳಿ, ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಕಾಂಗ್ರೆಸ್ ಏಕೆ ಮೀನಾಮೇಷ ಮಾಡಿತ್ತು..?
“ಸಿದ್ದರಾಮಯ್ಯರದು ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ” title=
file photo

ಬೆಂಗಳೂರು: ಮಳೆಗಾಲದಲ್ಲಿ ಮಾತ್ರ ಮಿನುಗುವ ಮಿಂಚುಳ್ಳಿ ಹುಳಕ್ಕೆ  ಜಗತ್ತಿಗೆಲ್ಲಾ ಬೆಳಕು ನೀಡೋದು ನಾನೇ ಎನ್ನುವ ಭ್ರಮೆಯಂತೆ. ಸಿದ್ದರಾಮಯ್ಯರದು ಕೂಡ ಅದೇ ರೀತಿಯ ಭ್ರಮೆ. ಯಾರೊ ಬೆಳಕು ನೀಡಿದರೆ, ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗವಾಡಿದ್ದಾರೆ.

ಈ ಕುರಿತಾಗಿ ಸರಣಿ ಟ್ವೀಟ್ ಮಾಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಹುಟ್ಟುವ ಮಗುವಿಗೆಲ್ಲಾ ನಾಮಕರಣ ಮಾಡಿದ್ದು ನಾನೇ ಎನ್ನುವಂತೆ ಹೇಳಿಕೊಳ್ಳುವ ಸಿದ್ದರಾಮಯ್ಯನವರೇ...

ಇದನ್ನೂ ಓದಿ: Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್

ಬೆಂಗಳೂರು ಏರ್ಪೋಟ್'ಗೆ ನಾಡ ಪ್ರಭು ಕೆಂಪೇಗೌಡರ ಹೆಸರು ಇಡುವ ತೀರ್ಮಾನ ಮಾಡಿದ್ದು ಅಂದಿನ ಬಿಜೆಪಿ ಸರ್ಕಾರ. 27 ಫೆಬ್ರವರಿ 2009 ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು‌ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ‌ ಬಿಜೆಪಿ ಸರ್ಕಾರ.

ಆದರೆ ಕೆಂಪೇಗೌಡರ ಹೆಸರನ್ನು ಏರ್ಪೋಟ್'ಗೆ ಇಡಬೇಕೊ ಬೇಡವೊ ಎಂದು ತೀರ್ಮಾನ ಮಾಡಲು ಅಂದಿನ ಯುಪಿಎ ಸರ್ಕಾರ ತೆಗೆದುಕೊಂಡ ಸಮಯ ಬರೋಬ್ಬರಿ 4 ವರ್ಷ!!

ಟಿವಿ ಕ್ಯಾಮರಾ ಮುಂದೆ ಬಂದು ಒಳ್ಳೆಯದಕ್ಕೆಲ್ಲಾ ನಾನೇ ಕಾರಣ ಎನ್ನುವ ಸಿದ್ದರಾಮಯ್ಯರೇ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ 4 ವರ್ಷ ನಿಮ್ಮ ಯುಪಿಎ ಸರ್ಕಾರ ಕಾಯಿಸಿದ್ದು ಯಾಕೆ?

2011 ರವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಾರದಿದ್ದಾಗ ಪುನಃ 2011ರಲ್ಲಿ ಸದನದಲ್ಲಿ ಚರ್ಚಿಸಿ, ನಾಡಪ್ರಭು ಕೆಂಪೇಗೌಡರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಪುನಃ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು, ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಸಲ್ಲಿಸಿದರು.

ಇದನ್ನೂ ಓದಿ: ಏನ್‌ ಲುಕ್‌ ಗುರು ಸೂಪರ್‌..! : ಹೊಸ ಗೆಟಪ್‌ನಲ್ಲಿ ಜ್ಯೂ.ಎನ್‌ಟಿಆರ್‌

ಆಗಲೂ ಸಹ ಅಂದಿನ ಯು.ಪಿ.ಎ ನೇತೃತ್ವದ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದ ಕಾರಣ , ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಬೇಕೆಂದು ಪುನಃ 2012ರಲ್ಲಿ ಉಭಯ ಸದನಗಳಲ್ಲಿ ಸಹ ನಿರ್ಣಯವನ್ನು ತೆಗೆದುಕೊಂಡು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು.

ಹಲವಾರು ಪ್ರಯತ್ನಗಳ ನಂತರ 2013 ಜುಲೈನಲ್ಲಿ ರಾಜ್ಯದ ಈ ಪ್ರಸ್ತಾವನೆಯನ್ನು ಅಂದಿನ ಯು.ಪಿ.ಎ ಸರ್ಕಾರ ಅನುಮೋದಿಸಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಹೇಳಿ, ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಕಾಂಗ್ರೆಸ್ ಏಕೆ ಮೀನಾಮೇಷ ಮಾಡಿತ್ತು..?

ಮಳೆಗಾಲದಲ್ಲಿ ಮಾತ್ರ ಮಿನುಗುವ ಮಿಂಚುಳ್ಳಿ ಹುಳಕ್ಕೆ  ಜಗತ್ತಿಗೆಲ್ಲಾ ಬೆಳಕು ನೀಡೋದು ನಾನೇ ಎನ್ನುವ ಭ್ರಮೆಯಂತೆ. ಸಿದ್ದರಾಮಯ್ಯರದು ಕೂಡ ಅದೇ ರೀತಿಯ ಭ್ರಮೆ. ಯಾರೊ ಬೆಳಕು ನೀಡಿದರೆ, ರಾಜ್ಯ ನನ್ನಿಂದಲೇ ಬೆಳಗುತ್ತಿದೆ ಎಂದು ಹೇಳಿಕೊಳ್ಳುವ ಚಪಲತೆ.ಕೆಂಪೇಗೌಡರ ಹೆಸರನ್ನು ಏರ್ಪೋಟ್ ಗೆ ಇಡುವ ತೀರ್ಮಾನ ಮಾಡಿದ್ದು ಸರ್ಕಾರ.

ಆದರೆ ಅದನ್ನು ನಾವು ಮಾಡಿದ್ದು ಎನ್ನುವ ಸಿದ್ದರಾಮಯ್ಯ ಹೇಳಿಕೆ ನೋಡಿದರೆ, ಮಳೆಗಾಲದ ಮಿಂಚುಳ್ಳಿ ನೆನಪಾಗುತ್ತದೆ ಎಂದು ವ್ಯಂಗವಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News