ನವದೆಹಲಿ: ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೈತುಂಬಾ ಸಂಬಳದ ಜಾಬ್ ಇದ್ದರೂ ಸಹ ಸರ್ಕಾರಿ ಉದ್ಯೋಗಕ್ಕೆ ಹೆಚ್ಚಿನ ಡಿಮ್ಯಾಂಡ್ ಇದೆ. ಹೀಗಾಗಿಯೇ ಸರ್ಕಾರಿ ಉದ್ಯೋಗದ ಸಣ್ಣ ಹುದ್ದೆಗೂ ಲಕ್ಷಗಟ್ಟಲೆ ಅರ್ಜಿಗಳು ಬರುತ್ತವೆ. ಆದರೆ ಐಎಎಸ್-ಐಪಿಎಸ್ ವಿಷಯ ಬಂದಾಗ ಇದು ಬೇರೆಯಾಗುತ್ತದೆ. UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗೇರಲು ಲಕ್ಷಾಂತರ ಯುವಕರು ಹಲವು ವರ್ಷಗಳಿಂದ ತಯಾರಿ ನಡೆಸುತ್ತಾರೆ. ಆದರೆ ಕೆಲವೇ ಜನರಿಗೆ ಅಧಿಕಾರಿಯಾಗುವ ಅದೃಷ್ಟ ದೊರೆಯುತ್ತದೆ. ಯಾರಿಗೆ ಸರ್ಕಾರಿ ಕೆಲಸ ಸಿಗುತ್ತದೆ ಅಂತಾ ಕೈಯಲ್ಲಿರುವ ರೇಖೆಗಳು ಮೂಲಕವೂ ತಿಳಿಯಬಹುದು ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆಯಂತೆ.
ಇದನ್ನೂ ಓದಿ: Swapna Shastra : ಕನಸಿನಲ್ಲಿ ಮೀನುಗಳನ್ನು ಕಂಡರೆ ಶುಭ ಅಥವಾ ಅಶುಭನ : ಇಲ್ಲಿದೆ ನೋಡಿ
ಕೈನಲ್ಲಿ ಈ ರೇಖೆ ಹೊಂದಿದ್ದರೆ ಸರ್ಕಾರಿ ಕೆಲಸ!
- ಅದೃಷ್ಟ ರೇಖೆಯು ಶನಿ ಪರ್ವತದಿಂದ ಗುರು ಪರ್ವತಕ್ಕೆ ಚಲಿಸಿದರೆ. ಇದರೊಂದಿಗೆ ವ್ಯಕ್ತಿಯ ಸೂರ್ಯನ ರೇಖೆಯು ಸೂರ್ಯನ ಪರ್ವತದವರೆಗೆ ಹೋಗಿ ಸ್ಪಷ್ಟವಾಗಿದ್ದರೆ, ಅಂತಹ ವ್ಯಕ್ತಿಯು ಖಂಡಿತವಾಗಿಯೂ ಆಡಳಿತಾತ್ಮಕ ಹುದ್ದೆಯನ್ನು ಪಡೆಯುತ್ತಾನಂತೆ. ಇಂತಹ ವ್ಯಕ್ತಿಯು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಆಯ್ಕೆಯಾಗುವ ಎಲ್ಲಾ ಅವಕಾಶಗಳನ್ನು ಹೊಂದಿರುತ್ತಾನೆ.
- ಕೈಯಲ್ಲಿರುವ ವಿಧಿ ರೇಖೆಯಿಂದ ಕವಲು ಹೊರಬಂದು ಗುರು ಪರ್ವತದ ಕಡೆಗೆ ಹೋದರೆ, ಅಂತಹ ವ್ಯಕ್ತಿಯೂ ಉನ್ನತ ಸ್ಥಾನವನ್ನು ಪಡೆಯುತ್ತಾನಂತೆ. ಇಂತಹ ವ್ಯಕ್ತಿಗೆ ಖಂಡಿತ ಸರ್ಕಾರಿ ಕೆಲಸ ಸಿಗುತ್ತದೆ ಮತ್ತು ಈತ ಐಷಾರಾಮಿ ಜೀವನವನ್ನು ನಡೆಸುತ್ತಾನೆಂದು ನಂಬಲಾಗಿದೆ.
- ಲೈಫ್ ಲೈನ್ ಗುರುಪರ್ವತದವರೆಗೆ ಹೋಗಿ ಈ ಮಧ್ಯೆ ಯಾವುದೇ ಗೆರೆಯನ್ನು ಕ್ರಾಸ್ ಮಾಡದಿದ್ದರೆ, ಅಂತಹ ವ್ಯಕ್ತಿಗೆ ಖಂಡಿತ ಸರ್ಕಾರಿ ಕೆಲಸ ಸಿಗುತ್ತದಂತೆ. ಇದರೊಂದಿಗೆ ಉನ್ನತ ಸ್ಥಾನಮಾನ, ಪ್ರತಿಷ್ಠೆಯೂ ಸಿಗುತ್ತದೆ ಎಂದು ಹೇಳಲಾಗಿದೆ.
- ಅದೃಷ್ಟ ರೇಖೆಯಿಂದ ಹೊರಬರುವ ರೇಖೆಯು ಸೂರ್ಯನ ರೇಖೆಯನ್ನು ಸಂಧಿಸಿದರೆ, ವ್ಯಕ್ತಿಯು ಸರ್ಕಾರಿ ಉದ್ಯೋಗ ಪಡೆಯುವುದು ಮಾತ್ರವಲ್ಲದೆ ಸಾಕಷ್ಟು ಖ್ಯಾತಿ, ಹಣ ಮತ್ತು ಬಡ್ತಿಯನ್ನು ಪಡೆಯುತ್ತಾನಂತೆ. ಇಂತಹ ವ್ಯಕ್ತಿಗೆ ಸರ್ಕಾರದಲ್ಲಿ ಮಹತ್ವದ ಸ್ಥಾನ ಸಿಗುತ್ತದೆ ಎಂದು ಹೇಳಲಾಗಿದೆ.
- ಅದೃಷ್ಟ ರೇಖೆಯು ಗುರುಗ್ರಹದ ಕಡೆಗೆ ವಕ್ರವಾಗಿದ್ದರೆ, ಅಂತಹ ಜನರಿಗೆ ಸರ್ಕಾರಿ ಉದ್ಯೋಗಗಳು ಮಾತ್ರವಲ್ಲ ಅನೇಕ ಸೌಲಭ್ಯಗಳು ಸಿಗುತ್ತವಂತೆ. ಇವರು ಒಂದರ ನಂತರ ಒಂದರಂತೆ ಅನೇಕ ಯಶಸ್ಸು ಮತ್ತು ಸಾಧನೆಗಳನ್ನು ಮಾಡುತ್ತಾರಂತೆ. ಈ ಜನರು ಉನ್ನತ ಸ್ಥಾನ ಪಡೆಯುತ್ತಾರೆ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವಿಶೇಷ ಸಾಮರ್ಥ್ಯ ಹೊಂದಿರುತ್ತಾರಂತೆ.
ಇದನ್ನೂ ಓದಿ: Chanakya Niti: ಈ ಮೂರು ಗುಣಗಳ ಆಧಾರದ ಮೇಲೆ ಲೈಫ್ ಪಾರ್ಟ್ನರ್ ಆಯ್ಕೆ ಮಾಡಿ, ಚಿಕ್ಕದೊಂದು ತಪ್ಪು ಜೀವನವನ್ನೇ ನರಕಾಗಿಸುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.