Death while playing cricket: ಕ್ರಿಕೆಟ್ ಆಡುತ್ತಲೇ ಇಹಲೋಕ ತ್ಯಜಿಸಿದ ದಿಗ್ಗಜರು ಇವರು

Death while playing cricket: ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ 27 ನವೆಂಬರ್ 2014 ರಂದು ಪಂದ್ಯದ ವೇಳೆ ತಲೆಗೆ ಬೌನ್ಸರ್ ಬಡಿದು ಸಾವನ್ನಪ್ಪಿದ್ದರು. ದಕ್ಷಿಣ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಸಿಡ್ನಿಯಲ್ಲಿ ಈ ಪಂದ್ಯ ನಡೆಯುತ್ತಿತ್ತು. ಫಿಲಿಪ್ ಹ್ಯೂಸ್ ಮಾತ್ರವಲ್ಲ, ಇನ್ನೂ 5 ಆಟಗಾರರು ಆಟದ ಸಮಯದಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳೋಣ.

1 /6

ಬೌಲರ್ ಶಾನ್ ಅಬಾಟ್ ಬೌಲ್ಡ್ ಮಾಡಿದ ಬೌನ್ಸರ್ ನೇರವಾಗಿ ಹ್ಯೂಸ್ ತಲೆಗೆ ಬಡಿದ ಪರಿಣಾಮ ಹ್ಯೂಸ್ ತತ್ತರಿಸಿ ನೆಲಕ್ಕೆ ಬಿದ್ದರು. ಈ ಆಘಾತದ ನಂತರ, ಹ್ಯೂಸ್ 3 ದಿನಗಳ ಕಾಲ ಕೋಮಾದಲ್ಲಿಯೇ ಇದ್ದರು. ಆದರೆ ನವೆಂಬರ್ 27 ರಂದು ಕೊನೆಯುಸಿರೆಳದರು. ಆ ಸಮಯದಲ್ಲಿ ಫಿಲಿಪ್ ಹ್ಯೂಸ್ ಕೇವಲ 26 ವರ್ಷ ವಯಸ್ಸಿನವನಾಗಿದ್ದರು.

2 /6

ಮೇ 6, 2021 ರಂದು ಇಂಗ್ಲೆಂಡ್‌ನಲ್ಲಿಯೂ ಒಂದು ದುರಂತ ಘಟನೆ ಸಂಭವಿಸಿದೆ. ನೆಟ್ ಅಭ್ಯಾಸದ ಸಮಯದಲ್ಲಿ 24 ವರ್ಷದ ಕ್ರಿಕೆಟಿಗ ಜೋಶುವಾ ಡೌನಿ ಹಠಾತ್ ಹೃದಯಾಘಾತದಿಂದ ನಿಧನರಾದರು. ಅವರು ಒಲಿಂಪಿಕ್ ಜಿಮ್ನಾಸ್ಟ್‌ಗಳಾದ ಬೆಕಿ ಡೌನಿ ಮತ್ತು ಎಲ್ಲೀ ಡೌನಿ ಅವರ ಸಹೋದರ.

3 /6

ಭಾರತ ಕ್ರಿಕೆಟ್ ತಂಡದ ಆಟಗಾರ ರಮಣ್ ಲಂಬಾ ಅವರು ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡು ಅವರ ತಲೆಗೆ ತಗುಲಿ ಅಲ್ಲಿಯೇ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಗತ್ತಿಗೆ ವಿದಾಯ ಹೇಳಿದರು. ಅವರ ವಯಸ್ಸು 38 ವರ್ಷವಾಗಿತ್ತು.

4 /6

ಇಂಗ್ಲೆಂಡಿನ ರಿಚರ್ಡ್ ಬ್ಯೂಮಾಂಟ್ 2012ರಲ್ಲಿ ಆಟದ ಮೈದಾನದಲ್ಲಿ ಹೃದಯಾಘಾತದಿಂದ ಜಗತ್ತಿಗೆ ವಿದಾಯ ಹೇಳಿದ್ದರು. ಆಗ ಅವರ ವಯಸ್ಸು ಕೇವಲ 33 ವರ್ಷ.

5 /6

ಪಾಕಿಸ್ತಾನಿ ಕ್ರಿಕೆಟಿಗ ಜುಲ್ಫಿಕರ್ ಭಟ್ಟಿ ಕೇವಲ 22 ನೇ ವಯಸ್ಸಿನಲ್ಲಿ ಅಪಘಾತಕ್ಕೆ ಬಲಿಯಾದರು. ಅವರು ದೇಶೀಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಎದೆಗೆ ಚೆಂಡು ಬಡಿದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

6 /6

ಫೆಬ್ರವರಿ 17, 2021 ರಂದು, ಆಟಗಾರ ಬಾಬು ನಲವಾಡೆ ಎಂಬವರು ಪುಣೆಯಲ್ಲಿ ಪಂದ್ಯವನ್ನು ಆಡುವಾಗ ಹೃದಯಾಘಾತದಿಂದ ನಿಧನರಾದರು. ಅವರ ವಯಸ್ಸು 47 ವರ್ಷವಾಗಿತ್ತು. ತಕ್ಷಣ ಅವರನ್ನು ವೈದ್ಯರ ಬಳಿಗೆ ಕರೆದೊಯ್ದರೂ ಸಹ ಪ್ರಯೋಜನವಾಗಿರಲಿಲ್ಲ.