ಎಲ್ಲರೆದುರು ಕಿಸ್‌ ಕೊಟ್ಟ ವರ! ಮದುವೆಯೇ ಬೇಡ ಎಂದ ವಧು! ಮುಂದೆ?

Wedding Day : ಪ್ರತಿಯೊಬ್ಬರ ಜೀವನದ ವಿಶೇಷ ಸಂದರ್ಭವೇ ಮದುವೆ. ಆದರೆ ಈ ದಿನ ಏನಾದರೂ ಯಡವಟ್ಟು ನಡೆದು ಹೋದರೆ ಅದನ್ನು ಜೀವನಪೂರ್ತಿ ಮರೆಯಲಾಗದು. ಸುಮಾರು 300 ಅತಿಥಿಗಳ ಮುಂದೆ ವರನು ತನ್ನನ್ನು ಚುಂಬಿಸಿದ ಕಾರಣಕ್ಕೆ ಕೋಪಗೊಂಡ ವಧು ತನ್ನ ಮದುವೆಯನ್ನೇ ರದ್ದುಗೊಳಿಸಿದಳು.

Written by - Chetana Devarmani | Last Updated : Dec 1, 2022, 04:42 PM IST
  • ಪ್ರತಿಯೊಬ್ಬರ ಜೀವನದ ವಿಶೇಷ ಸಂದರ್ಭವೇ ಮದುವೆ
  • ಎಲ್ಲರೆದುರು ಕಿಸ್‌ ಕೊಟ್ಟ ವರ!
  • ಮದುವೆಯೇ ಬೇಡ ಎಂದ ವಧು! ಮುಂದೆ?
ಎಲ್ಲರೆದುರು ಕಿಸ್‌ ಕೊಟ್ಟ ವರ! ಮದುವೆಯೇ ಬೇಡ ಎಂದ ವಧು! ಮುಂದೆ?  title=
ಮದುವೆ

Wedding Day : ಪ್ರತಿಯೊಬ್ಬರ ಜೀವನದ ವಿಶೇಷ ಸಂದರ್ಭವೇ ಮದುವೆ. ಆದರೆ ಈ ದಿನ ಏನಾದರೂ ಯಡವಟ್ಟು ನಡೆದು ಹೋದರೆ ಅದನ್ನು ಜೀವನಪೂರ್ತಿ ಮರೆಯಲಾಗದು. ಸುಮಾರು 300 ಅತಿಥಿಗಳ ಮುಂದೆ ವರನು ತನ್ನನ್ನು ಚುಂಬಿಸಿದ ಕಾರಣಕ್ಕೆ ಕೋಪಗೊಂಡ ವಧು ತನ್ನ ಮದುವೆಯನ್ನೇ ರದ್ದುಗೊಳಿಸಿದಳು. ಅಲ್ಲದೇ ವಧು ಕೂಡ ವರನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೂ ತೆರಳಿದ್ದಾಳೆ. ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ದಂಪತಿಗಳು ಹಾರ ಬದಲಾಯಿಸಿಕೊಂಡರು. ಈ ವೇಳೆ ವರನು ವಧುವನ್ನು ಚುಂಬಿಸಿದ. ವಧು ತಕ್ಷಣವೇ ವೇದಿಕೆಯಿಂದ ಕೆಳಗಿಳಿದು ಮಂಟಪದಿಂದ ಹೊರನಡೆದಳು.

ಇದನ್ನೂ ಓದಿ : ರಾಮ್ ಚರಣ್ ಜೊತೆ ಜಾನ್ವಿ ಕಪೂರ್ ಡೂಯೆಟ್‌? ಟಾಲಿವುಡ್‌ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ!

ತನ್ನ ಸ್ನೇಹಿತರ ಜೊತೆ ಪಂದ್ಯ ಕಟ್ಟಿದ್ದು, ಅದನ್ನು ಗೆಲ್ಲಲು ವರನು ವಧುವಿಗೆ ಚುಂಬಿಸಿದ. ಇದರಿಂದ ಕೋಪಗೊಂಡ ವಧು, ವರನ ವಿರುದ್ಧ ಕಂಪ್ಲೇಟ್‌ ದಾಖಲಿಸಲು ಠಾಣೆಗೆ ತೆರಳಿದಳು. ಬಳಿಕ ಎರಡೂ ಕಡೆಯವರು ಪೊಲೀಸ್ ಠಾಣೆಗೆ ತೆರಳಿದ್ದಾರೆ. 

ವರನು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನೆಂದು ವಧು ಆರೋಪಿಸಿದ್ದಾಳೆ. ಆತ ನನ್ನನ್ನು ಎಲ್ಲರೆದುರು ಚುಂಬಿಸಿದ. ನನಗೆ ಅವಮಾನವಾಯಿತು. ನನ್ನ ಸ್ವಾಭಿಮಾನದ ಬಗ್ಗೆ ಕಾಳಜಿ ವಹಿಸಲಿಲ್ಲ. ಹಲವಾರು ಅತಿಥಿಗಳ ಮುಂದೆ ಅನುಚಿತವಾಗಿ ವರ್ತಿಸಿದ ಎಂದು ಅವರು ಆರೋಪಿಸಿದ್ದಾಳೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ವಧು ಮನವೊಲಿಸಲು ಆಗಲಿಲ್ಲ. ನಂತರ ಮದುವೆಯನ್ನು ರದ್ದುಗೊಳಿಸಲಾಯಿತು ಮತ್ತು ಅತಿಥಿಗಳು ಮನೆಗೆ ಮರಳಿದರು. 

ಆಕೆಯ ತಾಯಿ, ವರನು ಅವನ ಸ್ನೇಹಿತರಿಂದ ಪ್ರಚೋದಿಸಲ್ಪಟ್ಟನು. ನಾವು ನನ್ನ ಮಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆವು. ಆದರೆ ಅವಳು ಅವನನ್ನು ಮದುವೆಯಾಗಲು ನಿರಾಕರಿಸಿದಳು. ನಾವು ಕೆಲವು ದಿನಗಳ ಕಾಲ ಕಾಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ, ಈ ಬ್ಯಾಂಕಿನಲ್ಲಿ ಖಾತೆ ಇದ್ದರೆ 2 ಲಕ್ಷ ಲಾಭ, ಹೇಗೆ ಗೊತ್ತಾ?

ಘಟನೆ ಸಂಭವಿಸುವ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದರಿಂದ ತಾಂತ್ರಿಕವಾಗಿ ದಂಪತಿ ವಿವಾಹವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತೂಹಲಕಾರಿಯಾಗಿ, ಇದೇ ರೀತಿಯ ಘಟನೆಗಳಲ್ಲಿ, ಶಹಜಹಾನ್‌ಪುರ ಮತ್ತು ಲಖಿಮ್‌ಪುರ ಖೇರಿಯಲ್ಲಿ ವಧುಗಳು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News