Photos: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ

Janardhan Reddy Grand Daughter Naming Ceremony: ಮಾಜಿ ಸಚಿವ ಜನಾರ್ದನ ರೆಡ್ಡಿಯವರ 2ನೇ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭಾಗಿಯಾಗಿದ್ದಾರೆ.

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಯವರ 2ನೇ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭಾಗಿಯಾಗಿದ್ದಾರೆ. ಶುಕ್ರವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಮೊಮ್ಮಗಳಿಗೆ ಬಿಎಸ್‌ವೈ ಆಶೀರ್ವದಿಸಿ ಶುಭ ಹಾರೈಸಿದರು. ಇದೇ ವೇಳೆ ರೆಡ್ಡಿ ಕುಟುಂಬದಿಂದ ಯಡಿಯೂರಪ್ಪನವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಸಹೋದರರಾದ ಶಾಸಕ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪುಟ್ಟ ಮಗುವಿಗೆ ಶುಭ ಹಾರೈಸಿದರು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶುಭ ಶುಕ್ರವಾರ ಬಹಳ ವಿಶೇಷವಾದ ದಿನ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ 2ನೇ ಮೊಮ್ಮಗಳ ನಾಮಕರಣ ಕಾರ್ಯಕ್ರಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಿತು.

2 /5

ಗಾಲಿ ಜನಾರ್ದನ ರೆಡ್ಡಿಯವರ ಪ್ರೀತಿಯ ಮೊಮ್ಮಗಳಿಗೆ ಸಂಸ್ಕೃತದಲ್ಲಿ ತಾಯಿ ಲಕ್ಷ್ಮಿದೇವಿಯ ಮತ್ತೊಂದು ಹೆಸರು ‘ರಿಧಿರ’ವನ್ನು ಇಡಲಾಗಿದೆ.  ಹೀಗಾಗಿ  ಮೊಮ್ಮಗಳ ಹೆಸರನ್ನು ‘ರಿಧಿರ ರೆಡ್ಡಿ’ ಎಂದು ನಾಮಕರಣ ಮಾಡಲಾಯಿತು.

3 /5

ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭಕ್ಕೆ ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ ಹಾಗೂ ಅನೇಕ ರಾಜಕೀಯ ಮುಖಂಡರು, ಅಭಿಮಾನಿಗಳು, ಸ್ನೇಹಿತರು, ಅಧಿಕಾರಿಗಳು ಮತ್ತು ಗುರು-ಹಿರಿಯರು ಬಂದು ಆಶೀರ್ವದಿಸಿದರು.

4 /5

ಶುಕ್ರವಾರ ಬೆಳಗ್ಗಿನಿಂದ ವಿಶೇಷ ಹೋಮ, ಪೂಜೆ ನೇರವೇರಿಸುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಜನಾರ್ದನ ರೆಡ್ಡಿ ಮೊಮ್ಮಗಳಿಗೆ ನಾಮಕರಣ ಮಾಡಲಾಯಿತು.

5 /5

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಜನಾರ್ದನ ರೆಡ್ಡಿಯವರ 2ನೇ ಮೊಮ್ಮಗಳನ್ನು ಎತ್ತಿಕೊಂಡು ಮುದ್ದಾಡಿದರು. ಪುಟ್ಟ ಲಕ್ಷ್ಮಿ ‘ರಿಧಿರ ರೆಡ್ಡಿ’ಗೆ ಶುಭವಾಗಲಿ ಎಂದು ಹಾರೈಸಿದರು.