ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(AAP)ಕ್ಕೆ ಸ್ಪಷ್ಟ ಬಹುಮತ ದೊರೆತಿದ್ದು, 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯವಾದಂತಾಗಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಹೊರಬಿದ್ದ ಅಂತಿಮ ಫಲಿತಾಂಶದ ಪ್ರಕಾರ, 250 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 134 ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ 104 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. 9 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 3 ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Free Ration: ಪಡಿತರ ಚೀಟಿದಾರರಿಗೆ ಇನ್ಮುಂದೆ ಉಚಿತವಾಗಿ ಸಿಗುತ್ತೆ 150 ಕೆಜಿ ಅಕ್ಕಿ: ಸರ್ಕಾರದಿಂದ ಮಹತ್ವದ ಘೋಷಣೆ
Counting for #DelhiMCDPolls concludes | AAP wins 134 seats, BJP 104, Congress 9 and Independent 3. pic.twitter.com/ddyPO89lFN
— ANI (@ANI) December 7, 2022
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಸ್ಪಷ್ಟ ಬಹುತದ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ಜನರ ನಿರೀಕ್ಷೆಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ, ದೆಹಲಿಯನ್ನು ಸುಧಾರಿಸಲು ಪಕ್ಷಗಳು ಒಗ್ಗೂಡುವಂತೆ ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.
ದೆಹಲಿಯ 250 ವಾರ್ಡ್ಗಳ ಚುನಾವಣೆಗೆ 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಡಿಸೆಂಬರ್ 4ರಂದು ಶೇ.50ಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2017ರಲ್ಲಿ (ಅಂದಿನ) 270 ಮುನ್ಸಿಪಲ್ ವಾರ್ಡ್ಗಳಲ್ಲಿ ಬಿಜೆಪಿ 181 ಸ್ಥಾನಗಳನ್ನು ಗೆದ್ದಿತ್ತು, ಆದರೆ AAP ಕೇವಲ 48 ಸ್ಥಾನ ಗೆದಿದ್ದರೆ, ಕಾಂಗ್ರೆಸ್ 30 ಸ್ಥಾನಗಳನ್ನು ಗಳಿಸಿತ್ತು.
I congratulate the people of Delhi for this win and thank them for bringing change: Delhi CM and AAP national convenor Arvind Kejriwal as the party wins the Delhi MCD elections pic.twitter.com/UOctd9VjVC
— ANI (@ANI) December 7, 2022
ದೆಹಲಿಯ ಪಾಲಿಕೆಯಲ್ಲಿ ಪ್ರಸ್ತುತ 250 ವಾರ್ಡ್ಗಳಿದ್ದು, ಸ್ಪಷ್ಟ ಬಹುಮತ ಪಡೆಯಲು 126 ಸ್ಥಾನಗಳು ಬೇಕು. ಯಾವುದೇ ಎಕ್ಸಿಟ್ ಪೋಲ್ಗಳು ಭವಿಷ್ಯ ನಿಜವಾಗಿಲ್ಲ. ಯಾವುದೇ ಪಕ್ಷ 91 ಸ್ಥಾನಗಳನ್ನು ಗೆಲ್ಲುವುದಿಲ್ಲವೆಂದು ಎಕ್ಸಿಟ್ ಪೋಲ್ ಭವಿಷ್ಯ ಹೇಳಿತ್ತು. ಕಾಂಗ್ರೆಸ್ 9 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಶೇಷವೆಂದರೆ ಈ 9 ಸ್ಥಾನಗಳ ಪೈಕಿ 3 ವಾರ್ಡ್ಗಳನ್ನು 2017ರಲ್ಲಿ ಎಎಪಿ ಮತ್ತು ಒಂದನ್ನು ಬಿಜೆಪಿ ಗೆದ್ದಿತ್ತು. ಸೀಲಾಂಪುರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಕೀಲಾ ಬೇಗಂ ಗೆಲುವು ಸಾಧಿಸಿದರೆ, ಮೀನಾ ದೇವಿ ಮತ್ತು ಗಜೇಂದರ್ ಸಿಂಗ್ ದಾರಾಲ್ ಕ್ರಮವಾಗಿ ಇಸಾಪುರ್ ಮತ್ತು ಮುಂಡ್ಕಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಶೇ.50ರಷ್ಟು ಮತದಾನವಾಗಿತ್ತು
ಡಿಸೆಂಬರ್ 4ರಂದು ನಡೆದ ದೆಹಲಿ ಪಾಲಿಕೆ ಚುನಾವಣೆಗೆ ಮತದಾನ ನಡೆದಿತ್ತು. ಕೇವಲ ಶೇ.50.48ರಷ್ಟು ಅಂದರೆ ಒಟ್ಟು 1.45 ಕೋಟಿ ಅರ್ಹ ಮತದಾರರ ಪೈಕಿ ಕೇವಲ 73 ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಿದ್ದರು.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...