ನೇಪಾಳನ ನೂತನ ಪ್ರಧಾನಿಯಾಗಿ ಪ್ರಚಂಡ ಅಧಿಕಾರ ಸ್ವೀಕಾರ

 

Written by - Zee Kannada News Desk | Last Updated : Dec 26, 2022, 10:42 PM IST
  • ಶೀತಲ್ ನಿವಾಸ್‌ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷ ಭಂಡಾರಿ ಅವರಿಂದ ದಹಲ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು
ನೇಪಾಳನ ನೂತನ ಪ್ರಧಾನಿಯಾಗಿ ಪ್ರಚಂಡ ಅಧಿಕಾರ ಸ್ವೀಕಾರ  title=
file photo

ಕಠ್ಮಂಡು:  ನೇಪಾಳಿ ಕಾಂಗ್ರೆಸ್ ನೇತೃತ್ವದ ಚುನಾವಣಾ ಪೂರ್ವ ಮೈತ್ರಿಯಿಂದ ನಾಟಕೀಯವಾಗಿ ಹೊರನಡೆದು ಪ್ರತಿಪಕ್ಷ ನಾಯಕ ಕೆ.ಪಿ. ಶರ್ಮಾ ಓಲಿನೊಂದಿಗೆ ಕೈಜೋಡಿಸಿ ಒಂದು ದಿನದ ನಂತರ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಡಿಸೆಂಬರ್ 26 ರಂದು ನೇಪಾಳದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 169 ಸದಸ್ಯರ ಬೆಂಬಲವನ್ನು ತೋರಿಸುವ ಪತ್ರವನ್ನು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರಿಗೆ ಸಲ್ಲಿಸಿದ ನಂತರ 68 ವರ್ಷ ವಯಸ್ಸಿನ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷರನ್ನು ಭಾನುವಾರ ದೇಶದ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು.

ಇದನ್ನೂ ಓದಿ :ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ

ಶೀತಲ್ ನಿವಾಸ್‌ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷ ಭಂಡಾರಿ ಅವರಿಂದ ದಹಲ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News