VIDEO: ಹೇರ್ ಡೈ ಬಳಸುವ ಮುನ್ನ ಎಚ್ಚರ! ಮುಖವನ್ನು ಬಲ್ಬ್ ಆಕಾರಕ್ಕೆ ತಂದ ಹೇರ್ ಡೈ

19 ವರ್ಷದ ಎಸ್ಟೇಲ್ ಪ್ರಕಾರ, ಪ್ಯಾರಾಫಿನಿಲೆಂಡಮೈನ್ (PPD) ಎಂದು ಕರೆಯಲ್ಪಡುವ ಕೆಮಿಕಲ್ ಕಾರಣದಿಂದ ಅವರ ಸ್ಥಿತಿ ಹೀಗಾಗಿದೆ. ಎಲ್ಲಾ ರೀತಿಯ ಮೇಕ್ ಅಪ್ ಮತ್ತು ಕೂದಲು ಕಪ್ಪುಗೊಳಿಸುವ ಹೇರ್ ಡೈ PPDಯಲ್ಲಿ ಲಭ್ಯವಿದೆ.

Last Updated : Dec 7, 2018, 03:27 PM IST
VIDEO: ಹೇರ್ ಡೈ ಬಳಸುವ ಮುನ್ನ ಎಚ್ಚರ! ಮುಖವನ್ನು ಬಲ್ಬ್ ಆಕಾರಕ್ಕೆ ತಂದ ಹೇರ್ ಡೈ title=
Pic: Video grab

ಪ್ಯಾರಿಸ್: ಸಾಮಾನ್ಯವಾಗಿ ಅನೇಕ ಜನರು ಕೂದಲನ್ನು ಕಪ್ಪಾಗಿಸಲು ಹೇರ್ ಡೈಗಳ ಮೊರೆ ಹೋಗುತ್ತಾರೆ. ಆದರೆ ಯಾವುದೇ ಹೇರ್ ಡೈ ಬಳಸುವ ಮುನ್ನ ಎಚ್ಚರ! ಓರ್ವ ಫ್ರೆಂಚ್ ಮಹಿಳೆ ಕಳೆದ ಕೆಲವು ದಿನಗಳ ಹಿಂದೆ ಹೇರ್ ಡೈ ಬಳಸಿದ್ದರು. ಆದರೆ ಅದರ ಪರಿಣಾಮ ಆಕೆಯ ಮುಖದ ಮೇಲೆ ಉಂಟಾಗಿದೆ. 

ಫಾಕ್ಸ್ ನ್ಯೂಸ್ ಪ್ರಕಾರ, 19 ವರ್ಷದ ಎಸ್ಟೇಲ್ ಎಂಬುವ ಯುವತಿಯ ಮುಖ ಹೇರ್ ಡೈನಿಂದಾಗಿ ಬಲ್ಬ್ ಆಕಾರ ಪಡೆದಿದೆ. ಆ ಹೇರ್ ಡೈನಲ್ಲಿ  ಪ್ಯಾರಾಫಿನಿಲೆಂಡಮೈನ್ (PPD) ಎಂದು ಕರೆಯಲ್ಪಡುವ ಕೆಮಿಕಲ್ ಕಾರಣದಿಂದ ಅವರ ಸ್ಥಿತಿ ಹೀಗಾಗಿದೆ. ಎಲ್ಲಾ ರೀತಿಯ ಮೇಕ್ ಅಪ್ ಮತ್ತು ಕೂದಲು ಕಪ್ಪುಗೊಳಿಸುವ ಹೇರ್ ಡೈ PPDಯಲ್ಲಿ ಲಭ್ಯವಿದೆ.

ಎಸ್ಟೇಲ್ ಹೇಳುವಂತೆ ಆಕೆ ಬಹಳ ಕಡಿಮೆ ಪ್ರಮಾಣದಲ್ಲಿ ಕೂದಲಿಗೆ ಹೇರ್ ಡೈ ಹಚ್ಚಿದ್ದಾರೆ. ಆದರೆ ಅದರ ಭಯಂಕರವಾದ ಪ್ರತಿಕ್ರಿಯೆ ಬಹಳ ಬೇಗ ಗೊತ್ತಾಗಿದ್ದು, ಹೇರ್ ಡೈ ಮಾಡಿದ ಬಳಿಕ ಆಕೆಯ ಮುಖ ಊದಿಕೊಂಡಿದೆ.

ಮುಖ ಊದಿರುವುದನ್ನು ಕಡಿಮೆ ಮಾಡಲು ಎಸ್ಟೇಲ್ ಔಷಧಿಗಳನ್ನೂ ತೆಗೆದು ಕೊಂಡಿದ್ದಾರೆ. ಅದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಸಾಮಾನ್ಯವಾಗಿ 22 ಇಂಚು ಇದ್ದ ಆಕೆಯ ತಲೆಯ ಗಾತ್ರ ಬೆಳಗಾಗುವಷ್ಟರಲ್ಲಿ 24.8 ಇಂಚುಗಳಷ್ಟಾಗಿತ್ತು.

ಈ ಕಾರಣದಿಂದಾಗಿ ಆಕೆಗೆ ಉಸಿರಾಟದ ತೊಂದರೆಯೂ ಉಂಟಾಗಿದೆ. ಬಳಿಕ ಆಕೆ ತುರ್ತು ನಿಗಾ ಘಟಕದಲ್ಲಿ ದಾಖಲಾಗಬೇಕಾಯಿತು. ವೈದ್ಯರು ಇಡೀ ದಿನ ಆಕೆಯನ್ನು ಅವಲೋಕನ ಮಾಡಿದರು. ಈ ಘಟನೆಯ ನಂತರ ನಾನು ಅಪಘಾತದಲ್ಲಿ ಸತ್ತಿದ್ದರೆ ಒಳ್ಳೆಯದಿತ್ತು ಎಂದು ಎಸ್ಟೇಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮತ್ತಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ ಎಂಬುದು ಆಕೆಯ ಬಯಕೆ.

ತಜ್ಞರ ಪ್ರಕಾರ, ಈ ರೀತಿಯಾಗಿ ಅಲರ್ಜಿಯ ಪ್ರತಿಕ್ರಿಯೆಯು ದೇಹಕ್ಕೆ ಹಲವಾರು ಬಾರಿ ಮಾರಕವಾಗಬಹುದು. ಇದಲ್ಲದೆ, ಅಂತಹ ಸಂದರ್ಭಗಳಲ್ಲಿ ಅಂಗಾಂಶ ಮತ್ತು ಸ್ನಾಯುಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೇ ಎಂದಿದ್ದಾರೆ.

Trending News