Saturn Transit 2023: ಗ್ರಹಗಳ ನಡೆ ಯಾವಾಗ ಬದಲಾಗುತ್ತದೆ ಎಂಬುದು ಕೇವಲ ಜೋತಿಷ್ಯ ಪಂಡಿತರಿಗೆ ಮಾತ್ರ ಗೊತ್ತು. ಯಾರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಯಾರ ಕೆಟ್ಟದಿನಗಳು ಆರಂಭವಾಗಲಿವೆ ಎಂಬುದನ್ನು ಗ್ರಹಗಳೇ ನಿರ್ಧರಿಸುತ್ತವೆ ಎಂಬುದು ಜೋತಿಷ್ಯ ಪಂಡಿತರ ಲೆಕ್ಕಾಚಾರ.
Saturn Transit 2023: ಗ್ರಹಗಳ ನಡೆ ಯಾವಾಗ ಬದಲಾಗುತ್ತದೆ ಎಂಬುದು ಕೇವಲ ಜೋತಿಷ್ಯ ಪಂಡಿತರಿಗೆ ಮಾತ್ರ ಗೊತ್ತು. ಯಾರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಯಾರ ಕೆಟ್ಟದಿನಗಳು ಆರಂಭವಾಗಲಿವೆ ಎಂಬುದನ್ನು ಗ್ರಹಗಳೇ ನಿರ್ಧರಿಸುತ್ತವೆ ಎಂಬುದು ಜೋತಿಷ್ಯ ಪಂಡಿತರ ಲೆಕ್ಕಾಚಾರ. ಜನವರಿ 31ರಂದು ಶನಿ ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದಾದ ಬಳಿಕ ಜನವರಿ 5, 2023 ರಂದು ಆತನ ಉದಯ ನೆರವೇರಲಿದೆ. ಅಂದರೆ, ತನ್ನ ಮೂಲ ತ್ರಿಕೋಣ ರಾಶಿಯಲ್ಲಿ ಶನಿ 33 ದಿನಗಳ ಕಾಲ ದುರ್ಬಲ ಸ್ಥಿತಿಯಲ್ಲಿರಲಿದ್ದಾನೆ ಎಂದರ್ಥ. ಇದರ ಜೊತೆಗೆ ಆತನ ಸ್ವಭಾವ ಕೂಡ ಕಿರಿಕಿರಿಯಿಂದ ಕೂಡಿರುತ್ತದೆ. ಶನಿಯ ಜೊತೆಗೆ ಸೂರ್ಯ ಹಾಗೂ ನಂತರ ಬುಧಗಳು ಈ ರಾಶಿಯಲ್ಲಿ ಬಂದಿರುವ ಕಾರಣ, ಈ ಶನಿ ಅಸ್ತ 5 ರಾಶಿಗಳ ಜಾತಕದವರ ಪಾಲಿಗೆ 33 ದಿನಗಳು ಭಾರಿ ಕಷ್ಟದಿಂದ ಕೂಡಿರಲಿವೆ ಎನ್ನಲಾಗಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಇದನ್ನೂ ಓದಿ-ಹೆಚ್ಚಿನ ಸಂಖ್ಯೆಯ ವಿವಾಹಿತ ಭಾರತೀಯರು ಡೇಟಿಂಗ್ ನಡೆಸುತ್ತಿದ್ದಾರಂತೆ! ದತ್ತಾಂಶ ಬಿಡುಗಡೆ ಮಾಡಿದ ಆಪ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಮೇಷ ರಾಶಿ: ಮೇಷ ಜಾತಕದವರ ದಶಮ ಭಾವದಲ್ಲಿ ಈ ಶನಿಯ ಅಸ್ತ ಸಂಭವಿಸಲಿದೆ. ಇದು ಕರ್ಮ, ಸಾಮಾಜಿಕ ಜೀವನ ಹಾಗೂ ವೃತ್ತಿಪರ ಜೀವನದ ಭಾವ ಎಂದು ಹೇಳಲಾಗುತ್ತದೆ. ಶನಿಯ ಈ ಅಸ್ತದಿಂದ ನಿಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗಲಿವೆ. ವೃತ್ತಿಪರ ಜೀವನದಲ್ಲಿಯೂ ಕೂಡ ಸಾಕಷ್ಟು ಹಲ್ಚಲ್ ಇರಲಿದೆ. ಆರ್ಥಿಕವಾಗಿ ದೊಡ್ಡ ಹಾನಿ ಎದುರಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಹಣ ಹೂಡಿಕೆ ಮಾಡದೆ ಇರುವುದು ಉತ್ತಮ. ವೈವಾಹಿಕ ಜೀವನದಲ್ಲಿಯೂ ಕೂಡ ಸಂಕಷ್ಟಗಳು ತಲೆದೂರಲಿವೆ. ಶನಿವಾರ ಹಣ್ಣುಗಳನ್ನು ದಾನ ಮಾಡಿ.
ಕರ್ಕ ರಾಶಿ: ಕರ್ಕ ರಾಶಿಯವರಿಗೆ 33 ದಿನಗಳು ನೋವಿನಿಂದ ಕೂಡಿರುತ್ತವೆ. ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಬಾಳಸಂಗಾತಿಯೊಂದಿಗೆ ಜಗಳ ಹೆಚ್ಚಾಗಬಹುದು. ಈ ಸಮಯದಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಯಾವುದೇ ಹೊಸ ಕೆಲಸ ಪ್ರಾರಂಭಿಸದಿರುವುದು ಉತ್ತಮ. ಶನಿವಾರದಂದು ಸುಂದರಕಾಂಡವನ್ನು ಪಠಿಸಿ ಮತ್ತು ಹನುಮನನ್ನು ಪೂಜಿಸಿ.
ಸಿಂಹ ರಾಶಿ: ಶನಿಯು ನಿಮ್ಮ ಜಾತಕದ ಆರನೇ ಭಾವದಲ್ಲಿ ಅಸ್ತಮಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯವು ಹದಗೆಡಬಹುದು. ಈಗಾಗಲೇ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರೋಗಗಳ ಮೇಲಿನ ಖರ್ಚು ಅಧಿಕವಾಗಿರುತ್ತದೆ. ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಮಹಿಳೆಯರು ತಮ್ಮ ತಾಯಿಯ ಕಡೆಯಿಂದ ಕೆಲ ಕೆಟ್ಟ ಸುದ್ದಿಗಳನ್ನು ಪಡೆಯಬಹುದು. ಶನಿವಾರದಂದು ಉಪವಾಸ ಮಾಡಿ ಮತ್ತು ಶನಿ ದೇವರನ್ನು ಆರಾಧಿಸಿ.
ವೃಶ್ಚಿಕ ರಾಶಿ: ಈ 33 ದಿನಗಳಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ವ್ಯಾಪಾರದಲ್ಲಿ ಯಾವುದೇ ಹೊಸ ಪ್ರಯೋಗವನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ. ವ್ಯಾಪಾರದ ದೃಷ್ಟಿಯಿಂದ, ನೀವು ಕಡಿಮೆ ದೂರ ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣದಲ್ಲಿ ವಿಶೇಷ ಕಾಳಜಿ ವಹಿಸಿ. ಕುಟುಂಬ ಸದಸ್ಯರೊಂದಿಗೆ ಅರ್ಥಹೀನ ವಾಗ್ವಾದಕ್ಕೆ ಇಳಿಯಬೇಡಿ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
ಕುಂಭ ರಾಶಿ : ಕುಂಭ ರಾಶಿಯವರು ಈ 33 ದಿನಗಳು ತುಂಬಾ ಜಾಗರೂಕರಾಗಿರಬೇಕು. ಶನಿದೇವನು ನಿಮ್ಮ ರಾಶಿಯಲ್ಲಿಯೇ ನೆಲೆಸಿದ್ದಾನೆ ಎಂಬುದನ್ನು ಮರೆಯಬೇಡಿ. ಇಂತಹ ಪರಿಸ್ಥಿತಿಯಲ್ಲಿ, ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಕೆಲಸ ಮಾಡುವವರು, ಕಚೇರಿಯಲ್ಲಿ ಅಧಿಕಾರಿಗಳಿಂದ ಒತ್ತಡವನ್ನು ಎದುರಿಸಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸುವ ಮುನ್ನ ಹಲವು ಬಾರಿ ಯೋಚಿಸಿ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಉದ್ಯಮಿಗಳು ಯಾವುದೇ ರೀತಿಯ ಹೂಡಿಕೆ ಮಾಡಬಾರದು. ಶನಿವಾರದಂದು ಉದ್ದಿನ ಬೇಳೆ ದಾನ ಮಾಡಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)