ಉಪೇಂದ್ರ ಕುಶ್ವಾಹ ಪಕ್ಷದಲ್ಲಿ ಬಂಡಾಯ: ಎನ್ಡಿಎ ಜೊತೆಗಿರುವುದಾಗಿ ಹೇಳಿದ ಶಾಸಕರು

ಇತ್ತೀಚೆಗಷ್ಟೇ ಲೋಕಸಭೆಯಲ್ಲಿನ ಸೀಟು ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್ಎಸ್‌ಪಿ)

Last Updated : Dec 15, 2018, 07:13 PM IST
ಉಪೇಂದ್ರ ಕುಶ್ವಾಹ ಪಕ್ಷದಲ್ಲಿ ಬಂಡಾಯ: ಎನ್ಡಿಎ ಜೊತೆಗಿರುವುದಾಗಿ ಹೇಳಿದ ಶಾಸಕರು title=

ನವದೆಹಲಿ: ಇತ್ತೀಚೆಗಷ್ಟೇ ಲೋಕಸಭೆಯಲ್ಲಿನ ಸೀಟು ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್ಎಸ್‌ಪಿ) ಉಪೇಂದ್ರ ಕುಶ್ವಾಹ ಎನ್ಡಿಎ ತೊರೆದಿದ್ದರು.

ಆದರೆ ಈಗ ಬಿಹಾರದ ವಿಧಾನಸಭೆಯಲ್ಲಿ ಆರ್‌ಎಲ್‌ಎಸ್‌ಪಿ ಶಾಸಕರಾಗಿರುವ ಸುಧಾಂಶು ಶೇಖರ್ ಮತ್ತು ಲಲನ್ ಪಾಸ್ವಾನ್ ಹಾಗೂ ಒಬ್ಬ ಎಂಎಲ್‌ಸಿ ಸಂಜೀವ್ ಸಿಂಗ್ ಶ್ಯಾಮ್‌ ಜಂಟಿ ಅವರು ಆರೋಪಿಸುತ್ತಾ ಕುಶ್ವಾಹ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಮೈತ್ರಿಯನ್ನು ಕಡಿದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ವಿಚಾರದ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ನಿಜವಾದ ರಾಷ್ಟ್ರೀಯ ಲೋಕ ಸಮತಾ ಪಕ್ಷ ತಮ್ಮದೇ ಎನ್ನುವುದನ್ನು ತಿಳಿಸುವುದಾಗಿ ಹೇಳಿದ್ದಾರೆ.

2014ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಿಂದಲೂ ಎನ್ ಡಿಎ ಮೈತ್ರಿಕೂಟದ  ಭಾಗವಾಗಿದ್ದ ಆರ್‌ಎಲ್ಎಸ್‌ಪಿ ಪಕ್ಷವು ಲೋಕಸಭೆಯಲ್ಲಿ ಮೂರು ಸ್ಥಾನ ಹಾಗೂ ವಿಧಾನಸಭೆಯಲ್ಲಿ ಎರಡು ಶಾಸಕ ಸ್ಥಾನವನ್ನು ಹೊಂದಿತ್ತು.ಆದರೆ ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಒಮ್ಮತ ಬರದ ಕಾರಣ ಅವರು ಈಗ ಎನ್ಡಿಎಯಿಂದ  ಹೊರಬಂದಿದ್ದಾರೆ.ಈ ನಿರ್ಧಾರಕ್ಕೆ ಈಗ ಪಕ್ಷದಲ್ಲಿನ ಶಾಸಕರು ಮತ್ತು ಸಂಸದರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

 

Trending News