Cosmetic Surgery : ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಸೌತ್‌ ನಟಿಯರು ಇವರು.!

Famous South Actress Cosmetic Surgery : ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ, ನಟಿಯರು ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಯಾವುದೇ ಹಂತಕ್ಕೆ ಹೋಗುತ್ತಾರೆ ಮತ್ತು ಅವರು ಉತ್ತಮ ಆಹಾರಕ್ರಮವನ್ನು ಮಾತ್ರವಲ್ಲದೆ ಯೋಗ ಮತ್ತು ಜಿಮ್‌ಗಳನ್ನು ಸಹ ಮಾಡುತ್ತಾರೆ.

Famous South Actress Cosmetic Surgery : ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ, ನಟಿಯರು ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಯಾವುದೇ ಹಂತಕ್ಕೆ ಹೋಗುತ್ತಾರೆ ಮತ್ತು ಅವರು ಉತ್ತಮ ಆಹಾರಕ್ರಮವನ್ನು ಮಾತ್ರವಲ್ಲದೆ ಯೋಗ ಮತ್ತು ಜಿಮ್‌ಗಳನ್ನು ಸಹ ಮಾಡುತ್ತಾರೆ. ಅನೇಕ ತಾರೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿಯನ್ನು ಆಶ್ರಯಿಸುತ್ತಾರೆ. ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ದಕ್ಷಿಣದ ತಾರೆಯರನ್ನು ಇಂದು ನಾವು ನಿಮಗೆ ಪರಿಚಯಿಸುತ್ತೇವೆ. ಅವರು ಸುಂದರವಾಗಿ ಕಾಣಲು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. 
 

1 /7

ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವ ನಟಿ ಸಮಂತಾ ರುತ್ ಪ್ರಭು ಅವರು ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ನಟಿ ಮೂಗಿನ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ. ಸಮಂತಾ ಪ್ರಸ್ತುತ ದಕ್ಷಿಣದ ಯಶಸ್ವಿ ನಟಿಯರಲ್ಲಿ ಒಬ್ಬರು.  

2 /7

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಸೌತ್‌ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರು ಲಿಪ್ ಜಾಬ್ ಸರ್ಜರಿ ಮಾಡಿಸಿದ್ದಾರೆ. ನಯನತಾರಾ 9 ಜೂನ್ 2022 ರಂದು ವಿಘ್ನೇಶ್ ಶಿವನ್‌ರನ್ನು ವಿವಾಹವಾದರು ಮತ್ತು ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗೆ ಪೋಷಕರಾಗಿದ್ದಾರೆ.  

3 /7

ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಕೂಡ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಈ ಮಾಹಿತಿಯನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ನೀಡಿದ್ದಾರೆ. ಶ್ರುತಿ ಹಾಸನ್ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ದಿನಗಳಲ್ಲಿ ಅವರು ತಮ್ಮ ಪ್ರೇಮ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ.  

4 /7

ಈ ಪಟ್ಟಿಗೆ ಬಾಹುಬಲಿ ಚಿತ್ರದಲ್ಲಿ ಅಮೋಘ ನಟನೆಯಿಂದ ಎಲ್ಲರ ಮನ ಗೆದ್ದ ನಟಿ ಅನುಷ್ಕಾ ಶೆಟ್ಟಿ ಕೂಡ ಸೇರಿದ್ದಾರೆ. ಅನುಷ್ಕಾ ಪ್ಲಾಸ್ಟಿಕ್ ಸರ್ಜರಿ ಮೂಲಕ ಬೆನ್ನು ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆ ಮಾಡಿಸಕೊಂಡಿದ್ದರು ಎನ್ನಲಾಗಿದೆ.   

5 /7

ಸೌತ್ ಹಾಗೂ ಬಾಲಿವುಡ್ ನಲ್ಲಿ ಛಾಪು ಮೂಡಿಸಿರುವ ನಟಿ ಕಾಜಲ್ ಅಗರ್ವಾಲ್ ತಮ್ಮ ಲುಕ್ ಚೇಂಜ್ ಮಾಡಲು ಮೂಗಿದೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದರು ಎನ್ನಲಾಗಿದೆ.   

6 /7

ಕೀರ್ತಿ ಸುರೇಶ್ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಲಿಪ್ ಜಾಬ್ ಮಾಡಿದ್ದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಮಹಾನಟಿ ಚಿತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.  

7 /7

ಹಲವು ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿರುವ ತ್ರಿಶಾ ಕೃಷ್ಣನ್ ತಮ್ಮ ಸೌಂದರ್ಯದಿಂದಲೇ ಹಲವರ ಮನ ಗೆದ್ದಿದ್ದು, ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ನಟಿ ನೋಸ್ ಜಾಬ್ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿದ್ದಾರೆ ಎನ್ನಲಾಗಿದೆ.