ನವದೆಹಲಿ: ಇಂದು ಪ್ರತಿಯೊಬ್ಬರೂ ಜೀವ ವಿಮೆ ತೆಗೆದುಕೊಳ್ಳಲು ಬಯಸುತ್ತಾರೆ. ಅನಾರೋಗ್ಯದಂತಹ ಸಂಕಷ್ಟದ ಸಂದರ್ಭದಲ್ಲಿ ಇದು ಉಪಯೋಕ್ಕೆ ಬರುತ್ತದೆ ಅನ್ನೋದು ಪ್ರತಿಯೊಬ್ಬರ ಲೆಕ್ಕಾಚಾರ. ಭವಿಷ್ಯದ ಜೀವನಕ್ಕಾಗಿ ಪ್ರತಿಯೊಬ್ಬರೂ ವಿಮೆ ಮಾಡಿಸುವುದು ತುಂಬಾ ಉತ್ತಮ. ವಿಮೆ ಮಾಡಿಸುವುದು ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉತ್ತಮ ಮಾರ್ಗ. ಹೀಗಾಗಿ ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸಬೇಕು.
ನೀವು ಸಹ ಜೀವ ವಿಮೆ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ. ಜೀವ ವಿಮೆ ತೆಗೆದುಕೊಳ್ಳುವುದರಿಂದ ನೀವು ಯಾವ ಪ್ರಯೋಜನ ಪಡೆಯುತ್ತೀರಿ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
1) ಸಂಕಷ್ಟದ ಸಂದರ್ಭದಲ್ಲಿ ನೆರವು: ಪಾಲಿಸಿ ತೆಗೆದುಕೊಂಡ ನಂತರ ನೀವು ಅಪಘಾತಕ್ಕೀಡಾದರೆ ಮತ್ತು ನೀವು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ ವಿಮೆ ನಿಮ್ಮ ನೆರವಿಗೆ ಬರುತ್ತದೆ. ಹೃದಯಾಘಾತ, ಕ್ಯಾನ್ಸರ್ ನಂತಹ ಸಮಸ್ಯೆಗಳಿಗೂ ವಿಮೆ ದೊಡ್ಡ ಮಟ್ಟದ ಪ್ರಯೋಜನ ನೀಡುತ್ತದೆ.
ಇದನ್ನೂ ಓದಿ: PPF ಖಾತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್!
2) ಪಿಂಚಣಿ ಯೋಜನೆ: ಈ ವಿಮಾ ಪಾಲಿಸಿಯಲ್ಲಿ ನಿವೃತ್ತಿಯ ನಂತರ ನಿಮಗೆ ಉಪಯುಕ್ತವಾಗುವಂತೆ ಪಿಂಚಣಿ ಯೋಜನೆಯ ಸೌಲಭ್ಯವನ್ನು ಸಹ ಪಡೆಯುತ್ತೀರಿ. ತೆರಿಗೆ ಕಡಿಮೆ ಮಾಡಲು ಜೀವ ವಿಮೆ ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ. ನಿಮ್ಮ ತೆರಿಗೆ ಉಳಿತಾಯದ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡಬಹುದು ಮತ್ತು ನಿವೃತ್ತಿಯ ನಂತರ ಅದರಿಂದ ಉತ್ತಮ ಆದಾಯ ಪಡೆಯಬಹುದು.
3) ರೈಡರ್ ತೆಗೆದುಕೊಳ್ಳುವ ಮೂಲಕ ಪ್ರೀಮಿಯಂ ಕಡಿಮೆ ಮಾಡಿ: ಇದರಲ್ಲಿ ನೀವು ರೈಡರ್ ತೆಗೆದುಕೊಳ್ಳುವ ಮೂಲಕ ಪ್ರೀಮಿಯಂ ಕಡಿಮೆ ಮಾಡುವ ಸೌಲಭ್ಯ ಸಹ ನೀಡಲಾಗಿದೆ. ರೈಡರ್ ತೆಗೆದುಕೊಂಡ ನಂತರ ನಿಮ್ಮ ಪ್ರೀಮಿಯಂ ಹಣವು ಸ್ವಯಂ ಕಡಿಮೆಯಾಗುತ್ತದೆ. ಇದು ವಿಶೇಷ ಚೇತರಿಗೆ ಮತ್ತು ಪ್ರೀಮಿಯಂ ಕಡಿಮೆ ಮಾಡಬಯಸುವವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಣದಿಂದ ಪಾಲಿಸಿಯ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.
4) ಮೆಚ್ಯೂರಿಟಿಯ ಪ್ರಯೋಜನ: ನೀವು ಮೆಚ್ಯೂರಿಟಿ ಮುಗಿದ ಮೇಲೆ ಪೂರ್ಣ ಹಣ ತೆಗೆದುಕೊಳ್ಳಬೇಕಾದರೆ, ನೀವು ಪಾಲಿಸಿಯಲ್ಲಿ ಯಾವುದೇ ರೀತಿಯ ಅಡೆತಡೆ ಹಾಕಬೇಕಿಲ್ಲ ಮತ್ತು ನೀವು ಪ್ರೀಮಿಯಂ ರೈಡರ್ ತೆಗೆದುಕೊಳ್ಳಬೇಕಾದರೆ, ಪೂರ್ಣ ಪ್ರಮಾಣದ ಪ್ರೀಮಿಯಂನ್ನು ಮುಕ್ತಾಯವಾಗಿ ಪಡೆಯುತ್ತೀರಿ
ಇದನ್ನೂ ಓದಿ: ಎಚ್ಚರ..! ಆಧಾರ್ ಕಾರ್ಡ್‌ನಿಂದ ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಅಕೌಂಟ್!
5) ಸಾಲ ಸೌಲಭ್ಯ: ಈ ಪಾಲಿಸಿಯು ನಿಮಗೆ ಸಾಲ ತೆಗೆದುಕೊಳ್ಳುವ ಸೌಲಭ್ಯವನ್ನು ಸಹ ನೀಡುತ್ತದೆ. ನೀವು ಟರ್ಮ್ ಇನ್ಶೂರೆನ್ಸ್‌ನ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಇದು ನಿಮಗೆ ವಿಮಾ ಮೊತ್ತದ ಸೌಲಭ್ಯವನ್ನು ನೀಡುತ್ತದೆ ಮತ್ತು ನಿಮಗೆ ಅಗತ್ಯವಿರುವ ಸಮಯದಲ್ಲಿ ಸಾಲದ ಸೌಲಭ್ಯವನ್ನು ಸಹ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.