Minugutare Kalpana: ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಶರಪಂಜರ, ಎರಡು ಕನಸು, ಗಂಧದ ಗುಡಿ ಈ ಸಿನಿಮಾಗಳನ್ನ ಮರೆಯೋಕೆ ಸಾಧ್ಯವೇ ಇಲ್ಲ ಬಿಡಿ.ಯಾವತ್ತಿಗೂ ಹಚ್ಚ ಹಸಿರೇ ಬಿಡಿ. ಈ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಮಿನುಗು ತಾರೆ ಕಲ್ಪನಾ ಪಾತ್ರದ ಒಳಗೆ ಹೋಗಿ ಜೀವಿಸಿದ್ದರು. ಯಾವ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸಿ ಜನಮನ ಗೆದ್ದಿದ್ದರು. ಆದ್ರೆ ನಟಿ ಕಲ್ಪನಾ ಅಹಂಕಾರ, ಉದ್ಧಟತನದ ಹೆಂಗಸು ಅಂತ ಎಲ್ಲಾರು ಹೇಳುತ್ತಿದ್ದಿದ್ದು ಯಾಕೆ..? ಅನ್ನೋ ಪ್ರಶ್ನೆ ಇವತ್ತಿಗೂ ಇದೆ.
ಯೆಸ್, ಮಿನುಗು ತಾರೆ ಕಲ್ಪನಾ ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ. ಯಾರಾದ್ರೂ ಒಂದು ಮಾತು ಹೇಳಿದ್ರೆ ಮುಟ್ಟಿ ನೋಡೋ ಹಾಗೇ ವಾಪಾಸ್ ತಿರುಗೇಟು ಕೊಡ್ತಾ ಇದ್ರು ಅನ್ನೋ ಮಾತನ್ನ ಅವರನ್ನ ತುಂಬಾ ಹತ್ತಿರದಿಂದ ಕಂಡ ವ್ಯಕ್ತಿಗಳು ಹೇಳುತ್ತಾರೆ.
ಇದನ್ನೂ ಓದಿ- Aarathi: ಮಂತ್ರಿ ಜೊತೆ ಮದುವೆಯಾಗಲು ಪುಟ್ಟಣ್ಣ ಕಣಗಾಲ್ಗೆ ಕೈ ಕೊಟ್ಟಿದ್ದರು ನಟಿ ಆರತಿ.!?
ಹಾಗಾದ್ರೆ ಹೆಚ್ಚಾಗಿ ಅಹಂಕಾರದ ಹೆಂಗಸು ಅಂತ ಅನಿಸಿಕೊಂಡಿದ್ದು ಯಾಕೆ ಅಂದ್ರೆ....
ವಾಸ್ತವವಾಗಿ, ಕಲ್ಪನಾ ಅವರಿಗೆ ಹತ್ತಿರವಿರುವವರು ಹೇಳುವಂತೆ ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶ ಗಳೆಲ್ಲಾ ಬಹಳ ತೊಂದರೆ ಅನುಭವಿಸಿದ್ದಾರೆ ಅಂತೆ. ಎಷ್ಟೋ ಬಾರಿ ಚರ್ಮದ ಸಮಸ್ಯೆ ನೆನೆದು ಕಣ್ಣೀರು ಹಾಕಿದ್ದಾರಂತೆ. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ ಎಂದು ಹೇಳಲಾಗುತ್ತದೆ.
ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯವೂ ಅವರನ್ನು ಕಾಡುತ್ತಿತ್ತು. ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.
ಇದನ್ನೂ ಓದಿ- Madhuri Dixit : ಈ ಕ್ರಿಕೆಟಿಗನಿಗೆ ಮನಸೋತಿದ್ದರು ಮಾಧುರಿ ದೀಕ್ಷಿತ್, ಶುರುವಾಗುತ್ತಲೇ ಅಂತ್ಯವಾದ ಪ್ರೇಮಕಹಾನಿ!!
ಕಲ್ಪನಾ ಅವರಿಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಬೆಳ್ಳಿಮೋಡ ಚಿತ್ರದ "ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ" ಎಂಬ ಹಾಡೇ ನಟಿ ಕಲ್ಪನಾರವರಿಗೆ 'ಮಿನುಗುತಾರೆ' ಎಂಬ ಬಿರುದನ್ನು ನೀಡಿದ್ದು.ಕನ್ನಡದ 65ಚಿತ್ರಗಳೂ ಸೇರಿದಂತೆ ಒಟ್ಟು 74 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.