Ram Mandir Construction : ಧನ್ನಿಪುರ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಶುಕ್ರವಾರ ಅಂತಿಮ ಒಪ್ಪಿಗೆ ನೀಡಿದೆ. ಬಾಬರಿ ಮಸೀದಿ-ರಾಮ ಜನ್ಮಭೂಮಿ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ಸರ್ಕಾರವು ಅಯೋಧ್ಯೆ ಜಿಲ್ಲೆಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ನೀಡಿತ್ತು, ಅದರಲ್ಲಿ 'ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್' ಟ್ರಸ್ಟ್ ಮಸೀದಿ, ಆಸ್ಪತ್ರೆಯನ್ನು ನಿರ್ಮಿಸುತ್ತದೆ. ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಕೋಣೆ ಮತ್ತು ಗ್ರಂಥಾಲಯ ನಿರ್ಮಾಣವಾಗಲಿದೆ.
ಎಡಿಎ ಮಂಜೂರಾತಿ ನೀಡದ ಕಾರಣ ಮತ್ತು ಭೂ ಬಳಕೆ ಬದಲಾವಣೆಯಿಂದಾಗಿ ಎರಡು ವರ್ಷಕ್ಕೂ ಹೆಚ್ಚು ಕಾಲ ಮಸೀದಿ ನಿರ್ಮಾಣ ವಿಳಂಬವಾಗಿತ್ತು.
ಇಂದು ಈ ಬಗ್ಗೆ ಮಾತನಾಡಿದ ಅಯೋಧ್ಯೆಯ ವಿಭಾಗೀಯ ಆಯುಕ್ತ ಮತ್ತು ಎಡಿಎ ಅಧ್ಯಕ್ಷ ಗೌರವ್ ದಯಾಳ್, 'ಶುಕ್ರವಾರ ನಡೆದ ಮಂಡಳಿ ಸಭೆಯಲ್ಲಿ ನಾವು ಅಯೋಧ್ಯೆ ಮಸೀದಿಯ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಕೆಲವು ಇಲಾಖೆಯ ಔಪಚಾರಿಕತೆಗಳ ನಂತರ, ಅನುಮೋದಿತ ನಕ್ಷೆಗಳನ್ನು ಕೆಲವೇ ದಿನಗಳಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : Manish Sisodia Bail Order : ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಜೈಲೇ ಗತಿ!
ಟ್ರಸ್ಟ್ ಕಾರ್ಯದರ್ಶಿ ಅತಾರ್ ಹುಸೇನ್ ಮಾತನಾಡಿ, ಎಲ್ಲ ಅನುಮೋದನೆ ಪಡೆದ ಬಳಿಕ ಸಭೆ ನಡೆಸಿ ಮಸೀದಿ ನಿರ್ಮಾಣಕ್ಕೆ ಅಂತಿಮ ರೂಪುರೇಷೆ ನೀಡಲಾಗುವುದು. ಏಪ್ರಿಲ್ 21ಕ್ಕೆ ಕೊನೆಗೊಳ್ಳುವ ರಂಜಾನ್ ನಂತರ ಟ್ರಸ್ಟ್ ಸಭೆ ನಡೆಯಲಿದೆ. ಆ ಸಭೆಯಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಆರಂಭಿಸುವ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಹುಸೇನ್, 'ನಾವು ಜನವರಿ 26, 2021 ರಂದು ಮಸೀದಿಯ ಅಡಿಪಾಯವನ್ನು ಹಾಕಿದ್ದೇವೆ, ಅಯೋಧ್ಯೆ ಮಸೀದಿಯ ಅಡಿಪಾಯವನ್ನು ಹಾಕಲು ನಾವು ಈ ದಿನವನ್ನು ಆಯ್ಕೆ ಮಾಡಲು ಕಾರಣವೆಂದರೆ, ಏಳು ದಶಕಗಳ ಹಿಂದೆ ಈ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ಧಾನಿಪುರ ಮಸೀದಿ ಬಾಬರಿ ಮಸೀದಿಗಿಂತ ದೊಡ್ಡದಾಗಿರುತ್ತದೆ. ಧನ್ನಿಪುರ ಮಸೀದಿ ಸ್ಥಳವು ತೀರ್ಥನಾಗ್ರಿಯಲ್ಲಿರುವ ರಾಮ ಮಂದಿರದ ಸ್ಥಳದಿಂದ ಸುಮಾರು 22 ಕಿಮೀ ದೂರದಲ್ಲಿದೆ.
ಅಯೋಧ್ಯಾ ಜಿಲ್ಲೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಮನೆ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಅನುಮೋದನೆಗಾಗಿ ಜುಲೈ 2020 ರಲ್ಲಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು. ನವೆಂಬರ್ 9, 2019 ರಂದು ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಆದೇಶಿಸಿತ್ತು ಮತ್ತು ಮಸೀದಿ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸರ್ಕಾರವನ್ನು ಕೇಳಿದೆ.
ಇನ್ನೊಂದೆಡೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. 2024 ರ ಜನವರಿಯಲ್ಲಿ ದೇವಾಲಯವನ್ನು ಭಕ್ತರಿಗಾಗಿ ತೆರೆಯಲಾಗುವುದು ಎಂದು ದೇವಾಲಯದ ನಿರ್ಮಾಣದ ಕೆಲಸ ಮಾಡುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಅಧಿಕಾರಿಗಳು ಹೇಳಿದ್ದಾರೆ. ದೇಶದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯೂ 2024ರಲ್ಲಿ ನಡೆಯಲಿದೆ.
ಇದನ್ನೂ ಓದಿ : ಭಕ್ತಾಧಿಗಳ ಗಮನಕ್ಕೆ ..! ಇನ್ಮುಂದೆ ʼತಿರುಪತಿ ತಿಮ್ಮಪ್ಪನ ದರ್ಶನʼಕ್ಕೆ ʼಆಧಾರ್ʼ ಕಡ್ಡಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.