ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!

MS Dhoni-Sakshi Singh: ಜಗತ್ತಿನಲ್ಲಿ ಪ್ರೀತಿಯ ಮಾತುಕತೆ ನಡೆದಾಗಲೆಲ್ಲಾ, ಮೊದಲನೆಯದಾಗಿ ನೆನಪಾಗೋದು ಹೀರ್-ರಂಜಾ, ಲೈಲಾ-ಮಜ್ನು, ರೋಮಿಯೋ ಜೂಲಿಯೆಟ್ ಹೀಗೆ ಅನೇಕರು. ಅವರಂತಹ ಅದೆಷ್ಟೋ ಪ್ರೇಮ ಕಥೆಗಳು ಜಗತ್ತಿನಲ್ಲಿ ಉಸಿರಾಡುತ್ತಿವೆ. ಇನ್ನು ಕ್ರಿಕೆಟ್ ಲೋಕದಲ್ಲಿ ಕೂಡ ಅಂತಹದ್ದೇ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಈ ಪ್ರೇಮಕಥೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಸಿಂಗ್ ಧೋನಿ ಅವರಿಗೆ ಸಂಬಂಧಿಸಿದ್ದಾಗಿದೆ.

1 /5

ಕ್ರಿಕೆಟ್ ಲೋಕದಲ್ಲಿ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಈ ಪ್ರೇಮಕಥೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಸಿಂಗ್ ಧೋನಿ ಅವರಿಗೆ ಸಂಬಂಧಿಸಿದ್ದಾಗಿದೆ

2 /5

ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಸಿಂಗ್ ಅವರನ್ನು 2010 ರಲ್ಲಿ ವಿವಾಹವಾದರು. ಆದರೆ ಇದಕ್ಕೂ ಮುನ್ನ ಎಂಎಸ್ ಧೋನಿ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಸಾಕ್ಷಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಅದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಈ ಸಮಯದಲ್ಲಿ ಇಬ್ಬರೂ ಭೇಟಿಯಾದರು.

3 /5

ಆ ಮೊದಲ ಭೇಟಿಯಲ್ಲಿಯೇ ಸಾಕ್ಷಿ ಮೇಲೆ ಪ್ರೀತಿ ಹುಟ್ಟಿತ್ತಂತೆ ಕ್ಯಾಪ್ಟನ್ ಕೂಲ್’ಗೆ. ಆ ಬಳಿಕ ಕೊಂಚ ಸಮಯ ಡೇಟಿಂಗ್ ಮಾಡಿದ್ದ ಜೋಡಿ ಜುಲೈ 4, 2010 ರಂದು ಹಸೆಮಣೆ ಏರಿದರು. ಮದುವೆಯ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರ ವೃತ್ತಿಜೀವನದಲ್ಲಿ ಅನೇಕ ಯಶಸ್ಸುಗಳು ಬಂದವು. ಅಷ್ಟೇ ಅಲ್ಲದೆ, ಧೋನಿ 2011 ರಲ್ಲಿ ವಿಶ್ವಕಪ್ ಕೂಡ ಗೆದ್ದರು.

4 /5

ಧೋನಿಯನ್ನು ವಿಶ್ವದ ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ. ಧೋನಿ ಅನೇಕ ಸೋತ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದಷ್ಟೇ ಅಲ್ಲ, ಧೋನಿಯನ್ನು ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ.

5 /5

ಧೋನಿ ಅವರು ತಮ್ಮ ನಾಯಕತ್ವದಲ್ಲಿ 110 ಏಕದಿನ ಪಂದ್ಯಗಳು, 27 ಟೆಸ್ಟ್ ಮತ್ತು 41 ಟಿ 20 ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. ಡೆತ್ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಲು ಹೆಸರುವಾಸಿಯಾಗಿದ್ದರು ಧೋನಿ.