ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಬಾಬಾ ರಾಮ್ ರಹಿಮ್ ಅಪರಾಧಿ

ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಪತ್ರಕರ್ತ ರಾಮ್ ಚಂದರ್ ಛಠರ್ಪತಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವರನ್ನು ಅಪರಾಧಿಗಳೆಂದು ಘೋಷಿಸಿದೆ.

Last Updated : Jan 11, 2019, 04:16 PM IST
ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಬಾಬಾ ರಾಮ್ ರಹಿಮ್ ಅಪರಾಧಿ title=

ನವದೆಹಲಿ: ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಪತ್ರಕರ್ತ ರಾಮ್ ಚಂದರ್ ಛಠರ್ಪತಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವರನ್ನು ಅಪರಾಧಿಗಳೆಂದು ಘೋಷಿಸಿದೆ.ಇದೇ ಜನವರಿ 17ರಂದು ಶಿಕ್ಷೆ ಪ್ರಮಾಣವನ್ನು ಘೋಷಿಸಲಾಗುವುದು ಎಂದು ಸಿಬಿಐ ಸಲಹೆಗಾರರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಿರ್ಮಲ್ ಸಿಂಗ್, ಕುಲ್ದೀಪ್ ಸಿಂಗ್ ಮತ್ತು ಕೃಷನ್ ಲಾಲ್ ಇತರ ಮೂವರು ಮೂವರು ಆರೋಪಿಗಳಾಗಿದ್ದಾರೆ.ರಾಮ್ ರಹೀಮ್ ಸಿಂಗ್ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. 2002 ರಲ್ಲಿ ನಡೆದ ಪ್ರಕರಣದಲ್ಲಿ ಅವರನ್ನು ಪ್ರಮುಖ ರೂವಾರಿ ಎಂದು ಸಿಬಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.  

ಸಿರ್ಸಾ ಮೂಲದ ಪಂಥದ ಮುಖ್ಯಸ್ಥ ಈಗಾಗಲೇ 2002 ರಲ್ಲಿ ಇಬ್ಬರು ಮಹಿಳಾ ಸಾಧ್ವಿಗಳನ್ನು ಅತ್ಯಾಚಾರ ಮಾಡಿದ್ದಕ್ಕೆ 20 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಪೂರಾ ಸಚ್' ಪತ್ರಿಕೆಯ ರಾಮ್ ಚಂದರ್ ಛತ್ರಪತಿ ಎನ್ನುವ ಪತ್ರಕರ್ತರನ್ನು ಅಕ್ಟೋಬರ್ 2002 ರಲ್ಲಿ ಶೂಟ್ ಮಾಡಿ ಸಾಯಿಸಲಾಯಿತು. ಇದಾದ ನಂತರ ಅನಾಮಧೇಯ ಪತ್ರದ ಮೂಲಕ ಸಿರ್ಸಾದಲ್ಲಿನ ಡೇರಾ ಪ್ರಧಾನ ಕಚೇರಿಯಲ್ಲಿ ಸಾದ್ವಿಗಳನ್ನು ಲೈಂಗಿಕವಾಗಿ ಹೇಗೆ ಬಳಸಿಕೊಳ್ಳಲಾಯಿತು ಎಂದು ಅನಾಮಧೇಯ ಪತ್ರವೊಂದನ್ನು ಪ್ರಕಟಿಸಿದರು.
 

Trending News