Today Viral Video On Internet: ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ. ಆದರೆ ಈ ಕ್ಲಿಪ್ ನೋಡಿದ ಜನರು 'ಪವರ್ ಆಫ್ ದೇಸಿ ದಾರು' ಅಂತೆಲ್ಲಾ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: Janhvi Kapoor: ರೆಟ್ರೊ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!
ಈ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಆತನ ಕಣ್ಣುಗಳಲ್ಲಿ ಸ್ವಲ್ಪವೂ ಭಯ ಕಾಣಿಸುತ್ತಿಲ್ಲ. ಅದರ ಜೊತೆಗೆ ಆ ಕೊಳದ ದಡದಲ್ಲಿ ಮೊಸಳೆಗಳು ಮಲಗಿರುವುದು ಕೂಡ ಕಾಣಿಸುತ್ತಿದೆ. ಮೊಸಳೆಗಳು ಅವನನ್ನು ನೋಡಿದ ತಕ್ಷಣ, ಅವನ ಮೇಲೆ ದಾಳಿ ಮಾಡುವ ಬದಲು, ತಾವೇ ಹೆದರಿ ಅವಸರದಲ್ಲಿ ನೀರಿಗೆ ಹಾರುವುದು ಕೂಡ ಕಾಣಿಸುತ್ತದೆ.
ಕೇವಲ 29 ಸೆಕೆಂಡುಗಳು ಈ ವಿಡಿಯೋ ಎಂಥವರನ್ನೂ ಭಯಗೊಳಿಸುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಕೊಳದಲ್ಲಿ ಮುಂದೆ ಸಾಗುತ್ತಿರುವುದನ್ನು ನಾವು ನೋಡಬಹುದು. ಎರಡು ಮೊಸಳೆಗಳು ಆರಾಮವಾಗಿ ನೆಲದ ಮೇಲೆ ಮಲಗಿಕೊಂಡಿದ್ದು, ಅವುಗಳ ಕಡೆಗೆ ಆತ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಆತ ಕೊಂಚವೂ ಮೊಸಳೆಗಳಿಗೆ ಹೆದರುವುದಿಲ್ಲ, ಧೈರ್ಯದಿಂದ ಮುಂದೆ ಸಾಗುತ್ತಾನೆ. ಆದರೆ ಫುಲ್ ಟೈಟ್ ಆಗಿರುವ ಆತನಿಗೆ ನಡೆಯೋದಕ್ಕೂ ಆಗುತ್ತಿಲ್ಲ ಎಂಬುದು ವಿಡಿಯೋದಲ್ಲಿ ತಿಳಿಯುತ್ತದೆ. ಇನ್ನು ಆತ ಮೊಸಳೆಗಳ ಹತ್ತಿರ ತಲುಪಿದಾಗ ಅದ್ಭುತ ಸಂಭವಿಸುತ್ತದೆ.
ಸಾಮಾನ್ಯವಾಗಿ ಮೊಸಳೆಗಳು ಮನುಷ್ಯರನ್ನು ಕಂಡಾಕ್ಷಣ ದಾಳಿ ನಡೆಸುತ್ತವೆ. ಆದರೆ ಇಲ್ಲಿ ಮಾತ್ರ ಮೊಸಳೆಗಳು ಅವನನ್ನು ನೋಡಿ ಭಯದಿಂದ ನೀರಿಗೆ ಹಾರುತ್ತವೆ. ಮುಂದೇನಾಯಿತು ಗೊತ್ತಿಲ್ಲ. ಆದರೆ ವ್ಯಕ್ತಿಯ ಉತ್ಸಾಹ ನೋಡಿ ‘ಇದುವೆ ನೋಡಿ ಹಳ್ಳಿ ಮದ್ಯದ ಶಕ್ತಿ’ ಎನ್ನುತ್ತಿದ್ದಾರೆ.
ಈ ವೀಡಿಯೊವನ್ನು ಟ್ವಿಟರ್ ಬಳಕೆದಾರ ಅಂಕಿತ್ ಯಾದವ್ ಬೋಜಾ (@Ankitydv92) ಮಾರ್ಚ್ 8 ರಂದು ಪೋಸ್ಟ್ ಮಾಡಿದ್ದಾರೆ. “ಹಳ್ಳಿಗಾಡಿನ ಮದ್ಯದ ಶಕ್ತಿ” ಎಂದು ಪೋಸ್ಟ್ ಹಾಕಿದ್ದಾರೆ. ಇಲ್ಲಿವರೆಗೆ 1700 ಕ್ಕೂ ಹೆಚ್ಚು ಲೈಕ್ಸ್ ಮತ್ತು 46 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಅನೇಕ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಒಬ್ಬ ಬಳಕೆದಾರ “ಇದು ನಮ್ಮದೇ ನಗರ ಮಹಾರಾಜ್‌ಗಂಜ್ ಜಿಲ್ಲೆಯ ದರ್ಜೀನಿಯಾ ತಾಲ್” ಎಂದು ಹೇಳಿದ್ದಾನೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.
ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ...
देशी दारू की ताक़त..! 😄😄🤣 pic.twitter.com/nW8TUiMU0V
— Ankit Yadav Bojha (@Ankitydv92) March 8, 2023
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.