ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಧ್ರುವನಾರಾಯಣ ಕಾಂಗ್ರೆಸ್‍ಗೆ ದೊಡ್ಡ ಶಕ್ತಿಯಂತಿದ್ದರು: ಡಿಕೆಶಿ

ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಬೇರಿಲ್ಲದೆ ಮರ ಹೇಗಿರುವುದಿಲ್ಲವೋ ಅದೇ ರೀತಿ ನಂಬಿಕೆಯಿಲ್ಲದೆ ಬದುಕೂ ಇಲ್ಲ. ಕೊಟ್ಟ ಮಾತು ಉಳಿಸಿಕೊಂಡರಲ್ಲವೇ ಆ ನಂಬಿಕೆಗೆ ಒಂದು ಬೆಲೆ?’ ಎಂದು ಡಿಕೆಶಿ ಹೇಳಿದ್ದಾರೆ.

Written by - Puttaraj K Alur | Last Updated : Mar 13, 2023, 08:01 PM IST
  • ಸರಳ-ಸಜ್ಜನಿಕೆಯ ವ್ಯಕ್ತಿತ್ವದ ಧ್ರುವನಾರಾಯಣ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಕ್ತಿಯಂತಿದ್ದರು
  • ಪಾದರಸದಂತೆ ಕೆಲಸ ಮಾಡಿ ಪಕ್ಷ ಸಂಘಟಿಸುತ್ತಿದ್ದ ಸ್ನೇಹಿತ ಧ್ರುವರನ್ನು ಕಳೆದುಕೊಂಡ ನೋವಿನಲ್ಲಿದ್ದೇನೆ
  • ಪ್ರಜಾಧ್ವನಿ ಯಾತ್ರೆಯಲ್ಲಿ ಅವರಿಲ್ಲದೆ ಏನೋ ಕಳೆದುಕೊಂಡಂತೆ ಅನಿಸುತ್ತಿದೆ ಎಂದ ಡಿಕೆ ಶಿವಕುಮಾರ್
ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಧ್ರುವನಾರಾಯಣ ಕಾಂಗ್ರೆಸ್‍ಗೆ ದೊಡ್ಡ ಶಕ್ತಿಯಂತಿದ್ದರು: ಡಿಕೆಶಿ title=
ಧ್ರುವನಾರಾಯಣ ನೆನೆದ ಡಿ.ಕೆ.ಶಿವಕುಮಾರ್

ಬೆಂಗಳೂರು: ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಧ್ರುವನಾರಾಯಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ಒಂದು ದೊಡ್ಡ ಶಕ್ತಿಯಂತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾಗಮಂಗಲದಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾನಾಡಿರುವ ಅವರು ಅಗಲಿದ ಆತ್ಮೀಯ ಸ್ನೇಹಿತನನ್ನು ಸ್ಮರಿಸಿದ್ದಾರೆ.  

‘ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಬೇರಿಲ್ಲದೆ ಮರ ಹೇಗಿರುವುದಿಲ್ಲವೋ ಅದೇ ರೀತಿ ನಂಬಿಕೆಯಿಲ್ಲದೆ ಬದುಕೂ ಇಲ್ಲ. ಕೊಟ್ಟ ಮಾತು ಉಳಿಸಿಕೊಂಡರಲ್ಲವೇ ಆ ನಂಬಿಕೆಗೆ ಒಂದು ಬೆಲೆ?’ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: “ಮುಸಲ್ಮಾನರು ಗಲಾಟೆ ಮಾಡೋರಲ್ಲ; ಹಿಂದೂಗಳಲ್ಲಿಯೂ ತಲೆಹರಟೆಗಳಿದ್ದಾರೆ”

‘ನಮ್ಮದು ನುಡಿದಂತೆ ನಡೆಯುವ ಪಕ್ಷ. ಕಾಂಗ್ರೆಸ್‌ ಆಡಳಿತದಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳಾಗಿವೆ. ಹಾಗೊಂದು ವೇಳೆ ಆ ರೀತಿ ಅಭಿವೃದ್ಧಿ ಕೆಲಸಗಳು ಆಗದಿದ್ದರೆ, ಇಂದು ನಿಮ್ಮ ಮುಂದೆ ನಿಂತುಕೊಳ್ಳುವ ನೈತಿಕತೆಯೂ ಇರುತ್ತಿರಲಿಲ್ಲ’ವೆಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

‘ಹಳೇ ಮೈಸೂರು ಭಾಗದಲ್ಲಿ ಪಾದರಸದಂತೆ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದ ನನ್ನ ಸ್ನೇಹಿತ ಧ್ರುವನಾರಾಯಣ ಅವರನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಧ್ರುವ ಅವರು ಕಾಂಗ್ರೆಸ್‌ ಪಕ್ಷಕ್ಕೆ ಒಂದು ದೊಡ್ಡ ಶಕ್ತಿಯಂತಿದ್ದರು. ಪ್ರಜಾಧ್ವನಿ ಯಾತ್ರೆಯಲ್ಲಿ ಅವರಿಲ್ಲದೆ ಏನೋ ಕಳೆದುಕೊಂಡಂತೆ ಅನಿಸುತ್ತಿದೆ’ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಶಾಂತ್‌ ಮಾಡಾಳ್‌ರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೋಲಿಸ್‌ ...!

‘ಇಲ್ಲಿಗೆ ಬರುವ ಮುನ್ನ ನಾಲ್ಕಾರು ಹೆಣ್ಣುಮಕ್ಕಳನ್ನು ಭೇಟಿಯಾಗಿ ನಮ್ಮ ಗ್ಯಾರಂಟಿಗಳ ಬಗ್ಗೆ ವಿವರಿಸಿದ್ದೇನೆ. ಗೃಹ ಜ್ಯೋತಿ ಗ್ಯಾರಂಟಿಯಡಿ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಲಕ್ಷ್ಮಿ ಗ್ಯಾರಂಟಿಯಡಿ ಗೃಹಿಣಿಯರಿಗೆ ಮಾಸಿಕ 2000 ರೂ. ಹಾಗೂ ಅನ್ನ ಭಾಗ್ಯ ಗ್ಯಾರಂಟಿಯಡಿ ಬಡ ಕುಟುಂಬದ ಪ್ರತೀ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಲಿದ್ದೇವೆ’ ಎಂದು ಡಿಕೆಶಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News