ಶೀಘ್ರದಲ್ಲೇ ಬೃಹಸ್ಪತಿಯ ಮನೆಯಲ್ಲಿ 'ಪವರ್ಫುಲ್ ತ್ರಿಗ್ರಹಿ ಯೋಗ' ನಿರ್ಮಾಣ 3 ಜಾತಕದವರ ಮೇಲೆ ಅಪಾರ ಧನವೃಷ್ಟಿ!

Trigrahi Yog In Pisces: ವೈದಿಕ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗುರುವಿನ ರಾಶಿಯಾಗಿರುವ ಮೀನ ರಾಶಿಯಲ್ಲಿ ಪವರ್ಫುಲ್ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಈ ಯೋಗ ಮೂರು ರಾಶಿಗಳ ಜಾತಕದವರಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಇದರಿಂದ ಈ ಜಾತಕದವರ ಮೇಲೆ ಅಪಾರ ಧನವೃಷ್ಟಿಯಾಗಲಿದೆ. ಅದೃಷ್ಟವಂತ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 
 

Powerful Trigrahi Yog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳು ತಮ್ಮ ತಮ್ಮ ರಾಶಿಯನ್ನು ಪರಿವರ್ತಿಸುವ ಮೂಲಕ ಮತ್ತು ಮೈತ್ರಿ ಮಾಡಿಕೊಳ್ಳುವ ಮೂಲಕ   ಶುಭ ಹಾಗೂ ಅಶುಭ ಯೋಗಗಳನ್ನು ನಿರ್ಪಿಸುತ್ತಲೇ ಇರುತ್ತವೆ.  ಪ್ರಸ್ತುತ ಶೀಘ್ರದಲ್ಲೇ ಬುಧ, ಗುರು ಮತ್ತು ಸೂರ್ಯ ದೇವನ ಸಂಯೋಗವು ಮೀನ ರಾಶಿಯಲ್ಲಿ ರೂಪುಗೊಳ್ಳಲಿದೆ. ಇದರಿಂದಾಗಿ ಮೀನ ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಈ ಕಾರಣದಿಂದಾಗಿ 3 ರಾಶಿಗಳ ಜನರು ಧನ-ಸಂಪತ್ತು ಪಡೆದು ಪ್ರಗತಿಯನ್ನು ಸಾಧಿಸಲಿದ್ದಾರೆ. ಆ ಅದೃಷ್ಟವಂತ 3 ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Sun Transit March 2023: ಮುಂದಿನ 1 ತಿಂಗಳವರೆಗೆ ಈ 5 ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಕರ್ಕ ರಾಶಿ-ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುವುದು ಕರ್ಕ ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಅದೃಷ್ಟ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ನೀವು ಭಾರಿ ಅದೃಷ್ಟವನ್ನು ಪಡೆಯಬಹುದು. ಇದರೊಂದಿಗೆ ಸೂರ್ಯನು ಸಂಪತ್ತಿನ ಅಧಿಪತಿಯೂ ಹೌದು. ಹೀಗಾಗಿ ಈ ಸಮಯವು ಕೆಲಸ-ವ್ಯವಹಾರಗಳಿಗೆ ಉತ್ತಮವಾಗಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು. ಇದರೊಂದಿಗೆ, ನೀವು ಈ ಸಮಯದಲ್ಲಿ ವ್ಯಾಪಾರ-ಸಂಬಂಧಿತ ಪ್ರವಾಸಗಳನ್ನು ಕೈಗೊಳ್ಳಬಹುದು, ಅದು ನಿಮ್ಮ ಪಾಲಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರುತ್ತದೆ.  

2 /3

ವೃಷಭ ರಾಶಿ-ತ್ರಿಗ್ರಹಿ ಯೋಗ ವೃಷಭ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಲಾಭ ಮತ್ತು ಆದಾಯದ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ಕೆಲಸ-ವ್ಯವಹಾರಗಳು ಉತ್ತಮವಾಗಿರಲಿವೆ. ಧನಲಾಭವೂ ಇರಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಘನತೆ ಗೌರವ ಕೂಡ ಪ್ರಾಪ್ತಿಯಾಗಲಿದೆ . ಇದರೊಂದಿಗೆ ಸಂತಾನ ಬಯಸುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.  ಹಳೆಯ ಹೂಡಿಕೆಯಿಂದಲೂ ನಿಮಗೆ ಲಾಭ ಸಿಗಲಿದೆ. ಅಲ್ಲದೆ, ಈ ಅವಧಿಯಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು.  

3 /3

ಮಿಥುನ ರಾಶಿ- ತ್ರಿಗ್ರಹಿ ಯೋಗದ ರಚನೆಯು ನಿಮಗೆ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ದಶಮ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ನೌಕರಸ್ಥರಿಗೆ  ಬಡ್ತಿ, ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ. ಇದರೊಂದಿಗೆ ಕೆಲಸ-ವ್ಯವಹಾರದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಲಿದೆ. ಸಂತೋಷ ಮತ್ತು ಆರ್ಥಿಕತೆಯಲ್ಲಿ  ಹೆಚ್ಚಳವಾಗಬಹುದು. ರಾಜಕೀಯ ಅಥವಾ ಸಾಮಾಜಿಕ ಕಾರ್ಯಕರ್ತರು ಕೂಡ. ಪ್ರಗತಿ ಹೊಂದಬಹುದು. ಅವರಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ.  ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪ್ರಯೋಜನಗಳ ಬಲವಾದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಪ್ರಾರಂಭಿಸಿದ ಕೆಲಸ, ವ್ಯವಹಾರವು ದೀರ್ಘಾವಧಿಯ ಲಾಭವನ್ನು ನಿಮಗೆ ನೀಡಲಿದೆ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಃತಿಯನ್ನು ಪುಷ್ಟಿಕರಿಸುವುದಿಲ್ಲ)