Virat Kohli : RCB ಮಹಿಳಾ ತಂಡದ ಗೆಲುವಿಗೆ ರೂವಾರಿಯಾದ್ರು ಕಿಂಗ್‌ ಕೊಹ್ಲಿ!

Virat Kohli : ಸತತ 5 ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ RCB ಮಹಿಳಾ ತಂಡಕ್ಕೆ ವಿರಾಟ್ ಕೊಹ್ಲಿ ಧೈರ್ಯ ಹಾಗೂ ಬೆಂಬಲ ಸೂಚಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ನಂತರ ಗುಜರಾತ್ ನಿಂದ ನೇರವಾಗಿ ಮುಂಬೈ ಗೆ ಹಾರಿದ ವಿರಾಟ್ ನಮ್ಮ RCB ಮಹಿಳಾ ತಂಡವನ್ನು ಭೇಟಿಯಾಗಿದ್ದರೆ. 

Written by - Nandish A.Huded | Edited by - Chetana Devarmani | Last Updated : Mar 16, 2023, 12:47 PM IST
  • ಸತತ 5 ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ RCB
  • RCB ಮಹಿಳಾ ತಂಡಕ್ಕೆ ವಿರಾಟ್ ಕೊಹ್ಲಿ ತುಂಬಿದ್ರು ಧೈರ್ಯ
  • ಕಿಂಗ್‌ ಕೊಹ್ಲಿ ಹೇಳಿದ ಆ ಒಂದು ಘಟನೆಯೇ ಗೆಲುವಿಗೆ ಕಾರಣವಾಯ್ತು

Trending Photos

Virat Kohli : RCB ಮಹಿಳಾ ತಂಡದ ಗೆಲುವಿಗೆ ರೂವಾರಿಯಾದ್ರು ಕಿಂಗ್‌ ಕೊಹ್ಲಿ!   title=
Virat Kohli

Virat Kohli : ಸತತ 5 ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ RCB ಮಹಿಳಾ ತಂಡಕ್ಕೆ ವಿರಾಟ್ ಕೊಹ್ಲಿ ಧೈರ್ಯ ಹಾಗೂ ಬೆಂಬಲ ಸೂಚಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ನಂತರ ಗುಜರಾತ್ ನಿಂದ ನೇರವಾಗಿ ಮುಂಬೈ ಗೆ ಹಾರಿದ ವಿರಾಟ್ ನಮ್ಮ RCB ಮಹಿಳಾ ತಂಡವನ್ನು ಭೇಟಿಯಾಗಿದ್ದರೆ. RCB ಮಹಿಳಾ ತಂಡ ತಮ್ಮ ಮೊದಲ ಸೀಸನ್ ನಲ್ಲಿ ಆಡಿದ ಮೊದಲ ಐದೂ ಪಂದ್ಯಗಳನ್ನು ಸೋತು ಅಭಿಮಾನಿಗಳಿಗೆ ಬೇಸರ ಮೂಡುವಂತೆ ಮಾಡಿತ್ತು. ಸೋತು ಸುಣ್ಣವಾಗಿದ್ದ ಮಹಿಳಾ ತಂಡಕ್ಕೆ  ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಲು ಟೀಮ್ ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿ ವಿರಾಟ್ ಕೊಹ್ಲಿ ಅವರನ್ನು ಆಹ್ವಾನಿಸಿ  ಮಾತನಾಡಿಸಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Royal Challengers Bangalore (@royalchallengersbangalore)

 

ವಿರಾಟ್ ಕೊಹ್ಲಿ 7 ರಿಂದ 8 ನಿಮಿಷ ಮಾತನಾಡಿ ತಮ್ಮ ಸೋಲಿನಿಂದ ಹೀಗೆ ಧೈರ್ಯಗೆಡದೆ ಹೇಗೆ ಆಡುತ್ತಿದ್ದರು ಹಾಗೂ RCB ಪುರುಷರ ತಂಡವು ಕೂಡ 2019ರಲ್ಲಿ ತಾವು ಆಡಿದ ಸತತ 6 ಪಂದ್ಯಗಳಲ್ಲಿ ಸೋತು ಬೇಸರವಾಗಿದ್ದನ್ನು ನೆನೆದರು. "ನಾನು ಮತ್ತು ABD ಒಬ್ಬರಿಗೊಬ್ಬರನ್ನು ನೋಡಿಕೊಂಡೆವು ನಾವಿಬ್ಬರೂ ಆಡಿದ 15 ವರ್ಷಗಳಲ್ಲಿ ಯಾವತ್ತೂ ಕೂಡ ಸತತ 6 ಪಂದ್ಯಗಳನ್ನು ಸೋತಿರಲೇ ಇಲ್ಲ. ಅವೆಲ್ಲ ಆಗುತ್ತಿರುತ್ತವೆ ಆ ಸನ್ನಿವೇಶ ಈಗ ನಿಮಗೆದುರಾಗಿದೆ. ನಾನು ಯಾಕೆ ಇಲ್ಲಿಗೆ ಬಂದಿರುವೆ ಎಂದರೆ ನಿಮಗೆ ಇನ್ನೂ ಅವಕಾಶವಿದೆ. ಇನ್ನೂ ಕೂಡ ನೀವು ಪ್ರಯತ್ನ ಪಟ್ಟರೆ ಚೆನ್ನಾಗಿ ಆಡಿ ಕಪ್ ಗೆಲ್ಲುವ ಸಾಧ್ಯತೆಯಿದೆ. ಅದು ನಿಮ್ಮ ಆತ್ಮವಿಶ್ವಾಸದ ಮೇಲೆ ನಿಂತಿದೆ" ಎಂದು ಹೇಳಿದರು. 

ಇದನ್ನೂ ಓದಿ:  10 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್! ಈತನ ಬೌಲಿಂಗ್ ಸ್ಪೀಡ್ ಗಂಟೆಗೆ 140 ಕಿ.ಮೀ!

"ಇದು ನಿಮ್ಮ ಮೊದಲ ಸೀಸನ್ ಇದನ್ನ ನೀವು ಗೆದ್ದರೆ ಯಾರು ನಿಮ್ಮನ್ನ ಮರೆಯಲ್ಲ. ಹಾಗೆ ಮಾಡುವುದು ನಿಮ್ಮ ಕೈಯಲ್ಲಿದೆ ಹಾಗೂ ನಿಮಗೆ ಇದು ಮುಂಬರುವ ಸೀಸನ್‌ಗೆ ಆತ್ಮವಿಶ್ವಾಸ ತುಂಬುತ್ತದೆ. ನೀವು ನಿಮ್ಮ 100 ಕ್ಕೆ 100 ಶ್ರಮ ಹಾಕಿ ಪ್ರಯತ್ನಪಟ್ಟಿದ್ದೀರಿ ಎನಿಸಬೇಕು. ಅದು ನೀವು ಆಡುವ ಮುಂದಿನ ಪಂದ್ಯಗಳಲ್ಲಿ ನಿಮ್ಮ ಫಲಿತಾಂಶವನ್ನು ತಿಳಿಸುತ್ತದೆ" ಎಂದರು.

"ಏಕೆಂದರೆ ಅಭಿಮಾನಿಗಳು ನಮ್ಮನ್ನು ಅಷ್ಟು ನಂಬಿದ್ದಾರೆ, ಅದನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಅವರಿಗೆ ಕಪ್ ಗೆದ್ದುಕೊಡುತ್ತೆವೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಎಲ್ಲಾ ಪರಿಶ್ರಮವನ್ನು ಅವರಿಗಾಗಿ ಮಾಡಲೇ ಬೇಕು, ತಂಡದ ಗೆಲುವಿಗಾಗಿ ಪ್ರಯತ್ನ ಪಡಲೇಬೇಕು" ಎಂದರು. ಇದರ ಜೊತೆ ಇನ್ನೂ ಹಲವಾರು ವಿಷಯಗಳನ್ನು ಮಾತನಾಡಿ ಮಹಿಳಾ ತಂಡಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಇದಾದ ನಂತರ RCB ಮಹಿಳೆಯರ ತಂಡ ತಮ್ಮ 6 ನೇ ಪಂದ್ಯದಲ್ಲಿ UP warrier's ವಿರುಧ್ದ ಭರ್ಜರಿ ಜಯಗಳಿಸಿದೆ. ಇದೇ ಕಾರಣಕ್ಕೆ RCB ಮಹಿಳಾ ತಂಡದ ಈ ಗೆಲುವಿಗೆ ವಿರಾಟ್‌ ಕೊಹ್ಲಿ ಕಾರಣರಾದರು ಎಂದರೆ ತಪ್ಪಾಗಲಾರದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News