ಬೆಂಗಳೂರು: ಬಿಜೆಪಿಯಿಂದ ಶೋಷಣೆಗೆ ಒಳಗಾದ ದಲಿತರಿಗೆ ಕಾಂಗ್ರೆಸ್ ಪಕ್ಷವೇ ಭರವಸೆ ಎಂದು ಕಾಂಗ್ರೆಸ್ ಬುಧವಾರ ಟ್ವೀಟ್ ಮಾಡಿತ್ತು. ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಎಸ್ ಪಕ್ಷಕ್ಕೆ ದಲಿತರ ನೆನಪಾಗಿದೆ’ ಎಂದು ತಿರುಗೇಟು ನೀಡಿದೆ.
#DalitVirodhiCongress ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷಕ್ಕೆ ದಲಿತರ ನೆನಪಾಗಿದೆ. ದಲಿತರು ಈ ಭಾರಿ ನಿಮ್ಮನ್ನು ಸೋಲಿಸುತ್ತಾರೆಂಬ ಸಮೀಕ್ಷೆ ಆಧರಿಸಿ ಕೋಲಾರ ಬಿಟ್ಟು ಓಡಿದ ಸಿದ್ದರಾಮಯ್ಯವರೇ, ದಲಿತ ನಾಯಕರನ್ನು ಸೋಲಿಸಿದ ನೀವು ಯಾವ ಮುಖವಿಟ್ಟುಕೊಂಡು ದಲಿತರಲ್ಲಿ ಓಟು ಕೇಳುತ್ತೀರಿ?’ ಎಂದು ಪ್ರಶ್ನಿಸಿದೆ.
ದಲಿತ ವಿರೋಧಿ @INCKarnataka ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿ, ಅವರ ಶವ ಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಗುರುತಿಸಿದ ಪ್ರಧಾನಿ ಶ್ರೀ @narendramodi ನೇತೃತ್ವದ ಸರ್ಕಾರ ಪಂಚತೀರ್ಥ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ. #DalitVirodhiCongress
2/4— BJP Karnataka (@BJP4Karnataka) March 22, 2023
‘ದಲಿತ ವಿರೋಧಿ ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿ, ಅವರ ಶವ ಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಗುರುತಿಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪಂಚತೀರ್ಥ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: "ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು!!"
‘ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಶ್ರೀನಿವಾಸ್ ಪ್ರಸಾದ್, ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಿತ್ತು. ಅಖಂಡ ಶ್ರೀನಿವಾಸಮೂರ್ತಿ ಮೇಲೆ ದಾಳಿ ನಡೆದಾಗಲು, ತುಷ್ಟೀಕರಣದ ಕಾರಣದಿಂದ ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ’ವೆಂದು ಬಿಜೆಪಿ ಟೀಕಿಸಿದೆ.
ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡ @INCKarnataka ಪಕ್ಷವು ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ನಿರಾಕರಣೆ ಮಾಡಿತ್ತು. ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಿಸಿದ್ದು, ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. #DalitVirodhiCongress
4/4— BJP Karnataka (@BJP4Karnataka) March 22, 2023
‘ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷವು ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ನಿರಾಕರಣೆ ಮಾಡಿತ್ತು. ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಿಸಿದ್ದು, ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ’ವೆಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ನಿಂದ ದಲಿತರಿಗೆ ಭರವಸೆಯ ಬೆಳಕು
‘ಚಾತುರ್ವರ್ಣದಲ್ಲಿ ನಂಬಿಕೆ ಇಟ್ಟಿರುವ ಮನುವಾದಿ, #ದಲಿತವಿರೋಧಿಬಿಜೆಪಿ ಸರ್ಕಾರಲ್ಲಿ ದಲಿತರ ಪಾಲಿನ SCP/TSP ಅನುದಾನ ಕಡಿತ, ದಲಿತರ ಮೇಲಿನ ದೌರ್ಜನ್ಯ ಗಣನೀಯ ಏರಿಕೆ, ದಲಿತರಿಗೆ ಪ್ರಾತಿನಿಧ್ಯವಿಲ್ಲ, ದಲಿತ ನಾಯಕರ ಮೇಲೆ ಸುಳ್ಳು ಪ್ರಕರಣ ದಾಖಲು. ಕಾಂಗ್ರೆಸ್ ದಲಿತರಿಗೆ ಭರವಸೆಯ ಬೆಳಕನ್ನು ಹಿಂದೆಯೂ ನೀಡಿದೆ, ಮುಂದೆಯೂ ನೀಡಲಿದೆ’ ಎಂದು ‘ಕೈ’ ಪಕ್ಷವು ಟ್ವೀಟ್ ಮಾಡಿತ್ತು.
ಇದನ್ನೂ ಓದಿ: ಉತ್ತರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಬದ್ಧತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.