DA Hike ಬಳಿಕ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆ ಶೇ.30ಕ್ಕೆ ತಲುಪುವುದು ಆಲ್ಮೋಸ್ಟ್ ಕನ್ಫರ್ಮ್!

7th Pay Commission Update: ತುಟ್ಟಿಭತ್ಯೆ ಹೆಚ್ಚಳದ ಬಳಿಕ ಇದೀಗ ಕೇಂದ್ರ ನೌಕರರಿಗೆ ಮತ್ತೊಂದು ಉಡುಗೊರೆ ಸಿಗಲಿದೆ. ಕೇಂದ್ರ ಸರ್ಕಾರ ಇದೀಗ ಸರ್ಕಾರಿ ನೌಕರರ ಎಚ್‌ಆರ್‌ಎ ಅಂದರೆ ಮನೆ ಬಾಡಿಗೆ ಭತ್ಯೆಯನ್ನೂ ಹೆಚ್ಚಿಸಲು ಹೊರಟಿದೆ. ಈ ಕುರಿತು ಸರಕಾರದಿಂದ ಪ್ರಕಟಣೆ ಹೊರಡಿಸಲಾಗಿದೆ. ನಿಮ್ಮ HRA ಯಾವಾಗ ಹೆಚ್ಚಾಗುತ್ತದೆ ಎಂದು ದಿನಾಂಕವನ್ನು ಸಹ ಘೋಷಿಸಲಾಗಿದೆ.  

Written by - Nitin Tabib | Last Updated : Mar 27, 2023, 03:46 PM IST
  • ಜುಲೈ 2021 ರಲ್ಲಿ, ಕೇಂದ್ರ ನೌಕರರ ತುಟ್ಟಿಭತ್ಯೆ ಶೇ. 25ರ ಗಡಿ ದಾಟಿದಾಗ,
  • ಸರ್ಕಾರವು ಕೊನೆಯ ಬಾರಿಗೆ HRA ಅನ್ನು ಪರಿಷ್ಕರಿಸಿತ್ತು,
  • ನಂತರ ನೌಕರರ ಸಂಬಳದಲ್ಲಿ ಬಂಪರ್ ಹೆಚ್ಚಳವನ್ನು ಗಮನಿಸಲಾಗಿತ್ತು.
DA Hike ಬಳಿಕ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆ  ಶೇ.30ಕ್ಕೆ ತಲುಪುವುದು ಆಲ್ಮೋಸ್ಟ್ ಕನ್ಫರ್ಮ್! title=
ತುಟ್ಟಿಭತ್ಯೆ ಬಳಿಕ ಇದೀಗ ಈ ಭತ್ಯೆ ಹೆಚ್ಚಳದ ಸರದಿ!

7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಡಿಎ ಹೆಚ್ಚಳದ ನಂತರ ಇದೀಗ ಉದ್ಯೋಗಿಗಳ ಎಚ್ ಆರ್ ಎ ಅಂದರೆ ಮನೆಬಾಡಿಗೆ ಭತ್ಯೆ ಕೂಡ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದ್ದು, ಅದರ ನಂತರ ಇದೀಗ ನೌಕರರಿಗೆ ಶೇ.42 ದರದಲ್ಲಿ ತುಟ್ಟಿಭತ್ಯೆ ಸಿಗಲಿದೆ ಎಂಬ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದನ್ನು ಹೆಚ್ಚಿಸಿದ ನಂತರ ಸರ್ಕಾರ ಮನೆ ಬಾಡಿಗೆ ಭತ್ಯೆಯನ್ನೂ ಹೆಚ್ಚಿಸಲು ಹೊರಟಿದೆ. ಎಚ್‌ಆರ್‌ಎ ಕುರಿತು ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ.

HRA ಅನ್ನು ಯಾವಾಗ ಪರಿಷ್ಕರಿಸಲಾಗುತ್ತದೆ?
ಮೋದಿ ಸರಕಾರ ಕೂಡ ಶೀಘ್ರವೇ ಎಚ್‌ಆರ್‌ಎ ಹೆಚ್ಚಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. 2023-24 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಸರ್ಕಾರವು HRA ಅನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ. ತುಟ್ಟಿಭತ್ಯೆಯು ಶೇಕಡಾ 50 ರ ಮಟ್ಟವನ್ನು ತಲುಪಿದರೆ, ಆ ಸಂದರ್ಭದಲ್ಲಿ ಸರ್ಕಾರವು HRA ಅನ್ನು ಪರಿಷ್ಕರಿಸಬಹುದು. ಈ ವೇಳೆ ನೌಕರರು ಪಡೆಯುವ ಡಿಎ ಶೇ.42ರಷ್ಟಿದೆ.

ಇದನ್ನೂ ಓದಿ-ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!

ಜುಲೈ 2021 ರಲ್ಲಿ ಕೊನೆಯ ಬಾರಿಗೆ ಪರಿಷ್ಕರಿಸಲಾಗಿತ್ತು
ಜುಲೈ 2021 ರಲ್ಲಿ, ಕೇಂದ್ರ ನೌಕರರ ತುಟ್ಟಿಭತ್ಯೆ ಶೇ. 25ರ ಗಡಿ ದಾಟಿದಾಗ, ಸರ್ಕಾರವು ಕೊನೆಯ ಬಾರಿಗೆ HRA ಅನ್ನು ಪರಿಷ್ಕರಿಸಿತ್ತು, ನಂತರ ನೌಕರರ ಸಂಬಳದಲ್ಲಿ ಬಂಪರ್ ಹೆಚ್ಚಳವನ್ನು ಗಮನಿಸಲಾಗಿತ್ತು. ಪ್ರಸ್ತುತ, DA 50 ಪ್ರತಿಶತವನ್ನು ತಲುಪಿದಾಗ, ಸರ್ಕಾರವು ಮತ್ತೊಮ್ಮೆ HRA ಅನ್ನು ಪರಿಷ್ಕರಿಸಬಹುದು.

ಇದನ್ನೂ ಓದಿ-DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ

ಎಚ್‌ಆರ್‌ಎ ಶೇ.3ರಷ್ಟು ಹೆಚ್ಚಾಗಲಿದೆ
ಈ ಬಾರಿ ಸರ್ಕಾರ ಮನೆ ಬಾಡಿಗೆ ಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಸದ್ಯ ನೌಕರರು ಶೇ.27ರಷ್ಟು ಎಚ್‌ಆರ್‌ಎ ಪಡೆಯುತ್ತಿದ್ದು, ಅದು ಶೇ.30ಕ್ಕೆ ಏರಿಕೆಯಾಗಲಿದೆ. ಸರಕಾರದಿಂದ ಬಂದಿರುವ ಮಾಹಿತಿ ಪ್ರಕಾರ ನೌಕರರ ತುಟ್ಟಿ ಭತ್ಯೆ ಶೇ.50ಕ್ಕೆ ಏರಿದಾಗ ಇದು ಶೇ.30 ಆಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News