ಮುಂಬೈನಲ್ಲಿ ನಡೆಯುತ್ತಿರುವ ಲಕ್ಮೆ ಫ್ಯಾಷನ್ ವೀಕ್ ನಲ್ಲಿ ಅನಿಲ್ ಕಪೂರ್ ಮತ್ತು ಜಾಹ್ನವಿ ಕಪೂರ್ ಜೊತೆಯಲ್ಲೇ ರಾಂಪ್ ವಾಕ್ ಮಾಡಿದರು.
ಮುಂಬೈನಲ್ಲಿ ನಡೆಯುತ್ತಿರುವ ಲಕ್ಮೆ ಫ್ಯಾಷನ್ ವೀಕ್ ನಲ್ಲಿ ಅನಿಲ್ ಕಪೂರ್ ಮತ್ತು ಜಾಹ್ನವಿ ಕಪೂರ್ ಜೊತೆಯಲ್ಲೇ ರಾಂಪ್ ವಾಕ್ ಮಾಡಿದರು. ಅನಿಲ್ ಕಪೂರ್ ಇಂಡೋ-ವೆಸ್ಟರ್ನ್ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡರೆ, ಜಾಹ್ನವಿ ಕಪ್ಪು ಉಡುಗೆ ಚಿನ್ನದ ಆಭರಣ ತೊಟ್ಟು ಕಾಣಿಸಿಕೊಂಡರು. ಇವರಿಬ್ಬರಿಗೂ ರಣವೀರ್ ಸಿಂಗ್ ಸಾಥ್ ನೀಡಿದರು.
ಅನಿಲ್ ಕಪೂರ್ ಮತ್ತು ಜಾಹ್ನವಿ ಕಪೂರ್ ರಾಂಪ್ ವಾಕ್ ಮಾಡಿದಾಗ ರಣವೀರ್ ಸಿಂಗ್ ರಾಂಪ್ ನಲ್ಲಿ ಬಂದು ಅನಿಲ್ ಕಪೂರ್ ಅವರನ್ನು ಸ್ವಾಗತಿಸಿದರು.
ರಾಂಪ್ ವಾಕ್ ಬಳಿಕ ಅನಿಲ್ ಕಪೂರ್, ರಣವೀರ್ ಸಿಂಗ್ ಮಸ್ತ್ ಡಾನ್ಸ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ರಣವೀರ್ ಸಿಂಗ್ ಡಾನ್ಸ್ ಮಾಡಿದ ವಿಡಿಯೋ ಈಗ Instagram ನಲ್ಲಿ ವೈರಲ್ ಆಗಿದೆ.