ಹಣಕಾಸಿನ ಅಕ್ರಮ ತಡೆಗಟ್ಟಲು ಕ್ರಮ: ನಗದು ವಹಿವಾಟಿನ ಮಿತಿ ನಿಗದಿಗೊಳಿಸಿರುವ ಐಟಿ

Cash Transaction Limit Fixed: ನೀವು ಹೆಚ್ಚಾಗಿ ಹಣದ ವಹಿವಾಟು ನಡೆಸುವವರಾಗಿದ್ದರೆ ಆದಾಯ ತೆರಿಗೆ ಇಲಾಖೆಯ ಹೊಸ ನಿಯಮದ ಬಗ್ಗೆ ತಿಳಿದಿರುವುದು ತುಂಬಾ ಅವಶ್ಯಕ.  ದಾಯ ತೆರಿಗೆ ಇಲಾಖೆ ನಗದು ವಹಿವಾಟಿನ ಮಿತಿಯನ್ನು ನಿಗದಿಪಡಿಸಿದೆ. ಈ ಬಗ್ಗೆ ಸರಿಯಾದ ಮಾಹಿತಿ ತಿಳಿಯದಿದ್ದರೆ ಭವಿಷ್ಯದಲ್ಲಿ ತೊಂದರೆ ಎದುರಿಸಬೇಕಾಗಬಹುದು.

Written by - Yashaswini V | Last Updated : Apr 10, 2023, 03:04 PM IST
  • ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿ ನೀವು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಅದರ ಮಾಹಿತಿಯನ್ನು ಕೇಳಬಹುದು.
  • ಚಾಲ್ತಿ ಖಾತೆಯಲ್ಲಿ ಅದರ ಗರಿಷ್ಠ ಮಿತಿ 50 ಲಕ್ಷ ರೂ.ಗಳಾಗಿವೆ.
  • ಅದೇ ಸಮಯದಲ್ಲಿ, ಎಫ್‌ಡಿಯಲ್ಲಿ ಸಹ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡುವಂತಿಲ್ಲ.
ಹಣಕಾಸಿನ ಅಕ್ರಮ ತಡೆಗಟ್ಟಲು ಕ್ರಮ: ನಗದು ವಹಿವಾಟಿನ ಮಿತಿ ನಿಗದಿಗೊಳಿಸಿರುವ ಐಟಿ  title=

Cash Transaction Limit Fixed: ಆದಾಯ ತೆರಿಗೆ ಇಲಾಖೆಯು ಹಣಕಾಸಿನ ಅಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನೀವು ಸಹ ಹೆಚ್ಚಾಗಿ ನಗದು ವಹಿವಾಟನ್ನು ನಡೆಸುತ್ತಿದ್ದರೆ ಜಾಗರೂಕರಾಗಿರಿ.  ನಗದು ರೂಪದಲ್ಲಿ ಹೆಚ್ಚು ವಹಿವಾಟು ನಡೆಸುವ ಜನರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇಟ್ಟಿದ್ದು, ನಿಮ್ಮ ಆದಾಯಕ್ಕೆ ಸರಿಯಾದ ದಾಖಲೆ ಇಲ್ಲದಿದ್ದರೆ ಐಟಿ ಇಲಾಖೆಯು ನಿಮ್ಮ ಹೆಸರಿನಲ್ಲಿ ನೋಟಿಸ್ ನೀಡಬಹುದು. 

ನಿಮ್ಮ ವಹಿವಾಟಿನ ಇತಿಹಾಸದಲ್ಲಿ ನೀವು ಹೆಚ್ಚು ನಗದು ವಹಿವಾಟುಗಳನ್ನು ಹೊಂದಿದ್ದರೆ, ನಂತರ ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆಯು ನಿಮ್ಮ ಬಳಿ ದಾಖಲೆಗಳನ್ನು ಕೇಳಬಹುದು. ನಗದು ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳೇನು ಎಂದು ತಿಳಿಯಿರಿ. 

ಬ್ಯಾಂಕ್ ಖಾತೆ ಅಥವಾ ಎಫ್‌ಡಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ನಗದು ಇರುವುದಿಲ್ಲ:
ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿ ನೀವು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಅದರ ಮಾಹಿತಿಯನ್ನು ಕೇಳಬಹುದು. ಚಾಲ್ತಿ ಖಾತೆಯಲ್ಲಿ ಅದರ ಗರಿಷ್ಠ ಮಿತಿ  50 ಲಕ್ಷ ರೂ.ಗಳಾಗಿವೆ. ಅದೇ ಸಮಯದಲ್ಲಿ, ಎಫ್‌ಡಿಯಲ್ಲಿ ಸಹ  ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡುವಂತಿಲ್ಲ.  ನೀವು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಲು ಬಯಸಿದರೆ, ನೀವು ಆನ್‌ಲೈನ್ ಅಥವಾ ಚೆಕ್ ಮೂಲಕ ಪಾವತಿಸಬಹುದು.

ಇದನ್ನೂ ಓದಿ- LPG Subsidy: ಗೃಹಿಣಿಯರಿಗಾಗಿ ಈ ಯೋಜನೆ ! ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ !

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಥವಾ ಹೂಡಿಕೆಗೆ ನಗದು ಬಳಕೆ: 
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಬಳಸಿದರೆ, ಅದರ ಮಾಹಿತಿಯನ್ನು ನಿಮ್ಮಿಂದ ಪಡೆಯಬಹುದು.  ಅದೇ ಸಮಯದಲ್ಲಿ, ನೀವು ಹೂಡಿಕೆಗೆ ಹೆಚ್ಚಿನ ಹಣವನ್ನು ಬಳಸಲಾಗುವುದಿಲ್ಲ. ನೀವು ಯಾವುದೇ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ಬಾಂಡ್‌ಗಳಲ್ಲಿ ನಗದು ವಹಿವಾಟು ನಡೆಸುತ್ತಿದ್ದರೆ, ಇದಕ್ಕಾಗಿ ನೀವು ಆರ್ಥಿಕ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬಳಸಲಾಗುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೊಟೀಸ್ ನೀಡಬಹುದು.

ಆಸ್ತಿಯನ್ನು ನಗದು ರೂಪದಲ್ಲಿ ಪಾವತಿಸುವ ನಿಯಮಗಳು:
ಲಭ್ಯವಿರುವ ಮಾಹಿತಿಯ ಪ್ರಕಾರ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಗದು ವ್ಯಾಪಕವಾಗಿ ಬಳಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ನೀವು ಸಹ ಆಸ್ತಿ ಖರೀದಿಸುವಾಗ ನಗದು ರೂಪದಲ್ಲಿ ಹಣ ಪಾವತಿಸುತ್ತಿದ್ದರೆ ಆ ಕುರಿತಂತೆ ಇರುವ ನಿಯಮಗಳ ಬಗ್ಗೆ ತಪ್ಪದೇ ತಿಳಿದಿರುವುದು ಬಹಳ ಮುಖ್ಯ. 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಬಂಪರ್ !ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ!ಈ ದಿನ ಹೊರ ಬೀಳುವುದು ಆದೇಶ

ಆಸ್ತಿ ರಿಜಿಸ್ಟ್ರಾರ್‌ನೊಂದಿಗೆ ನಗದು ರೂಪದಲ್ಲಿ ದೊಡ್ಡ ವಹಿವಾಟು ಮಾಡಿದ ನಂತರ, ಅದರ ವರದಿಯು ಆದಾಯ ತೆರಿಗೆ ಇಲಾಖೆಗೆ ಹೋಗುತ್ತದೆ. ವಾಸ್ತವವಾಗಿ, 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನೀವು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತದೆ. ಈ ನಿಯಮಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು ಎಂಬುದನ್ನೂ ಎಂದಿಗೂ ಮರೆಯಬೇಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News