ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಬ್ಬರ ಭವಿಷ್ಯವು ಗ್ರಹ ಮತ್ತು ರಾಶಿ ಫಲಗಳ ಅನುಸಾರವಾಗಿ ನಿರ್ಧಾರವಾಗುತ್ತದೆ. ಗ್ರಹಗಳು ಚಲಿಸುವ ಮೂಲಕ ತಮ್ಮ ರಾಶಿಯನ್ನು ಬದಲಾಯಿಸುತ್ತಿರುತ್ತವೆ. ಈ ರೀತಿ ಗ್ರಹಗಳ ಸ್ಥಾನದಲ್ಲಿ ಆಗುವ ಬದಲಾವಣೆ ದ್ವಾದಶ ರಾಶಿಯವರ ಜೀವನದ ಮೇಲೆಯೂ ಕಾಣಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಅಂಥಹ ಒಂದು ಸಂಯೋಗವು ಏಪ್ರಿಲ್ 22 ರಿಂದ ರೂಪುಗೊಳ್ಳಲಿದೆ.
ಬುಧ ಗ್ರಹವು ಮಾರ್ಚ್ 31 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ. ದೇವಗುರು ಗುರುವು ಕೂಡಾ ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಸಂಕ್ರಮಿಸಲಿದೆ. ಹೀಗಾಗಿ ಮೇಷ ರಾಶಿಯಲ್ಲಿ ಬುಧ-ಗುರುವಿನ ಸಂಯೋಗವಿರುತ್ತದೆ. ಇದು ಮೂರು ರಾಶಿಯವರ ಜೀವನವನ್ನು ಬೆಳಗಲಿದೆ.
ಗುರು ಮತ್ತು ಬುಧದ ಸಂಯೋಜನೆಯು ಮೇಷ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ. ಈ ಸಮಯದಲ್ಲಿ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಪಾರ್ಟನರ್ ಶಿಪ್ ನಲ್ಲಿ ಮಾಡುವ ಕೆಲಸಗಳು ಯಶಸ್ಸಿಗೆ ಕಾರಣವಾಗುತ್ತವೆ.
ಮಿಥುನ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಹಣಕಾಸಿನ ಪ್ರಯೋಜನವಾಗುವುದು. ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ಈ ಸಮಯದಲ್ಲಿ ನನಸಾಗಬಹುದು. ಹಳೆಯ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿಯವರಿಗೆ ಗುರು ಮತ್ತು ಬುಧ ಗ್ರಹಗಳ ಸಂಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ, ಈ ರಾಶಿಯವರು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಅಪಾರ ಲಾಭವನ್ನು ಪಡೆಯುತ್ತಾರೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರ ಆಸೆ ಈಡೇರುತ್ತದೆ ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)