Vastu Tips: ರಾಮ ತುಳಸಿ-ಶ್ಯಾಮ ತುಳಸಿಗಳ ನಡುವಿನ ಅಂತರ ನಿಮಗೆಷ್ಟು ಗೊತ್ತು? ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ?

Tulsi Vastu Tips : ಭಾರತದಲ್ಲಿ ಬಹುತೇಕರ ಮನೆಯ ಅಂಗಳದಲ್ಲಿ ತುಳಸಿ ಗಿಡ ಇರುತ್ತದೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ ಪ್ರಾಪ್ತಿ ಇದೆ. ತುಳಸಿಯ ಗಿಡ ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಆದರೆ, ಯಾವ ತುಳಸಿಯನ್ನು ಮನೆಯಲ್ಲಿ ನೆಟ್ಟರೆ ಹೆಚ್ಚು ಫಲದಾಯಕ ಸಾಬೀತಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.  

Written by - Nitin Tabib | Last Updated : Apr 18, 2023, 10:38 PM IST
  • ತುಳಸಿಯಲ್ಲಿ ರಾಮ ತುಳಸಿ ಮತ್ತು ಶ್ಯಾಮ ತುಳಸಿ ಎಂಬ 2 ವಿಧಗಳಿವೆ.
  • ಆದರೆ ಮನೆಯಲ್ಲಿ ಯಾವ ತುಳಸಿ ಗಿಡ ನೆಟ್ಟರೆ ಶುಭಕರ ಎಂಬುದರ ಕುರಿತು ಜನರಲ್ಲಿ ಸಂದಿಗ್ಧತೆ ಇರುತ್ತದೆ.
  • ಇದಕ್ಕಾಗಿ ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಕೂಡ ತುಂಬಾ ಮುಖ್ಯವಾಗಿದೆ.
Vastu Tips: ರಾಮ ತುಳಸಿ-ಶ್ಯಾಮ ತುಳಸಿಗಳ ನಡುವಿನ ಅಂತರ ನಿಮಗೆಷ್ಟು ಗೊತ್ತು? ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ? title=
ವಿವಿಧ ಪ್ರಕಾರದ ತುಳಸಿಗಳ ಮಹತ್ವ

Tulsi Vastu Tips: ತುಳಸಿ ಗಿಡ ಇರುವ ಮನೆಯಲ್ಲಿ ಲಕ್ಷ್ಮಿಯ ವಾಸವಿರುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಮನೆಯಲ್ಲಿ ಧನಾತ್ಮಕತೆಯಾ ಸಂಚಾರ ಹೆಚ್ಚಾಗುತ್ತದೆ ಮತ್ತು ಸುಖ-ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆಯ ಹೊತ್ತು ತುಳಸಿಯನ್ನು ಪೂಜಿಸುವುದರಿಂದ ಶ್ರೀವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಧರ್ಮ ಶಾಸ್ತ್ರಗಳ ಜೊತೆಗೆ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ತುಳಸಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದರ ಜೊತೆಗೆ ತುಳಸಿಯ ಪೂಜೆ, ನಿರ್ವಹಣೆ ಇತ್ಯಾದಿಗಳ ಬಗ್ಗೆಯೂ ಕೆಲವು ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ವಿಶೇಷ ಪ್ರಯೋಜನ ಸಿಗುತ್ತದೆ.

ಮನೆಯಲ್ಲಿ ಯಾವ ತುಳಸಿಯನ್ನು ನೆಡಬೇಕು - ರಾಮ ಅಥವಾ ಶ್ಯಾಮ?
ತುಳಸಿಯಲ್ಲಿ ರಾಮ ತುಳಸಿ ಮತ್ತು ಶ್ಯಾಮ ತುಳಸಿ ಎಂಬ 2 ವಿಧಗಳಿವೆ. ಆದರೆ ಮನೆಯಲ್ಲಿ ಯಾವ ತುಳಸಿ ಗಿಡ ನೆಟ್ಟರೆ ಶುಭಕರ ಎಂಬುದರ ಕುರಿತು ಜನರಲ್ಲಿ ಸಂದಿಗ್ಧತೆ ಇರುತ್ತದೆ. ಇದಕ್ಕಾಗಿ ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಕೂಡ ತುಂಬಾ ಮುಖ್ಯವಾಗಿದೆ.

ರಾಮ ತುಳಸಿ: ರಾಮ ತುಳಸಿಯ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ ಮತ್ತು ಅದರ ಎಲೆಗಳು ಸಿಹಿಯಾಗಿರುತ್ತವೆ. ಶ್ರೀರಾಮನಿಗೆ ರಾಮ ತುಳಸಿ ತುಂಬಾ ಪ್ರಿಯ. ರಾಮ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ಹೆಚ್ಚಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶುಭಕರ.

ಶ್ಯಾಮ ತುಳಸಿ: ಶ್ಯಾಮ ತುಳಸಿಯನ್ನು ಕೂಡ ಮನೆಯಲ್ಲಿ ಹಚ್ಚುವುದು ತುಂಬಾ ಮಂಗಳಕರ, ಹಾಗೆಯೇ ಆಯುರ್ವೇದದಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶ್ಯಾಮ ತುಳಸಿಯನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಶ್ಯಾಮ ತುಳಸಿಯ ಎಲೆಗಳು ಕಪ್ಪು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಇದು ಶ್ರೀಕೃಷ್ಣನಿಗೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ.

ತುಳಸಿ ಗಿಡಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳು
> ಮನೆಯಲ್ಲಿ ತುಳಸಿ ನೆಡಲು ಗುರುವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. 
>> ಪೂರ್ವ ದಿಕ್ಕಿನಲ್ಲಿ  ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಅದನ್ನು ಬಾಲ್ಕನಿ ಅಥವಾ ಕಿಟಕಿಯ ಬಳಿ ಇಡಲು ಬಯಸಿದ್ದಾರೆ, ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಉತ್ತಮ.
>> ಮನೆಯಲ್ಲಿ ಒಂದು, ಮೂರು ಅಥವಾ ಐದು ಹೀಗೆ ಬೆಸ ಸಂಖ್ಯೆಯಲ್ಲಿ ತುಳಸಿ ಗಿಡ ನೆಡುವುದು ಉತ್ತಮ.
>> ತುಳಸಿ ಗಿಡದ ಬಳಿ ಯಾವತ್ತೂ ಕೊಳೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಪೊರಕೆ-ಒರೆಸುವ ಬಟ್ಟೆಗಳು, ಡಸ್ಟ್‌ಬಿನ್‌ಗಳು ಇತ್ಯಾದಿಗಳನ್ನು ತುಳಸಿಯ ಗಿಡದ ಬಳಿ ಇಡಬೇಡಿ.

ಇದನ್ನೂ ಓದಿ-April 27 ರಂದು ಗಜಲಕ್ಷ್ಮಿ ರಾಜಯೋಗ ನಿರ್ಮಾಣ, ಈ ರಾಶಿಗಳ ಜನರ ಭಾಗ್ಯೋದಯ ಪಕ್ಕಾ, ಅಪಾರ ಧನಪ್ರಾಪ್ತಿಯ ಯೋಗ!

>> ತುಳಸಿ ಗಿಡ ಒಣಗಲು ಬಿಡಬೇಡಿ. ಒಣಗಿದ ತುಳಸಿ ಗಿಡವು ಮನೆಯಲ್ಲಿ ನಕಾರಾತ್ಮಕತೆ ಮತ್ತು ತೊಂದರೆಗಳನ್ನು ತರುತ್ತದೆ.

ಇದನ್ನೂ ಓದಿ-Mercury Retrograde 2023: ಬುಧನ ವಕ್ರ ನಡೆ ಆರಂಭ, 3 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News