Mercury Retrograde 2023: ಬುಧನ ವಕ್ರ ನಡೆ ಆರಂಭ, 3 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

Mercury Retrograde 2023: ವೈದಿಕ ಪಂಚಾಂಗದ ಪ್ರಕಾರ, ಪ್ರಸ್ತುತ ಮೇಷ ರಾಶಿಯಲ್ಲಿ ಬುಧ ತನ್ನ ವಕ್ರನಡೆಯನ್ನು ಅನುಸರಿಸಿದ್ದು, ಧನ ಸಾಮ್ರಾಜ್ಯ ಯೋಗ ನಿರ್ಮಾಣದಿಂದ ಮೂರು ರಾಶಿಗಳ ಜನರಿಗೆ ಅಪಾರ ಆರ್ಥಿಕ ಕರುಣಿಸಲಿದ್ದಾನೆ. 
 

Budh Vakri 2023 Dhan Samrajya Yog: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ವ್ಯಾಪಾರ ಹಾಗೂ ಬುದ್ಧಿಯ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಆತ ಮಂಗಳನ ಮನೆಯಾಗಿರುವ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಿದ್ದು, ಮೇ 15ರವರೆಗೆ ಆತ ಅದೇ ಸ್ಥಿತಿಯಲ್ಲಿ ಇರಲಿದ್ದಾನೆ. ಇದರಿಂದ ಮೇಷ ರಾಶಿಯಲ್ಲಿ ಧನ ಸಾಮ್ರಾಜ್ಯ ರಾಜಯೋಗ ರೂಪುಗೊಂಡಿದೆ. ಜೋತಿಷ್ಯ ಶಾಸ್ತ್ರದಲ್ಲಿ ಧನ ಸಾಮ್ರಾಜ್ಯ ಯೋಗಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಇದು ಅತ್ಯಂತ ಶುಭಯೋಗಗಳಲ್ಲಿ ಒಂದಾಗಿರುವ ಕಾರಣ ಇದು ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಈ ಜನರ ಜೀವನದಲ್ಲಿ ಅಪಾರ ಧನಾವೃಷ್ಟಿಯಾಗಲಿದೆ ಮತ್ತು ಉನ್ನತಿಯ ಯೋಗ ಕೂಡ ಗೋಚರಿಸುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Dhan Rajyog: 50 ವರ್ಷಗಳ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ 'ಮಹಾಧನ ರಾಜಯೋಗ', ಆಕಸ್ಮಿಕ ಧನಲಾಭದ ಜೊತೆಗೆ ಅಪಾರ ಉನ್ನತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /3

ಕುಂಭ ರಾಶಿ: ಮಹಾಧನ ಸಾಮ್ರಾಜ್ಯ ರಾಜಯೋಗ ಕುಂಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರವಾಗಿದೆ. ಏಕೆಂದರೆ ಗ್ರಹಗಳ ರಾಜಕುಮಾರ ಬುಧ ನಿಮ್ಮ ಜಾತಕದ ತೃತೀಯ ಭಾವದಲ್ಲಿ ವಕ್ರಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಅಪಾರ ಹೆಚ್ಚಳವಾಗಲಿದೆ. ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೊಂದು ಧಾರ್ಮಿಕ ಹಾಗೂ ಮಂಗಳ ಕಾರ್ಯ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಅತ್ಯಂತ ಉತ್ತಮವಾಗಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ನಿಮಗೆ ಸಹೋದರ-ಸಹೋದರಿಯರ ಬೆಂಬಲ ಕೂಡ ಸಿಗಲಿದೆ.   

2 /3

ಮೇಷ ರಾಶಿ: ನಿಮ್ಮ ರಾಶಿಯಲ್ಲಿಯೇ ಬುಧ ತನ್ನ ವಕ್ರನಡೆಯನ್ನು ಆರಂಭಿಸಿದ್ದಾನೆ ಮತ್ತು ಧನ ಸಾಮ್ರಾಜ್ಯ ಯೋಗವನ್ನು ನಿರ್ಮಿಸಿದ್ದಾನೆ. ಹೀಗಾಗಿ ಈ ಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭಫಲಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೌಟುಂಬಿಕ ಜೀವನ ಭಾರಿ ಸುಖಮಯವಾಗಿರಲಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಘನತೆ ಗೌರವ ಹೆಚ್ಚಾಗಲಿದೆ. ಸಾಮಾಜಿಕ ವ್ಯಾಪ್ತಿ  ವಿಸ್ತರಣೆಯಾಗಲಿದೆ, ಇನ್ನೊಂದೆಡೆ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಸಮಯ ಸಾಕಷ್ಟು ಅದ್ಭುತವಾಗಿದೆ. ಎಲ್ಲಾ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

3 /3

ಮಕರ ರಾಶಿ: ಬುಧನ ವಕ್ರ ನಡೆಯಿಂದ ನಿರ್ಮಾಣಗೊಂಡಿರುವ ಈ ಧನ ಸಾಮ್ರಾಜ್ಯ ಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಯೋಗ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಕುಟುಂಬ ಸದಸ್ಯರ, ಬಂಧು-ಮಿತ್ರರ ಅಪಾರ ಬೆಂಬಲ ಪ್ರಾಪ್ತಿಯಾಗಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಈ ಅವಧಿಯಲ್ಲಿ ನೀವು ವಾಹನ, ಆಸ್ತಿ-ಪಾಸ್ತಿ ಖರೀದಿಸಬಹುದು. ನೌಕರ ವರ್ಗಕ್ಕೆ ಸೇರಿದ ಜನರಿಗೆ ಕಾರ್ಯಸ್ಥಳದಲ್ಲಿ ಅಧಿಕಾರಿಗಳ ಅಪಾರ ಬೆಂಬಲ ಸಿಗಲಿದೆ. ವ್ಯಾಪಾರ, ರಿಯಲ್ ಎಸ್ಟೇಟ್, ಎಣ್ಣೆ, ಪೆಟ್ರೋಲಿಯಂ ಕ್ಷೇತ್ರಗಳ ಜೊತೆಗೆ ಸಂಬಂಧ ಹೊಂದಿದವರಿಗೆ ಸಮಯ ಅತ್ಯಂತ ಅದ್ಭುತವಾಗಿದೆ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)