ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. 20 ವರ್ಷಗಳ ಹಿಂದಿನ ಅಕ್ಷಯ ತೃತೀಯದಿಂದ ಪ್ರಸಕ್ತ ವರ್ಷದ ಅಕ್ಷಯ ತೃತೀಯದವರೆಗೆ ಚಿನ್ನದ ಬೆಲೆಯಲ್ಲಿ ಶೇ.1000 ರಷ್ಟು ಏರಿಕೆಯಾಗಿದೆ. ಚಿನ್ನವನ್ನು ಲಾಭದಾಯಕವಾಗಿ ಮಾರಾಟ ಮಾಡುವುದರಿಂದ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ತೆರಿಗೆ ಪಾವತಿಯಿಂದ ಬಚಾವಾಗಬಹುದು. ಚಿನ್ನದ ಆಸ್ತಿಗಳನ್ನು ಮಾರಾಟ ಮಾಡುವುದರಿಂದ ಮಾಡಿಕೊಂಡ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ (LTCG) ಮೇಲೆ ಮಾಡಿದ ಲಾಭದ ಮೇಲೆ ತೆರಿಗೆ ಕಡಿತವನ್ನು ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 54F ಅಡಿಯಲ್ಲಿ ಈ ವಿನಾಯಿತಿಯನ್ನು ನೀವು ಪಡೆಯಬಹುದು.