ಬೆಂಗಳೂರು : ಅಸ್ತ ಸ್ಥಿತಿಯಲ್ಲಿದ್ದ ಗುರು ಕೆಲವೇ ದಿನಗಳ ಹಿಂದೆ ಅಂದರೆ ಏಪ್ರಿಲ್ 27 ಕ್ಕೆ ಮತ್ತೆ ಉದಯಿಸಿದ್ದಾನೆ. ಗುರು ಭಗವಾನ್ ಉದಯವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ರಾಶಿಗಳಿಗೆ, ಗುರುವಿನ ಉದಯ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ರಾಶಿಗಳು ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮೇಷ: ಶುಭ ಕಾರ್ಯಕ್ರಮಗಳು ನಡೆಯಲಿವೆ. ಗೌರವ ಹೆಚ್ಚಾಗಲಿದೆ. ಹಣದ ಹರಿವು ಅಧಿಕವಾಗಿರುತ್ತದೆ. ನಿಮ್ಮ ಉತ್ತಮ ಸ್ವಭಾವವು ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ.
ವೃಷಭ: ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು.
ಮಿಥುನ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.
ಕರ್ಕಾಟಕ: ವಿದೇಶ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಹಣದ ಹರಿವು ಉತ್ತಮವಾಗಿರಲಿದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಬೆಂಬಲ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಸಿಂಹ: ನಿಮ್ಮ ಹಣೆಬರಹವೇ ಬದಲಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಿಯವಾಗುವುದು.
ಕನ್ಯಾ: ಮನಃಶಾಂತಿ ಇರುತ್ತದೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿರುವ ರೋಗಗಳಿಂದ ಮುಕ್ತಿ ಸಿಗುತ್ತದೆ.
ತುಲಾ: ನೀವು ಕುಟುಂಬ ಮತ್ತು ಸಮಾಜದಿಂದ ಪರಿಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಮಸ್ಯೆಗಳ ನಿರ್ಮೂಲನವಾಗುವುದು.
ವೃಶ್ಚಿಕ: ಹಣಕಾಸಿನ ಪ್ರಯೋಜನವಾಗಲಿದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯಿಂದ ಪರಿಹಾರ ಸಿಗಲಿದೆ. ಈ ಅವಧಿಯಲ್ಲಿ ಹೊಸ ಹೂಡಿಕೆಗಳಲ್ಲಿ ತೊಡಗಬೇಡಿ.
ಧನು: ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸಕ್ಕೆ ತೆರಳುವ ಅವಕಾಶ ದೊರೆಯಲಿದೆ. ಹೊಸ ಗೆಳೆಯರು ಸಿಗುತ್ತಾರೆ.
ಮಕರ: ಆಧ್ಯಾತ್ಮಿಕ ಕೆಲಸದಲ್ಲಿ ತೊಡಗುವಿರಿ. ಮನಸ್ಸು ಶಾಂತವಾಗುವುದು. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ. ಪ್ರಶಾಂತ ವಾತಾವರಣ ಇರುವುದು.
ಕುಂಭ: ಬಂಧುಗಳೊಂದಿಗೆ ಸಂಬಂಧ ಸುಗಮವಾಗಲಿದೆ. ಲಾಭ ಹೆಚ್ಚಾಗಲಿದೆ. ಆಸ್ತಿ ಮತ್ತು ವಾಹನ ಖರೀದಿ ಯೋಗವಿದೆ.
ಮೀನ: ನಿಮ್ಮ ಸಿಹಿ ಮಾತುಗಳಿಂದ ಎಲ್ಲರನ್ನೂ ಸಂತೋಷಪಡಿಸುವಿರಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಹಣ ಮತ್ತು ಸಂತೋಷ ಬರುತ್ತದೆ.