ಪ್ರಬಲ ಸಮುದಾಯದ ನಾಯಕನಿಗೆ ಪಕ್ಷದ ಜವಾಬ್ದಾರಿ ನೀಡಲು ಬಿಜೆಪಿ ಸಿದ್ದತೆ ! ಕಾಂಗ್ರೆಸ್ ಸಿಎಂ ಆಯ್ಕೆ ನಂತರ ಕಮಲ ಪಾಳಯದ ತೀರ್ಮಾನ

ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ತೀರ್ಮಾನವಾಗಲಿದೆ. ಅದಕ್ಕೂ ಮುನ್ನ ಕೇಂದ್ರ ನಾಯಕರು  ರಾಜ್ಯಕ್ಕೆ ಆಗಮಿಸಲಿದ್ದಾರೆ

Written by - Ranjitha R K | Last Updated : May 17, 2023, 10:36 AM IST
  • ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿಜೆಪಿ ಚಿಂತನೆ
  • ಪ್ರಬಲ ನಾಯಕರನ್ನು ನೇಮಕ ಮಾಡುವ ಸಿದ್ದತೆಯಲ್ಲಿದೆ ಬಿಜೆಪಿ
  • ಯಾರಾಗುತ್ತಾರೆ ಬಿಜೆಪಿ ಅಧ್ಯಕ್ಷ ?
ಪ್ರಬಲ ಸಮುದಾಯದ ನಾಯಕನಿಗೆ ಪಕ್ಷದ ಜವಾಬ್ದಾರಿ ನೀಡಲು ಬಿಜೆಪಿ ಸಿದ್ದತೆ ! ಕಾಂಗ್ರೆಸ್ ಸಿಎಂ ಆಯ್ಕೆ ನಂತರ ಕಮಲ ಪಾಳಯದ ತೀರ್ಮಾನ  title=

ಬೆಂಗಳೂರು : ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನದ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿಜೆಪಿ ಚಿಂತನೆ ನಡೆಸಿದೆ.  ವಿರೋಧ ಪಕ್ಷದ ನಾಯಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಪ್ರಬಲ ನಾಯಕರನ್ನು ನೇಮಕ ಮಾಡುವ ಸಿದ್ದತೆಯಲ್ಲಿದೆ ಬಿಜೆಪಿ. ಈ ಮಧ್ಯೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಸಿಎಂ ಆಯ್ಕೆಯ ನಂತರ ತನ್ನ ನಿರ್ಧಾರ ಪ್ರಕಟಿಸುವ ತೀರ್ಮಾನವನ್ನು ಬಿಜೆಪಿ ಮಾಡಿದೆ. 

ಯಾರಾಗುತ್ತಾರೆ ಬಿಜೆಪಿ ಅಧ್ಯಕ್ಷ ? :  
ಹಿಂದುಳಿದ ವರ್ಗದ ನಾಯಕ ಸುನೀಲ್ ಕುಮಾರ್ ಅಥವಾ ಒಕ್ಕಲಿಗ ಸಮುದಾಯದ ನಾಯಕ ಸಿಟಿ ರವಿ ಅಥವಾ ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್  ಅಧ್ಯಕ್ಷನ ಜವಾಬ್ದಾರಿ ಹೊತ್ತಿದ್ದಾರೆ.  ಹಾಗಾಗಿ ಒಕ್ಕಲಿಗ ನಾಯಕನ ವಿರುದ್ಧ ಒಕ್ಕಲಿಗರನ್ನೇ ಅಧ್ಯಕ್ಷರಾಗಿ ಮಾಡಲು ಸಿದ್ದತೆ ನಡೆದಿದೆ ಎನ್ನಲಾಗಿದೆ. 

ಇದನ್ನೂ ಓದಿ : ಸಿದ್ದು ಜಗ್ಗುತ್ತಿಲ್ಲ, ಡಿಕೆಶಿ ಬಗ್ಗುತ್ತಿಲ್ಲ ಯಾರಿಗೆ ಒಲಿಯುವುದು ಸಿಎಂ ಪಟ್ಟ! ಹನ್ನೊಂದು ಗಂಟೆಗೆ ಫೈನಲ್ ಮೀಟಿಂಗ್

ಸಿದ್ದರಾಮಯ್ಯ ಸಿಎಂ ಆದರೆ ಬಿಜೆಪಿ ಲೆಕ್ಕಾಚಾರ ? : 
ಒಂದು ವೇಳೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದರೆ ಕಾಂಬಿನೇಷನ್ ನಂತೆ ಹಿಂದುಳಿದ ನಾಯಕ ಅಥವಾ ಒಕ್ಕಲಿಗರನ್ನೇ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಆಗ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಲಿಂಗಾಯತರಿಗೆ ಕೊಡುವ ಸಾಧ್ಯತೆ ಹೆಚ್ಚು. ಈ ಸಾಲಿನಲ್ಲಿ ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿ ಬರುತ್ತಿದೆ. 

ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸುವುದಕ್ಕೆ ಕೆಲವೊಂದು ಅಂಶಗಳು ತದೆಯಾಗುತ್ತವೆ ಎಂದು ಕೂಡಾ ಹೇಳಲಾಗುತ್ತಿದೆ. ಯತ್ನಾಳ್ ಅವರ ಲೂಸ್ ಟಾಕ್ ಹಾಗೂ ವಿಜಯಪುರ ಜಿಲ್ಲೆಯಲ್ಲಿನ ಕೈ ನಾಯಕರ ಜೊತೆಗಿನ ಉತ್ತಮ ಒಡನಾಟ ಯತ್ನಾಳ್ ಅವರ ಆಯ್ಕೆಗೆ ಮುಳ್ಳಾಗಬಹುದು.  ಹೀಗಾಗಿ ಯತ್ನಾಳ್ ಬದಲಾಗಿ ಬೊಮ್ಮಾಯಿ ಯನ್ನೇ ವಿಪಕ್ಷ ನಾಯಕರನ್ನಾಗಿ ಮಾಡುವ ಸಾಧ್ಯತೆ ಹೆಚ್ಚು. 

ಇದನ್ನೂ ಓದಿ : Karnataka CM Announcement: ನಾಳೆ ಬೆಂಗಳೂರಿನಲ್ಲೇ ನೂತನ ಮುಖ್ಯಮಂತ್ರಿ ಹೆಸರು ಘೋಷಣೆ?!

ವಿಪಕ್ಷ ನಾಯಕರಾಗಿ ಬಸವರಾಜ್ ಬೊಮ್ಮಾಯಿ ನೇಮಕ ಸಾಧ್ಯತೆ :
ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ತೀರ್ಮಾನವಾಗಲಿದೆ. ಅದಕ್ಕೂ ಮುನ್ನ ಕೇಂದ್ರ ನಾಯಕರು  ರಾಜ್ಯಕ್ಕೆ ಆಗಮಿಸಲಿದ್ದಾರೆ. ಇಲ್ಲಿನ ಪಕ್ಷದ ಪರಿಸ್ಥಿತಿ ಆಧರಿಸಿ, ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ನಾಯಕರನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕರನ್ನು ನೇಮಕ ಮಾಡಲು  ಬಿಜೆಪಿ ಮುಂದಾಗಿದೆ. 

ಈ ಮಧ್ಯೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಯಾರು ಸಿಎಂ ಆದರೆ ಜೆಡಿಎಸ್ ಗೆ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ತೊಡಗಿದೆ.

ಸಿದ್ದರಾಮಯ್ಯ ಸಿಎಂ ಆದರೆ ಜೆಡಿಎಸ್ ಗೆ ಲಾಭ : 
ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಲ್ಲಿ ಕುರುಬ ಸಮುದಾಯದ ಮತಗಳು ಮೊದಲಿಗಿಂತಲೂ ಜೆಡಿ ಎಸ್ ನಿಂದ ದೂರ ಉಳಿಯಲಿವೆ. ಜನತಾ ಪರಿವಾರದ ನಾಯಕನಿಗೆ ಮತ್ತೆ ಮಣೆ ಎಂಬ ವಾದ ಹೆಚ್ಚಾಗಲಿದೆ. ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್ ನಲ್ಲಿ ಇತರೆ ಸಮರ್ಥ ನಾಯಕರಿಲ್ಲ ಎಂಬ ವಾದ ಗಟ್ಟಿಯಾಗಲಿದೆ.  ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಹುದ್ದೆ ನೀಡಿದರೆ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ ಎನ್ನುವ  ಅಸ್ತ್ರ ದಳಪತಿಗಳಿಗೆ ವರವಾಗಲಿದೆ. ಹಾಗಾಗಿ ಸಿದ್ದರಾಮಯ್ಯ ಸಿಎಂ ಆದರೆ ಜೆಡಿ ಎಸ್ ಗೆ ರಾಜಕೀಯ ಲಾಭವಾಗಲಿದೆ.  

ಇದನ್ನೂ ಓದಿ : Karnataka CM decision: ಸಿದ್ದರಾಮಯ್ಯ ಮತ್ತು ಡಿಕೆಶಿ ಜೊತೆಗೆ ಮಲ್ಲಿಕಾರ್ಜುನ್ ಖರ್ಗೆ ಪ್ರತ್ಯೇಕ ಮಾತುಕತೆ

ಶಿವಕುಮಾರ್ ಮುಖ್ಯ ಮಂತ್ರಿ ದಳಪತಿಗಳ ಲೆಕ್ಕಾಚಾರ :
ಒಕ್ಕಲಿಗ ಸಮುದಾಯದ ಮತಗಳು ಮತ್ತೆ ಜೆಡಿ ಎಸ್ ನಿಂದ ದೂರ ಹೋಗಲಿವೆ. ಹಳೇ ಮೈಸೂರು ಭಾಗದಲ್ಲಿ ಶಿವಕುಮಾರ್ ಸಮುದಾಯದ ಮೇಲೆ ಪ್ರಭಾವ ಬೀರಲಿದ್ದಾರೆ. ಜೆಡಿ ಎಸ್ ನ ಕ್ಷೇತ್ರಗಳನ್ನು ಟಾರ್ಗೆಟ್ ಮಾಡುವ ಸಾದ್ಯತೆ ಹೆಚ್ಚು. ಒಕ್ಕಲಿಗ ಪರ್ಯಾಯ ನಾಯಕನ ಉದಯವಾಗಲಿದೆ. ರಾಮನಗರ ಹಾಗೂ ಹಾಸನ‌ ಜಿಲ್ಲೆಗಳನ್ನು ಟಾರ್ಗೆಟ್ ಮಾಡುವ ಸಂಭವ ಹೆಚ್ಚಾಗಲಿದೆ. ಹೀಗಾಗಿ ಡಿಕೆ ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ಗೆ ಅಪಾಯ ಹೆಚ್ಚಾಗಲಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News