Jr, NTRಗೆ ಇಂದು 40ನೇ ಹುಟ್ಟು ಹಬ್ಬದ ಸಂಭ್ರಮ..! ತಾರಕ್‌ ಸಿನಿ ಪಯಣ ಹೀಗಿದೆ

Jr, NTR : ಜೂ. ಎನ್‌ಟಿಆರ್‌ ತಮ್ಮ ನಟನೆ, ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ದಕ್ಷಿಣ ಚಿತ್ರರಂಗದ ಟಾಪ್‌ ನಟರಲ್ಲಿ ಒಬ್ಬರಾಗಿರುವ ತಾರಕ್‌ ಆರ್‌ಆರ್‌ಆರ್‌ ಚಿತ್ರದ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ. ಅಲ್ಲದೆ, ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. 
 

Happy Birthday Jr, NTR : ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದಿಗ್ಗಜ ನಟ ನಂದಮೂರಿ ತಾರಕ ರಾಮರಾವ್ ಅವರ ಮೊಮ್ಮಗ ಜೂನಿಯರ್ ಎನ್‌ಟಿಆರ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾಗಿರುವ ತಾರಕ್‌ ಅವರು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಎರಡು ದಶಕಗಳ ಸಿನಿ ವೃತ್ತಿಜೀವನದಲ್ಲಿ ಅವರು 30 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1 /7

ಮೇ 20 1983ರಲ್ಲಿ ಹುಟ್ಟಿದ ನಂದಮೂರಿ ತಾರಕ ರಾಮರಾವ್‌ ಇಂದು ಜೂ. ಎನ್‌ಟಿಆರ್‌ ಎಂದು ಪ್ರಖ್ಯಾತಿ ಪಡೆದಿದ್ದಾರೆ.  

2 /7

ಎಂಟನೇ ವಯಸ್ಸಿನಲ್ಲಿಯೇ ಜೂನಿಯರ್ ಎನ್‌ಟಿಆರ್ ತೆಲುಗು ಐತಿಹಾಸಿಕ ನಾಟಕ ಬ್ರಹ್ಮರ್ಷಿ ವಿಶ್ವಾಮಿತ್ರದಲ್ಲಿ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  ಗುಣಶೇಖರ್ ನಿರ್ದೇಶಿಸಿದ ಪೌರಾಣಿಕ ಚಲನಚಿತ್ರ ರಾಮಾಯಣಂ (1996) ನಲ್ಲಿ ಅವರು ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.  

3 /7

2001 ರಲ್ಲಿ, ರಾಜಮೌಳಿ ನಿರ್ದೇಶನ ಸ್ಟುಡೆಂಟ್‌ ನಂ1 ಸಿನಿಮಾದ ಮೂಲಕ ತೆರೆ ಮೇಲೆ ಅಬ್ಬರಿಸಿ ಜೂ.ಎನ್‌ಟಿಆರ್‌ ಎಂಬ ಖ್ಯಾತಿಗೆ ಪಾತ್ರರಾದರು. ಈ ಸಿನಿಮಾ ಅವರ ಇವರಿಗೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು. ಅಲ್ಲದೆ, ಅವರ ಅಭಿನಯಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ನಂದಿ ಪ್ರಶಸ್ತಿ ನೀಡಿ ಗೌರವಿಸಿತ್ತು.

4 /7

2007 ರಲ್ಲಿ, ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಎಸ್‌ಎಸ್ ರಾಜಮೌಳಿ ಸೋಷಿಯಲ್‌ ಫ್ಯಾಂಟಸಿ ಡ್ರಾಮಾ ಮೂವಿ ʼಯಮದೊಂಗʼ ಬ್ಲಾಕ್ಟಸ್ಟರ್‌ ಆಗಿತ್ತು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕಾಗಿ ತೆಲುಗು ಅತ್ಯುತ್ತಮ ನಟನಾಗಿ ಅವರ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.  

5 /7

ಜೂನಿಯರ್ ಎನ್‌ಟಿಆರ್-ಎಸ್‌ಎಸ್ ರಾಜಮೌಳಿ ಕಾಂಬಿನೇಷನ್‌ನಲ್ಲಿ ಮೂಡಿಬಂದ ಆರ್‌ಆರ್‌ಆರ್ (2022) ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. ಇದು ವಿಶ್ವಾದ್ಯಂತ ರೂ 1,132 ಕೋಟಿ ಗಳಿಸಿತ್ತು. ಅಲ್ಲದೆ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.  

6 /7

ಆರ್‌ಆರ್‌ಆರ್‌ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್‌, ಅಕಾಡೆಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​(HCA) ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಹಸಗಳು, ಅತ್ಯುತ್ತಮ ಸಾಹಸ ಚಲನಚಿತ್ರ, ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಮತ್ತು ಅತ್ಯುತ್ತಮ ಹಾಡು ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

7 /7

ಸದ್ಯ ಕೊರಟಾಲ ಶಿವ ನಿರ್ದೇಶನಕ ದೀವರಾ ಸಿನಿಮಾದಲ್ಲಿ ಎನ್‌ಟಿಆರ್‌ ನಟಿಸುತ್ತಿದ್ದಾರೆ. ನಿನ್ನೆ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.