Today Weather Update 20-05-2023: ಮೇ ತಿಂಗಳ ಅರ್ಧದಷ್ಟು ಕಳೆದಿದೆ. ಈ ತಿಂಗಳಲ್ಲಿ ಸುರಿದ ಮಳೆಯಿಂದ ಕೆಲವು ದಿನಗಳನ್ನು ಹೊರತುಪಡಿಸಿ, ಮತ್ತೆಲ್ಲಾ ದಿನ ಜನರು ಸುಡುವ ಬಿಸಿಲಿನಿಂದ ಕೊಂಚ ನೆಮ್ಮದಿ ಪಡೆದಿದ್ದರು. ಪಶ್ಚಿಮ ಹಿಮಾಲಯದಲ್ಲಿ ವೆಸ್ಟರ್ನ್ ಡಿಸ್ಟರ್ಬನ್ಸ್ ಕಾರಣ, ಬುಧವಾರ ಮಳೆಯಾಗಿದೆ. ಇದರಿಂದಾಗಿ ಹವಾಮಾನವು ಸಾಕಷ್ಟು ಮಟ್ಟಿಗೆ ಆಹ್ಲಾದಕರವಾಗಿತ್ತು. ಗುರುವಾರ ಮಳೆಯಾಗದಿದ್ದರೂ ಸಹ ಬಿಸಿಲಿನಿಂದ ಮುಕ್ತರಾಗಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಪಶ್ಚಿಮದ ಅಡಚಣೆಯಿಂದಾಗಿ, ಹಿಮಾಲಯದ ತಗ್ಗು ಪ್ರದೇಶಗಳಲ್ಲಿ ಲಘು ಮಳೆ ಮತ್ತು ಬಲವಾದ ಗಾಳಿ ಬೀಸಿದೆ. ಇದರಿಂದಾಗಿ ಅಲ್ಲಿನ ಹವಾಮಾನವು ತಂಪಾಗಿದೆ. ಮಧ್ಯಂತರ ಗಾಳಿಯೊಂದಿಗೆ ಈಶಾನ್ಯ ಭಾರತದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಂದೆರಡು ಕಡೆ ಭಾರೀ ಮಳೆಯಾಗಿದೆ
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಹಿಮಾಲಯ ಪ್ರದೇಶದಲ್ಲಿ ಮತ್ತೊಂದು ಪಾಶ್ಚಾತ್ಯ ಅಡಚಣೆ ಸಕ್ರಿಯವಾಗುತ್ತಿದೆ. ಉತ್ತರ ಬಿಹಾರದಿಂದ ಮಧ್ಯ ಛತ್ತೀಸ್‌ಗಢದವರೆಗೆ ಗಾಳಿಯ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಇದೇ ರೀತಿಯ ಮತ್ತೊಂದು ವಾಯು ವಲಯವು ವಿದರ್ಭದಿಂದ ದಕ್ಷಿಣ ತಮಿಳುನಾಡಿನವರೆಗೆ ವಿಸ್ತರಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕಂಡು ಬರಲಿದ್ದು, ಮತ್ತೆ ವಾತಾವರಣ ಬದಲಾಗಬಹುದು.
ಇಂದಿನ ಹವಾಮಾನ ಹೀಗಿದೆ: ಹವಾಮಾನ ಶಾಸ್ತ್ರಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಜನರಿಗೆ ಬಿಸಿಗಾಳಿಯಿಂದ ನೆಮ್ಮದಿ ಸಿಗಲಿದೆ. ಹವಾಮಾನದಲ್ಲಿ ನಿರಂತರ ಬದಲಾವಣೆಯಿಂದಾಗಿ ಮೋಡಗಳು ಕಂಡುಬರುತ್ತಿವೆ.
ಮುಂದಿನ 24 ಗಂಟೆಗಳ ವರದಿ ಪ್ರಕಾರ, ಕರಾವಳಿ ಆಂಧ್ರಪ್ರದೇಶ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಒಡಿಶಾದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಈಶಾನ್ಯ ಬಿಹಾರ ಮತ್ತು ಕೇರಳದ ಒಂದೆರಡು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಬಹುದು. ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಗಳಿವೆ.