ಬಾತ್‌ ರೂಂನಲ್ಲಿ ಖ್ಯಾತ ನಟನ ಮೃತದೇಹ ಪತ್ತೆ..! ಡ್ರಗ್ಸ್‌ ಓವರ್‌ಡೋಸ್‌ ಕಾರಣವೇ..?

Actor Aditya Singh Rajput death | ಬಾಲಿವುಡ್‌ ನಟ, ಮಾಡೆಲ್‌ ಆದಿತ್ಯ ಸಿಂಗ್‌ ತಮ್ಮ ಮನೆಯ ಸ್ನಾನದ ಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಿತಿಮೀರಿದ ಡ್ರಗ್ಸ್  ಸೇವನೆಯಿಂದ ಸಾವನ್ನಪ್ಪಿರುವುದಾಗಿ ಮೂಲಗಳಿಂದ ಮಾಹಿತಿ ಬಂದಿದೆ. ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.  

Written by - Krishna N K | Last Updated : May 22, 2023, 06:00 PM IST
  • ಬಾಲಿವುಡ್‌ ನಟ, ಮಾಡೆಲ್‌ ಆದಿತ್ಯ ಸಿಂಗ್‌ ಸಾವು.
  • ಮನೆಯ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾದ ಆದಿತ್ಯ.
  • ಮಿತಿಮೀರಿದ ಡ್ರಗ್ಸ್ ಸೇವನೆಯಿಂದ ಸಾವು ಶಂಕೆ.
ಬಾತ್‌ ರೂಂನಲ್ಲಿ ಖ್ಯಾತ ನಟನ ಮೃತದೇಹ ಪತ್ತೆ..! ಡ್ರಗ್ಸ್‌ ಓವರ್‌ಡೋಸ್‌ ಕಾರಣವೇ..? title=

Actor Aditya Singh Rajput : ಖ್ಯಾತ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಸೋಮವಾರ ಮಧ್ಯಾಹ್ನ ಅವರು ಅಂಧೇರಿಯ ತಮ್ಮ ನಿವಾಸದ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನ ಸಾವಿನ ಹಿಂದೆ ಮಿತಿಮೀರಿದ ಡ್ರಗ್ಸ್ ಇರಬಹುದೆಂದು ಮೂಲಗಳು ಹೇಳುತ್ತಿವೆ.

ಹೌದು.. ಆದಿತ್ಯ ಸಿಂಗ್ ರಜಪೂತ್ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಉತ್ತಮ ಗುರುತನ್ನು ಹೊಂದಿದ್ದಾರೆ. ಅವರು ಅನೇಕ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಆದಿತ್ಯ ಕೆಲವು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮದೇ ಆದ ಪಾಪ್ ಸಂಸ್ಕೃತಿಯನ್ನು ಪ್ರಾರಂಭಿಸಿದರು. ಈ ಬ್ರಾಂಡ್ ಅಡಿಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. 

ಇದನ್ನೂ ಓದಿ: Pavitra Lokesh: ನರೇಶ್ ನನ್ನ ಸಂಗಾತಿ ಮಾತ್ರವಲ್ಲ.. ಪವಿತ್ರಾ ಲೋಕೇಶ್ ಕುತೂಹಲಕಾರಿ ಪ್ರತಿಕ್ರಿಯೆ!

ನಟನ ಹಠಾತ್ ನಿಧನದಿಂದ ಚಿತ್ರರಂಗಕ್ಕೆ ಭಾರಿ ನಷ್ಟ ಉಂಟಾಗಿದೆ. ನಿನ್ನೆಯವರೆಗೂ ಪಾರ್ಟಿ ಮಾಡಿ ನಗುತ್ತಿದ್ದ ಆದಿತ್ಯ ಇಂದಿಲ್ಲ. ದೆಹಲಿಯ ನಿವಾಸಿ ಆದಿತ್ಯ ಸಿಂಗ್ ರಜಪೂತ್ ಮಾಡೆಲಿಂಗ್ ವೃತ್ತಿಜೀವನದಲ್ಲೂ ಸಹ ಉತ್ತಮ ಹೆಸರು ಸಂಪಾದಿಸಿದ್ದರು. ಅವರು 'ಕ್ರಾಂತಿವೀರ್' ಮತ್ತು 'ಮೈನೆ ಗಾಂಧಿ ಕೋ ನಹೀ ಮಾರಾ' ಚಿತ್ರಗಳಲ್ಲಿಯೂ ಸಹ ಕೆಲಸ ಮಾಡಿದರು. ಇದಲ್ಲದೇ ಟಿವಿಯಲ್ಲಿ ಸುಮಾರು 300 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಟಿವಿ ರಿಯಾಲಿಟಿ ಶೋ ʼಸ್ಪ್ಲೀಟ್ಸ್‌ ವಿಲ್ಲಾʼ ದಲ್ಲಿಯೂ ಕಾಣಿಸಿಕೊಂಡಿದ್ದರು.

ಗ್ಲಾಮರ್ ಲೋಕದಲ್ಲಿ ವಿಶೇಷವಾದ ಐಡೆಂಟಿಟಿ ಹೊಂದಿದ್ದ ಆದಿತ್ಯ 'ಗಂದಿ ಬಾತ್' ವೆಬ್ ಸರಣಿಯಲ್ಲೂ ಕೆಲಸ ಮಾಡಿದ್ದರು. ಹೆಚ್ಚಾಗಿ ಕಾಸ್ಟಿಂಗ್ ಕೆಲಸದಲ್ಲಿ ಗಮನ ಹರಿಸುತ್ತಿದ್ದರು. ಮುಂಬೈನ ಗ್ಲಾಮರ್ ಸರ್ಕಿಟ್‌ನಲ್ಲಿ ಆದಿತ್ಯಗೆ ವಿಶೇಷ ಗುರುತು ಇತ್ತು. ಆಗಾಗ್ಗೆ ಪಾರ್ಟಿಗಳಲ್ಲಿ ಮತ್ತು ಪೇಜ್‌ 3 ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದೆಹಲಿಯಲ್ಲಿ ಹುಟ್ಟಿ ಬೆಳೆದಿದ್ದ ಆದಿತ್ಯ ಮೂಲತಃ ಉತ್ತರಾಖಂಡದವರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News