Gufi Paintal: ಮಹಾಭಾರತದ ಶಕುನಿ ಮಾಮಾ ಎಂದೇ ಖ್ಯಾತರಾದ ಗುಫಿ ಪೈಂಟಲ್ ನಿಧನ

Gufi Paintal Passes Away: ಮಹಾಭಾರತದಲ್ಲಿ ಶಕುನಿ ಮಾಮ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಹಿರಿಯ ನಟ ಗುಫಿ ಪೈಂಟಲ್ ಇಹಲೋಕ ತ್ಯಜಿಸಿದ್ದಾರೆ. ಅವರ ಪುತ್ರ ಹ್ಯಾರಿ ಪೈಂಟಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Written by - Chetana Devarmani | Last Updated : Jun 5, 2023, 12:42 PM IST
  • ಮಹಾಭಾರತದ ಶಕುನಿ ಮಾಮಾ ಇನ್ನಿಲ್ಲ
  • ಶಕುನಿ ಮಾಮಾ ಎಂದೇ ಖ್ಯಾತರಾದ ಗುಫಿ ಪೈಂಟಲ್
  • ಈ ಬಗ್ಗೆ ಮಾಹಿತಿ ಹಂಚಿಕೊಂಡ ಪುತ್ರ ಹ್ಯಾರಿ ಪೈಂಟಲ್
Gufi Paintal: ಮಹಾಭಾರತದ ಶಕುನಿ ಮಾಮಾ ಎಂದೇ ಖ್ಯಾತರಾದ ಗುಫಿ ಪೈಂಟಲ್ ನಿಧನ  title=
Gufi Paintal

Gufi Paintal Passes Away: ಮಹಾಭಾರತದ ಶಕುನಿ ಮಾಮಾ ಎಂದು ಪ್ರಸಿದ್ಧರಾಗಿದ್ದ 78 ವರ್ಷದ ಹಿರಿಯ ನಟ ಗುಫಿ ಪೈಂಟಲ್ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು (ಜೂನ್ 5) ಬೆಳಿಗ್ಗೆ 9 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಅವರ ಪುತ್ರ ಹ್ಯಾರಿ ಪೈಂಟಲ್ ಮಾಹಿತಿ ಹಂಚಿಕೊಂಡಿದ್ದಾರೆ.

"ನಮ್ಮ ತಂದೆ ಗುಫಿ ಪೈಂಟಲ್ (ಶಕುನಿ ಮಾಮಾ) ಅಗಲಿಕೆಯನ್ನು ನಾವು ಆಳವಾದ ದುಃಖದಿಂದ ಘೋಷಿಸುತ್ತೇವೆ." ಎಂದು ಅವರ ಪುತ್ರ ಮಾಹಿತಿ ಹಂಚಿಕೊಂಡಿದ್ದಾರೆ. ಬಿ.ಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ಶಕುನಿ ಮಾಮಾ ಪಾತ್ರವನ್ನು ನಿರ್ವಹಿಸುವ ಮೂಲಕ ಗುಫಿ ಪೈಂಟಲ್ ಮನೆಮನೆ ಮಾತಾಗಿದ್ದರು. 

ಇದನ್ನೂ ಓದಿ: ಶಾರುಖ್, ಸಲ್ಮಾನ್ ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರೇ

ಗುಫಿ ಪೈಂಟಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿತ್ತು.
ಗುಫಿ ಪೈಂಟಲ್ ಪ್ರತಿಭೆ ಕೇವಲ ನಟನೆಗೆ ಸೀಮಿತವಾಗಿರಲಿಲ್ಲ, ದೂರದರ್ಶನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರು ದೇಸ್ ಪರ್ದೇಸ್, ದಿಲ್ ಲಗಿ, ಮೈದಾನ್-ಎ-ಜಂಗ್, ದಾವಾ ಮುಂತಾದ ಅನೇಕ ಜನಪ್ರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 

ಕಾನೂನ್, ಸೌದಾ, ಅಕ್ಬರ್ ಬೀರ್ಬಲ್, ಓಂ ನಮಃ ಶಿವಾಯ, ಶ್ರೀಮತಿ ಕೌಶಿಕ್ ಕಿ ಪಾಂಚ್ ಬಹುಯೆನ್ ಸೇರಿದಂತೆ ಅನೇಕ ಶೋಗಳ ಮೂಲಕ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದಾರೆ. ಅವರು ಕೊನೆಯ ಬಾರಿಗೆ ಟಿವಿ ಶೋ ಜೈ ಕನ್ಹಯ್ಯಾ ಲಾಲ್ ಕಿಯಲ್ಲಿ ಕಾಣಿಸಿಕೊಂಡರು. ಮಹಾಭಾರತ ಎಂಬ ಪೌರಾಣಿಕ ಕಥೆಯು ಭಾರಿ ಹಿಟ್ ಆಗಿತ್ತು ಮತ್ತು ಆ ದಿನಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿತ್ತು. ಗುಫಿ ಪೈಂಟಲ್ ಮಹಾಭಾರತದಲ್ಲಿ ಶಕುನಿ ಮಾಮಾ ಪಾತ್ರವನ್ನು ನಿರ್ವಹಿಸಿದರು ಮತ್ತು ಸಾಕಷ್ಟು ಖ್ಯಾತಿಗಳಿಸಿದರು. 

ಇದನ್ನೂ ಓದಿ: ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಬಿಚ್ಚಿಟ್ಟ ತಾಯಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News