Rashmika Mandanna: ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಬಿಚ್ಚಿಟ್ಟ ತಾಯಿ

Rashmika Mandanna - Rakshit Shetty break-up: ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸುಮಾರು ಒಂದು ವರ್ಷದ ನಂತರ, ಅವರು 2017 ರಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು.   

Written by - Chetana Devarmani | Last Updated : Jun 5, 2023, 10:34 AM IST
  • ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ನಟಿಸಿದ್ದ ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ
  • ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಇದು
  • ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಬಿಚ್ಚಿಟ್ಟ ತಾಯಿ
Rashmika Mandanna: ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಬಿಚ್ಚಿಟ್ಟ ತಾಯಿ   title=
Rashmika Mandanna - Rakshit Shetty

Rashmika Mandanna And Rakshit Shetty : ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಒಮ್ಮೆ ಕನ್ನಡದ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು ಹಳೆಯ ವಿಚಾರ. ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸುಮಾರು ಒಂದು ವರ್ಷದ ನಂತರ, ಅವರು 2017 ರಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ಗ್ರ್ಯಾಂಡ್‌ ಎಂಗೇಜ್ಮೆಂಟ್‌ ನಡೆದಿತ್ತು. ಆದರೆ ಸೆಪ್ಟೆಂಬರ್ 2018 ರಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬೇರ್ಪಟ್ಟರು.

ಹೊಂದಾಣಿಕೆಯ ಸಮಸ್ಯೆಗಳಿಂದ ಅವರು ಬೇರ್ಪಟ್ಟಿದ್ದಾರೆ ಎಂದು ವರದಿಯಾಯಿತು. ಆದರೆ ಈ ಬ್ರೇಕಪ್‌ನಿಂದಾಗಿ ಇಬ್ಬರ ಕುಟುಂಬದವರೂ ಆಘಾತಗೊಂಡರು ಎಂದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಹೇಳಿದ್ದಾರೆ. 2018 ರಲ್ಲಿ ಡಿಎನ್‌ಎ ಇಂಡಿಯಾ ವರದಿ ಮಾಡಿದಂತೆ, ಹೊಂದಾಣಿಕೆ ಸಮಸ್ಯೆಯಿಂದ ರಶ್ಮಿಕಾ ಮತ್ತು ರಕ್ಷಿತ್‌ ಬೇರ್ಪಟ್ಟಿದ್ದಾರೆ ಎಂದು ನಟಿ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ತಿಳಿಸಿದ್ದಾರೆ. "ನಾವು ತೊಂದರೆಗೀಡಾಗಿದ್ದೇವೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೆ, ಅವನ ಜೀವನ ಮೊದಲು. ಯಾರೂ ಒಬ್ಬರನ್ನೊಬ್ಬರು ನೋಯಿಸಲು ಇಷ್ಟಪಡುವುದಿಲ್ಲ ಮತ್ತು ಎಲ್ಲರೂ ಸಂತೋಷವಾಗಿರಬೇಕು" ಎಂದಿದ್ದಾರೆ.

ಇದನ್ನೂ ಓದಿ: LEAKED: ಟೈಗರ್ 3 ಚಿತ್ರದ ಸಲ್ಮಾನ್ ಖಾನ್ - ಶಾರುಖ್ ಖಾನ್ ಲುಕ್ ವೈರಲ್

ರಶ್ಮಿಕಾ ತನ್ನ ಪೋಷಕರು, ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜೊತೆ ಸಮಾಲೋಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡರು. ಇದು ಕಠಿಣ ನಿರ್ಧಾರವಾಗಿತ್ತು. ಆದರೆ ಈ ವೈಯಕ್ತಿಕ ಮತ್ತು ಭಾವನಾತ್ಮಕ ಹಿನ್ನಡೆಯಿಂದ ಆದ ನೋವಿನಿಂದ ಹೊರಬರಲು ರಶ್ಮಿಕಾ ಸಾಕಷ್ಟು ಕಷ್ಟಪಟ್ಟರು. ಇದೀಗ ತೆಲುಗು ಮತ್ತು ಕನ್ನಡದಲ್ಲಿ ಅನೇಕ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೇ, ಬಾಲಿವುಡ್‌ನಲ್ಲಿಯೂ ಉತ್ತಮ ಆಫರ್‌ಗಳನ್ನು ಪಡೆಯುತ್ತಿದ್ದಾರೆ. 

ರಕ್ಷಿತ್‌ ಶೆಟ್ಟಿ ಜೊತೆ ಬ್ರೇಕಪ್‌ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ವದಂತಿಗಳು ಹರಿದಾಡುತ್ತಿದ್ದವು. ಆದರೆ ಇಬ್ಬರೂ ತಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಪದೆ ಪದೇ ಸ್ಪಷ್ಟನೆ ನೀಡಿದರು. ಕೆಲಸದ ಮುಂಭಾಗದಲ್ಲಿ, ರಶ್ಮಿಕಾ ಮಂದಣ್ಣ ಕೆಲವು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ರೇನ್‌ಬೋ, ಪುಷ್ಪಾ 2 ಹೀಗೆ ಕೆಲವು ಸಿನಿಮಾಗಳಿವೆ.

ಇದನ್ನೂ ಓದಿ: 'Filmfare ಪ್ರಶಸ್ತಿಗಳನ್ನು ನಾನು ನನ್ನ ಫಾರ್ಮ್ ಹೌಸ್ ನ ವಾಶ್ರೂಮ್ ಬಾಗಿಲುಗಳ ಹಿಡಿಕೆಗಳನ್ನಾಗಿಸಿದ್ದೇನೆ'

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News