2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಕೋಕ್ ಸಾಧ್ಯತೆ!

Lok Sabha Election: ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಮಣೆ ಹಾಕಿದ್ದ ಬಿಜೆಪಿ, ಇದೀಗ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದ್ದು, ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಕೋಕ್ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

Written by - Zee Kannada News Desk | Edited by - Yashaswini V | Last Updated : Jun 7, 2023, 01:31 PM IST
  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ಸಂಸದರಿಗೆ ಕೋಕ್ ನೀಡುವ ಸಾಧ್ಯತೆ
  • ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಸಂಸದರು
  • ಕ್ಷೇತ್ರದಲ್ಲಿ ಹೊಸಬರನ್ನು ಬೆಳೆಸುವುದು, ಪಕ್ಷ ಸಂಘಟಿಸುವುದು, ಅಧಿಕಾರ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗದಿರುವುದು, ಕ್ಷೇತ್ರದಲ್ಲಿ ವರ್ಚಸ್ಸು ಕುಂದಿರುವುದು ಹೀಗೆ ಹಲವು ಲೆಕ್ಕಾಚಾರ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಕೋಕ್ ಸಾಧ್ಯತೆ!  title=

Lok Sabha Elections 2024: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೆಲ ಸಂಸದರ ನಿದ್ದೆಗೆಡಿಸಿದ್ದೂ ಸುಳ್ಳಲ್ಲ.   ಸಂಸದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಈ ವಿಚಾರವಾಗಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ, ವಿನಾಕಾರಣ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ. ಪಕ್ಷದೊಳಗಿನವರೋ, ಹೊರಗಿನವರೋ ಗೊತ್ತಿಲ್ಲ. ಆದರೆ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ. 

ವಾಸ್ತವವಾಗಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 70ಕ್ಕೂ ಹೆಚ್ಚು ಹೊಸ ಮುಖಗಗಳಿಗೆ ಮಣೆ ಹಾಕಿತ್ತು. ಲೋಕಸಭೆ ಚುನಾವಣೆಯಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ- Nitin Gadkari : 'ನನ್ನ ಕೆಲಸ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ'

ಕ್ಷೇತ್ರದಲ್ಲಿ ಹೊಸಬರನ್ನು ಬೆಳೆಸುವುದು, ಪಕ್ಷ ಸಂಘಟಿಸುವುದು, ಅಧಿಕಾರ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗದಿರುವುದು ಹೀಗೆ ಎಲ್ಲ ವಿಧದಲ್ಲೂ ಯೋಚಿಸಿ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆಲ್ಲ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎಂಬುದರ ವಿವರ ಇಲ್ಲಿದೆ....

೧) ರಮೇಶ್‌ ಜಿಗಜಿಣಗಿ- ವಿಜಯಪುರ ಕ್ಷೇತ್ರ.  ವಯಸ್ಸಾಗಿದೆ (5 ಬಾರಿ ಸಂಸದ)
 
೨) ಮಂಗಳಾ ಅಂಗಡಿ - ಬೆಳಗಾವಿ ಕ್ಷೇತ್ರ- ವಯಸ್ಸಿದೆ ಆದರೂ ಟಿಕೆಟ್‌ ಅನುಮಾನ. ಕಾರಣ ಪತಿ ಸುರೇಶ್‌ ಅಂಗಡಿ ನಿಧನವಾಗಿ, - ಅನುಕಂಪವಿದ್ದರೂ ಕಡಿಮೆ ಅಂತರದಲ್ಲಿ ಗೆಲುವು. ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿಲ್ಲ. 

೩) ಶಿವಕುಮಾರ್‌ ಉದಾಸಿ- ಹಾವೇರಿ ಕ್ಷೇತ್ರ- ರಾಜಕೀಯದಲ್ಲಿ ನಿರಾಸಕ್ತಿ. ಕ್ಷೇತ್ರದಲ್ಲಿ ತಂದೆ ಸಿಎಂ ಉದಾಸಿಯಂತೆ ಹೆಸರು ಮಾಡಿಲ್ಲ. ಜನರ ನೀರಿಕ್ಷೆಗೆ ತಕ್ಕಂತೆ ಸ್ಪಂಧಿಸಿಲ್ಲ ಎಂಬ ಆರೋಪವೂ ಇದೆ. 

೪) ಅನಂತ ಕುಮಾರ್‌ ಹೆಗಡೆ- ರಾಜಕೀಯ ನಿರಾಸಕ್ತಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತಿದೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ವಿರೋಧವಿದೆ. ಸಚಿವರಾದಾಗಲೂ ಕೆಲಸ ಮಾಡಿಲ್ಲ. ಭಾಷಣ ಬಿಟ್ಟರೆ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ವಾಜಪೇಯಿ ಕಾಲದಿಂದ ಗೆಲ್ಲುತ್ತಿದ್ದರೂ ಕ್ಷೇತ್ರದಲ್ಲಿ ಕೆಲಸವಾಗಿಲ್ಲ. 

೫) ನಳಿನ್‌ ಕುಮಾರ್‌ ಕಟೀಲ್-‌ ಮಂಗಳೂರು ಕ್ಷೇತ್ರ. ರಾಜ್ಯಾಧ್ಯಕ್ಷರಾಗಿ ವೈಫಲ್ಯ, ಸ್ಥಳೀಯ ವಿರೋಧ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ನಳೀನ್‌ಕುಮಾರ್‌ ಕಾರನ್ನ ಹಿಡಿದು ಅಲ್ಲಾಡಿಸಿಬಿಟ್ಟಿದ್ದರು.

ಇದನ್ನೂ ಓದಿ- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ! ಹೇಗಿರುವುದು ಸೀಟು ಹಂಚಿಕೆ ಲೆಕ್ಕ ?

೬) ಶ್ರೀನಿವಾಸ್‌ ಪ್ರಸಾದ್- ಚಾಮರಾಜನಗರ ಕ್ಷೇತ್ರ. ತೀರ ವಯಸ್ಸಾಗಿದೆ. ಅನಾರೋಗ್ಯದ ಸಮಸ್ಯೆ ಕೂಡ ಇದೆ. 

೭) ಡಿ.ವಿ. ಸದಾನಂದಗೌಡ- ಬೆಂಗಳೂರು ಉತ್ತರ ಕ್ಷೇತ್ರ- ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದರೂ ಪ್ರಭಾವಿ ಎನಿಸಿಕೊಂಡಿಲ್ಲ. ಪಕ್ಷದ ಮುಖವಾಣಿ ಕೂಡ ಆಗಿಲ್ಲ. ಮಹಿಳೆಯೋರ್ವಳ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ವೈರಲ್‌ ಆಗಿತ್ತು. ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ.

೮) ಜಿಎಸ್‌ ಬಸವರಾಜು- ತುಮಕೂರು ಕ್ಷೇತ್ರ- ವಯಸ್ಸಾಗಿದೆ. ಕ್ಷೇತ್ರದಲ್ಲಿ ವಿರೋಧಿ ಅಲೆ. 

೯) ಬಿ.ಎನ್‌. ಬಚ್ಚೇಗೌಡ - ಚಿಕ್ಕಬಳ್ಳಾಪುರ ಕ್ಷೇತ್ರ- ವಯಸ್ಸಾಗಿದೆ. ಜೊತೆಗೆ ಇವರ ಮಗ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಪಕ್ಷ ನಿಷ್ಟೆ ಇರುವುದು ಅನುಮಾನ ಎಂಬ ಕಾರಣಕ್ಕೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದೆ. 

೧೦) ಸಂಗಣ್ಣ ಕರಡಿ- ಕೊಪ್ಪಳ ಕ್ಷೇತ್ರ- ವಯಸ್ಸಾಗಿದೆ. ಕ್ಷೇತ್ರದಲ್ಲಿ ವರ್ಚಸ್ಸು ಕುಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News