Ajab Gajab village in World: ಈ ಜಗತ್ತು ಹಲವಾರು ರಹಸ್ಯಗಳನ್ನು ಹೊಂದಿದೆ. ನಿಗೂಢತೆಗಳಿಂದ ತುಂಬಿರುವ ಈ ಪ್ರಕೃತಿಯಲ್ಲಿ ನಮಗೆ ತಿಳಿಯದ ಅನೇಕ ವಿಚಾರಗಳಿವೆ. ಈ ಜಗತ್ತಿನಲ್ಲಿಒಂದು ವಿಷಿತ್ರ ಗ್ರಾಮವಿದೆ. ಇಲ್ಲಿ ಹುಟ್ಟಿದ ಪ್ರತಿ ಮಗು ಜನನದ ಬಳಿಕ ಕುರುಡಾಗುತ್ತದೆ. ಕೇವಲ ಮಾನವರಲ್ಲ ಈ ಗ್ರಾಮದಲ್ಲಿ ಜನಿಸುವ ಪ್ರಾಣಿಗಳಿಗೂ ಸಹ ಕಣ್ಣು ಕಾಣುವುದಿಲ್ಲ. ಇದನ್ನು ಕೇಳಿ ನೀವು ಆಶ್ಚರ್ಯ ಪಡಬಹುದು. ಆದರೆ ಇದು ಸಂಪೂರ್ಣ ಸತ್ಯ. ಮೆಕ್ಸಿಕೋದ ಈ ಹಳ್ಳಿಯಲ್ಲಿ ಹುಟ್ಟುವ ಪ್ರತಿ ಮಗುವೂ ದೃಷ್ಟಿ ಕಳೆದುಕೊಳ್ಳುತ್ತದೆ.
ಇದನ್ನೂ ಓದಿ: 'ದೆಹಲಿಗೆ ಹೋಗಿ ಮತ್ತು ನೀವೇ ನೋಡಿ', ಭಾರತದ ಪ್ರಜಾಪ್ರಭುತ್ವದ ಆರೋಗ್ಯ ಪ್ರಶ್ನಿಸುವವರಿಗೆ ಅಮೆರಿಕ ತಿರುಗೇಟು
ಶಾಪಗ್ರಸ್ತ ಮರವೇ ಅಂಧತ್ವಕ್ಕೆ ಕಾರಣ?
ಈ ವಿಷಯವು ತುಂಬಾ ಆಘಾತಕಾರಿ ಮತ್ತು ವಿಸ್ಮಯಕಾರಿಯಾಗಿದೆ. ಆದರೆ ಮೆಕ್ಸಿಕೋದ ಟಿಲ್ಟೆಪಾಕ್ ಗ್ರಾಮದಲ್ಲಿ (ಮೆಕ್ಸಿಕೋದ ಬ್ಲೈಂಡ್ ವಿಲೇಜ್) ವಾಸಿಸುವ ಬುಡಕಟ್ಟಿನ ಪ್ರತಿಯೊಬ್ಬ ಸದಸ್ಯರು ಕುರುಡರಾಗಿದ್ದಾರೆ. ಇದು ವಿಶ್ವದ ನಿಗೂಢ ಹಳ್ಳಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಲ್ಲಿ ಮಗು ಜನಿಸಿದಾಗ ಅವನ ಕಣ್ಣುಗಳು ಚೆನ್ನಾಗಿದ್ದರೂ ಕ್ರಮೇಣ ಅವನ ದೃಷ್ಟಿ ಹೋಗಲಾರಂಭಿಸುತ್ತದೆ. ಈ ಕುರುಡುತನಕ್ಕೆ ಕಾರಣ ಈ ಗ್ರಾಮದಲ್ಲಿ ಶಾಪಗ್ರಸ್ತ ಮರ ಎಂದು ಅನೇಕರು ಹೇಳುತ್ತಾರೆ. ಟಿಲ್ಟೆಪಾಕ್ ಗ್ರಾಮದ ಬುಡಕಟ್ಟು ಜನಾಂಗದ ಹಿರಿಯರ ಪ್ರಕಾರ, ಲಾವಾಜುವೆಲಾ (Lava Juwela) ಎಂಬ ಹೆಸರಿನ ಈ ಮರವನ್ನು ನೋಡಿದ ನಂತರ, ಜನರು ಮಾತ್ರವಲ್ಲ ಪ್ರಾಣಿಗಳು ಸಹ ಕುರುಡಾಗುತ್ತವೆ. ಆದರೆ, ಇದು ಮೂಢನಂಬಿಕೆ ಮಾತ್ರ ಎಂಬುದು ಅನೇಕರ ವಾದವಾಗಿದೆ. ವಿಜ್ಞಾನಿಗಳ ಪ್ರಕಾರ, ಇಲ್ಲಿ ಕುರುಡುತನಕ್ಕೆ ಕಾರಣ ಬೇರೆ ಯಾವುದೋ ಅಂಶ ಎನ್ನಲಾಗಿದೆ.
ವಿಜ್ಞಾನಿಗಳು ಏನು ಹೇಳುತ್ತಾರೆ?
ಸ್ಥಳೀಯ ಜನರಲ್ಲದೆ, ವಿಶೇಷ ಜಾತಿಯ ವಿಷಕಾರಿ ನೊಣಗಳು ಇಲ್ಲಿ ಕಂಡುಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಷಕಾರಿ ನೊಣದ ಕಡಿತವೇ ಈ ಅಂಧತ್ವಕ್ಕೆ ಕಾರಣ ಎನ್ನುತ್ತಾರೆ. ಇದರ ಕಡಿತದಿಂದಲೇ ಇಲ್ಲಿನ ಜನರು ಕ್ರಮೇಣ ಕುರುಡರಾಗುತ್ತಾರೆ. ಈ ನೊಣವು ಪ್ರಾಣಿಗಳ ಕುರುಡುತನಕ್ಕೂ ಕಾರಣವಾಗಿದೆ. ಮೆಕ್ಸಿಕನ್ ಸರ್ಕಾರವು ಇಲ್ಲಿನ ಜನರ ಕಲ್ಯಾಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿತು. ಆದರೆ ಎಲ್ಲವೂ ವಿಫಲವಾದವು.
ಇದನ್ನೂ ಓದಿ: America-China ಮಧ್ಯೆ ಯುದ್ಧ ನಡೆಯಲಿದೆಯಾ? ವಿಶ್ವಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿದೆ ಈ ತೈವಾನ್ ವಿಡಿಯೋ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.