Yash said no to Ravana : ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಬಳಿಕ ಭಾರತದಾದ್ಯಂತ ಹವಾ ಕ್ರಿಯೇಟ್ ಮಾಡಿದ್ದಾರೆ. ದೇಶಾದ್ಯಂತ ಅನೇಕರು ಇವರ ಅಭಿಮಾನಿಗಳಾಗಿದ್ದಾರೆ. ಅವರ ಜನಪ್ರಿಯತೆಯು ಅಭೂತಪೂರ್ವ ಮಟ್ಟಕ್ಕೆ ಏರಿದೆ. ಅವರ ಮುಂಬರುವ ಸಿನಿಮಾ ಯಾವುದೆಂದು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಹಿಂದೂ ಮಹಾಕಾವ್ಯ ರಾಮಾಯಣದಿಂದ ಸ್ಫೂರ್ತಿ ಪಡೆದ ನಿರ್ದೇಶಕ ನಿತೇಶ್ ತಿವಾರಿ ಅವರ ಸಿನಿಮಾದಲ್ಲಿ ರಾವಣನ ಪಾತ್ರಕ್ಕಾಗಿ ಯಶ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗ್ತಿದೆ.
ಮೂಲಗಳ ಪ್ರಕಾರ, ಯಶ್ ರಾವಣನ ಪಾತ್ರದಲ್ಲಿ ನಟಿಸಲು ಒಪ್ಪಿಲೊಂಡಿಲ್ಲ. ರಾಮನ ಪಾತ್ರಕ್ಕಿಂತ ರಾವಣನ ಪಾತ್ರ ಹೆಚ್ಚು ಸವಾಲಿನ ಸಂಗತಿಯಾಗಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿದ್ದರಿಂದ, ಯಶ್ ಅವರನ್ನು ರಾವಣನ ಪಾತ್ರಕ್ಕಾಗಿ ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ಆದರೆ ಯಶ್ ಅವರನ್ನು ನೆಗೆಟಿವ್ ಶೇಡ್‌ನಲ್ಲಿ ನೋಡುವುದನ್ನು ಅವರ ಅಭಿಮಾನಿಗಳು ಅಷ್ಟೊಂದು ಇಷ್ಟಪಡಲ್ಲ ಎಂಬ ಅಭಿಪ್ರಾಯವಿದೆ. ಇದೇ ಕಾರಣಕ್ಕೆ ಯಶ್ ರಾವಣನ ಪಾತ್ರಕ್ಕೆ ನೋ ಎಂದರು ಎನ್ನಲಾಗ್ತಿದೆ.
ಇದನ್ನೂ ಓದಿ: ಸ್ಟಾರ್ ನಟ - ನಟಿಯರ ಬಾಡಿಗಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಯಾಲರಿ ಯಾರದ್ದು ಗೊತ್ತಾ?
ಈ ಮಧ್ಯೆ, ಯಶ್ ಕೂಡ ಒಮ್ಮೆ, "ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಅವರು ತುಂಬಾ ಭಾವುಕರಾಗಿದ್ದಾರೆ ಮತ್ತು ನಾನು ಅವರ ಇಚ್ಛೆಗೆ ವಿರುದ್ಧವಾಗಿ ಹೋದಾಗ ಅವರು ಅತಿಯಾಗಿ ಪ್ರತಿಕ್ರಿಯಿಸುತ್ತಾರೆ" ಎಂದು ಹೇಳಿದ್ದರು.
ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಬಳಿಕ ಯಶ್ ಇದುವರೆಗೂ ತಮ್ಮ ಮುಂದಿನ ಪ್ರಾಜೆಕ್ಟ್‌ನ್ನು ಘೋಷಿಸಿಲ್ಲ. ಊಹಾಪೋಹಗಳ ಪ್ರಕಾರ, ನಟ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಮುಂದಿನ ಚಿತ್ರಕ್ಕೆ ಕೈಜೋಡಿಸಬಹುದು ಎಂದು ಹೇಳಲಾಗಿದೆ. ಆದರೂ ಅಧಿಕೃತವಾಗಿ ಈವರೆಗೂ ಯಾವುದನ್ನೂ ಪ್ರಕಟಿಸಿಲ್ಲ.
ಇದನ್ನೂ ಓದಿ: ANIMAL ಫ್ರೀ-ಟೀಸರ್ ನಲ್ಲಿ ಕಂಡು ಬಂದ ರಣಬೀರ್ ಕಪೂರ್ ಉಗ್ರ ರೂಪ
ಅಭಿವಾ ಮದುವೆಯಲ್ಲಿ ಜನರ ಮನಗೆದ್ದ ಯಶ್ :
ಯಶ್ ಇತ್ತೀಚೆಗೆ ದಕ್ಷಿಣದ ಉದಯೋನ್ಮುಖ ನಟ ಅಭಿಷೇಕ್ ಅಂಬರೀಶ್ ಅವರ ವಿವಾಹದಲ್ಲಿ ಭಾಗಿಯಾಗಿದ್ದರು. ಅವರು ಬೆಂಗಳೂರಿನಲ್ಲಿ ನಡೆದ ರಿಸೆಪ್ಶನ್, ಪಾರ್ಟಿ ಯಲ್ಲೂ ಕಾಣಿಸಿಕೊಂಡರು. ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ "ಅಣ್ತಮ್ಮ" ಹಾಡಿಗೆ ನೃತ್ಯ ಮಾಡಿದರು. ಈವೆಂಟ್‌ನಲ್ಲಿ ದರ್ಶನ್ ಅವರನ್ನು ಸರ್ ಯಶ್ ಎಂದು ಕರೆದಿರುವುದು ಹಲವಾರು ಹೃದಯಗಳನ್ನು ಗೆದ್ದಿತು.
ಅಭಿಷೇಕ್ ಅಂಬರೀಶ್ ಅವರ ತಂದೆ ಅಂಬರೀಶ್ ಅವರು ಯಶ್ ಅವರ ಮಾರ್ಗದರ್ಶಕರಾಗಿದ್ದರು. ಅಲ್ಲದೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಯಶ್ ಮತ್ತು ದರ್ಶನ್ ಇಬ್ಬರೂ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದರು. ಈ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರೀ ಅಂತರದಿಂದ ಸುಮಲತಾ ಗೆದ್ದಿದ್ದರು.
ಇದನ್ನೂ ಓದಿ: WATCH: ಅಭಿವಾ ಪಾರ್ಟಿಯಲ್ಲಿ ಸುಮಲತಾ ಜೊತೆ ಯಶ್, ದಚ್ಚು ಭರ್ಜರಿ ಸ್ಟೆಪ್, ಮಾಲಾಶ್ರೀ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.