ANIMAL ಫ್ರೀ-ಟೀಸರ್ ನಲ್ಲಿ ಕಂಡು ಬಂದ ರಣಬೀರ್ ಕಪೂರ್ ಉಗ್ರ ರೂಪ

ANIMAL Pre-Teaser: ಆಗಸ್ಟ್ 11, 2023 ರಂದು ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬೆಳ್ಳಿ ಪರದೆಗೆ ಬರಲಿದೆ.  

Written by - Nitin Tabib | Last Updated : Jun 11, 2023, 05:29 PM IST
  • ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರು 'ಅನಿಮಲ್' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
  • ತಾರಾಗಣದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಪರಿಣಿತಿ ಚೋಪ್ರಾ ಇದ್ದಾರೆ.
  • ಚಿತ್ರವು ನಾಯರ್ ದರೋಡೆಕೋರರ ಚಿತ್ರವಾಗಿದ್ದು, ಇದು ಕುಟುಂಬದ ಉತ್ತರಾಧಿಕಾರದ ನಾಟಕದ ಸುತ್ತ ಹೆಣೆದ ಒಂದು ಕತೆಯಾಗಿದೆ.
  • ಚಿತ್ರದ ಬಿಡುಗಡೆ ವಿಳಂಬದ ಬಗ್ಗೆ ವದಂತಿಗಳು ಇದ್ದರೂ ಕೂಡ, ಆಗಸ್ಟ್ 11 ರಂದು ತೆರೆಗೆ ಬರಲು ಸಿದ್ಧವಾಗಿದೆ.
ANIMAL ಫ್ರೀ-ಟೀಸರ್ ನಲ್ಲಿ ಕಂಡು ಬಂದ ರಣಬೀರ್ ಕಪೂರ್ ಉಗ್ರ ರೂಪ title=

ANIMAL Pre-Teaser Release: ರಣಬೀರ್ ಕಪೂರ್ ಅಭಿನಯದ ಅವರ ಮುಂಬರುವ ಚಿತ್ರ 'ಅನಿಮಲ್' ಚಿತ್ರದ ಪ್ರಿ-ಟೀಸರ್ ಭಾನುವಾರ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ, ರಣಬೀರ್ ಗೋಲ್ಡನ್ ಮಾಸ್ ಧರಿಸಿರುವ ಅನೇಕ ಜನರೊಂದಿಗೆ ಮತ್ತು ಆ ಗುಂಪಿನ ಸರ್ದಾರ್‌ನೊಂದಿಗೆ ಹೋರಾಟುತ್ತಿರುವುದನ್ನು ನೀವು ನೋಡಬಹುದಾಗಿದೆ.  ಟೀಸರ್‌ನಲ್ಲಿ ನಟನ ಮುಖವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲ. ಆತರ ಆತ  ತನ್ನ ಕೈಯಲ್ಲಿಲ್ಲಿರುವ ಕೊಡಲಿಯಿಂದ ತನ್ನ ಕೋಪವನ್ನು ವ್ಯಕ್ತಪಡಿಸುತ್ತಿದ್ದಾನೆ ಮತ್ತು ಏಕಾಂಗಿಯಾಗಿ ಗ್ಯಾಂಗ್ ನ ಸದಸ್ಯರನ್ನು ಮಟ್ಟ ಹಾಕುತ್ತಿದ್ದಾನೆ. 'ಕಬೀರ್ ಸಿಂಗ್' ಮತ್ತು 'ಅರ್ಜುನ್ ರೆಡ್ಡಿ' ಗಳಂತಹ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾದ ಸಂದೀಪ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಮತ್ತು ಟ್ರಿಪ್ತಿ ದಿಮ್ರಿ ಕೂಡ ನಟಿಸಿದ್ದಾರೆ.

ಇದನ್ನೂ ಓದಿ-National Training Conclave: ದೇಶದ ಮೊಟ್ಟಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಉದ್ಘಾಟಿಸಿದ ಪ್ರಧಾನಿ ಮೋದಿ

ಭೂಷಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿರುವ ಅನಿಮಲ್ ಆಗಸ್ಟ್ 11, 2023 ರಂದು ಥಿಯೇಟರ್‌ಗಳಲ್ಲಿ ಬರಲಿದೆ ಎಂದು ವರದಿ ಪ್ರಕಟಗೊಂಡಿದೆ. ಇದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಹೀಗೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಕಪೂರ್ ಅಭಿನಯದ 'ಅನಿಮಲ್', ಸನ್ನಿ ಡಿಯೋಲ್ ಅವರ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅಭಿನಯದ 'OMG 2' ಚಿತ್ರಗಳಿಗೆ  ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಪೈಪೋಟಿ ನೀಡಲಿದೆ. ಅನಿಲ್ ಶರ್ಮಾ ನಿರ್ದೇಶನದ ಗದರ್ 2, ಸನ್ನಿ ಡಿಯೋಲ್, ಅಮೀಶಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ನಟಿಸಿದ 2001 ರ ಹಿಟ್ ಚಿತ್ರ ಗದರ್: ಏಕ್ ಪ್ರೇಮ್ ಕಥಾದ ಸೀಕ್ವಲ್ ಅಂದರೆ ಮುಂದುವರೆದ ಭಾಗವಾಗಿದೆ. ಚಿತ್ರವು ದೇಶಭಕ್ತಿ ಮತ್ತು ಕುಟುಂಬದ ಮೇಲಿನ ಪ್ರೀತಿಯ ಸುತ್ತ ಸುತ್ತುತ್ತದೆ ಮತ್ತು ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ-Biparjoy ಕೇವಲ 6 ಗಂಟೆಗಳಲ್ಲಿ ಪಡೆದುಕೊಳ್ಳಲಿದೆ 'ಅತಿ ಗಂಭೀರ ಸ್ವರೂಪ'! ಐ‌ಎಮ್‌ಡಿ ಅಲರ್ಟ್ ಜಾರಿ

ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರು 'ಅನಿಮಲ್' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ತಾರಾಗಣದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಪರಿಣಿತಿ ಚೋಪ್ರಾ ಇದ್ದಾರೆ. ಚಿತ್ರವು ನಾಯರ್ ದರೋಡೆಕೋರ ಚಿತ್ರವಾಗಿದ್ದು, ಇದು ಕುಟುಂಬದ ಉತ್ತರಾಧಿಕಾರದ ನಾಟಕದ ಸುತ್ತ ಹೆಣೆದ ಒಂದು ಕತೆಯಾಗಿದೆ. ಚಿತ್ರದ ಬಿಡುಗಡೆ ವಿಳಂಬದ ಬಗ್ಗೆ ವದಂತಿಗಳು ಇದ್ದರೂ ಕೂಡ, ಆಗಸ್ಟ್ 11 ರಂದು ತೆರೆಗೆ ಬರಲು ಸಿದ್ಧವಾಗಿದೆ. ದೇಶಭಕ್ತಿಯ ನಾಟಕ, ಕಾಮಿಕ್ ಕಾಪ್, ಗ್ಯಾಂಗ್‌ಸ್ಟರ್ ಥ್ರಿಲ್ಲರ್, ಈ ಮೂರೂ ಸಂಗತಿಗಳು ಪ್ರೇಕ್ಷಕರಿಗೆ ತುಂಬಾ ಇಸ್ತವಾಗುತ್ತವೆ, ಇಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಯಾವ ಚಿತ್ರವನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News