ಲೋಕಸಭಾ ಚುನಾವಣೆ 2019: ಇಂದು ಅಯೋಧ್ಯೆಗೆ ಪ್ರಿಯಾಂಕಾ ಗಾಂಧಿ

ಬೆಳಿಗ್ಗೆ 11 ಗಂಟೆಗೆ ಅಮೇಥಿಯ ಮೂಲಕ ಅಯೋಧ್ಯೆಗೆ ಆಗಮಿಸಲಿರುವ ಪ್ರಿಯಾಂಕಾ,  ಕುಮಾರಂಗಂಜ್ ನಿಂದ ಹನುಮಾನ್‌ಗಡಿ ವರೆಗೆ  9 ಸ್ಥಳಗಳಲ್ಲಿ ಜನರೊಂದಿಗೆ ಚರ್ಚೆ ನಡೆಸಲಿದ್ದು, ಮೂರು ಸ್ಥಳಗಳಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

Last Updated : Mar 29, 2019, 07:26 AM IST
ಲೋಕಸಭಾ ಚುನಾವಣೆ 2019: ಇಂದು ಅಯೋಧ್ಯೆಗೆ ಪ್ರಿಯಾಂಕಾ ಗಾಂಧಿ title=

ಅಯೋಧ್ಯೆ: ಪೂರ್ವ ಉತ್ತಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

ಬೆಳಿಗ್ಗೆ 11 ಗಂಟೆಗೆ ಅಮೇಥಿಯ ಮೂಲಕ ಅಯೋಧ್ಯೆಗೆ ಆಗಮಿಸಲಿರುವ ಪ್ರಿಯಾಂಕಾ,  ಕುಮಾರಂಗಂಜ್ ನಿಂದ ಹನುಮಾನ್‌ಗಡಿ ವರೆಗೆ  9 ಸ್ಥಳಗಳಲ್ಲಿ ಜನರೊಂದಿಗೆ ಚರ್ಚೆ ನಡೆಸಲಿದ್ದು, ಮೂರು ಸ್ಥಳಗಳಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಕುಮಾರಗಂಜ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಲಿದ್ದು, 11:15ಕ್ಕೆ ಸಿಧೌನಾ ತಲುಪಲಿದ್ದಾರೆ. ಅಲ್ಲಿ ಸಭೆ ನಡೆಸಿದ ಬಳಿಕ ಆದಿಲ್ಪುರಕ್ಕೆ 12:45 ಕ್ಕೆ ಮಧ್ಯಾಹ್ನ 2 ಗಂಟೆಗೆ ಮೌಲ್ ಶುವಲಾ ಅವರ ಸನ್ಬೀಮ್ ಸ್ಕೂಲ್ನಲ್ಲಿ ಪ್ರಿಯಾಂಕಾ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2.40 ಕ್ಕೆ ನವೀನ್ ಮಂಡಿಗೆ ಆಗಮಿಸಿ ಜನರನ್ನು ಭೇಟಿ ಮಾಡಲಿದ್ದಾರೆ. ಸಂಜೆ 4:30 ಗಂಟೆಗೆ ಹನುಮಾನ್ಗಢ ತಲುಪಿ ದೇವರ ದರ್ಶನ ಪಡೆಯಲಿದ್ದಾರೆ.

ಮೂಲಗಳ ಪ್ರಕಾರ ಪ್ರಿಯಾಂಕಾ ಗಾಂಧಿ ಅವರು ಹನುಮಾನ್ಗಢದಲ್ಲಿ ಮಹಾಂತ್ ಧ್ಯಾನ್ ದಾಸ್ ಅವರನ್ನೂ ಸಹ ಭೇಟಿ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರು ಹನುಮಾನ್ಗಢಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಆದರೆ, ಪ್ರಿಯಾಂಕಾ ರಾಮಲಾಲ್ ದರ್ಶನ ಪಡೆಯಲು ಹೋಗುವುದಿಲ್ಲ ಎನ್ನಲಾಗಿದೆ. ಸಂಜೆ 7 ಗಂಟೆ ವೇಳೆಗೆ ಫೌಜಾಬಾದ್ ಗೆ ಆಗಮಿಸಲಿರುವ ಪ್ರಿಯಾಂಕಾ ಕಾರ್ಯಕ್ರಮ ಮುಗಿಸಿ ರಾತ್ರಿ ಲಖನೌಗೆ ಹಿಂತಿರುಗಲಿದ್ದಾರೆ.
 

Trending News