Eega: ʻಈಗʼ ಕತೆ ಹುಟ್ಟಿದ್ದೇ ರೋಚಕ.. ಸುದೀಪ್ ಸೆಲೆಕ್ಟ್ ಆಗಿದ್ದು ಹೀಗೆ.!

Eega Movie Interesting Facts: ಎಸ್ ಎಸ್ ರಾಜಮೌಳಿ ಅವರ ಅದ್ಭುತ ನಿರ್ದೇಶನಗಳಲ್ಲಿ ಒಂದು 'ಈಗ'. ಈ ಸಿನಿಮಾ ಕತೆ ಹುಟ್ಟಿದ್ದೇ ರೋಚಕ.  

Written by - Chetana Devarmani | Last Updated : Jul 6, 2023, 02:55 PM IST
  • ಎಸ್ ಎಸ್ ರಾಜಮೌಳಿ ಅವರ ಈಗ
  • ʻಈಗʼ ಕತೆ ಹುಟ್ಟಿದ್ದೇ ರೋಚಕ
  • ಸುದೀಪ್ ಸೆಲೆಕ್ಟ್ ಆಗಿದ್ದು ಹೀಗೆ.!
Eega: ʻಈಗʼ ಕತೆ ಹುಟ್ಟಿದ್ದೇ ರೋಚಕ.. ಸುದೀಪ್ ಸೆಲೆಕ್ಟ್ ಆಗಿದ್ದು ಹೀಗೆ.! title=

 Eega Movie Interesting Facts: ಸ್ಟಾರ್‌ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಈಗ ಸಿನಿಮಾ ರಿಲೀಸ್‌ ಆಗಿ ಇಂದಿಗೆ 11 ವರ್ಷ. ಎಸ್ ಎಸ್ ರಾಜಮೌಳಿ ಅವರ ಅದ್ಭುತ ನಿರ್ದೇಶನಗಳಲ್ಲಿ ಒಂದು 'ಈಗ'. ಈ ಚಿತ್ರವು 6 ಜುಲೈ 2012 ರಂದು ತೆರೆ ಕಂಡಿತು. ಈಗ ಸಿನಿಮಾಗೆ ಕೆ. ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. 

1990 ರ ದಶಕದ ಕೊನೆಯಲ್ಲಿ ವಿಜಯೇಂದ್ರ ಪ್ರಸಾದ್ ಅವರಿಂದ ಈಗ ಚಿತ್ರದ ಕಲ್ಪನೆಯು ಹುಟ್ಟಿಕೊಂಡಿತು. ವಿಜಯೇಂದ್ರ ಪ್ರಸಾದ್ ತಮ್ಮ ಮಗ ಎಸ್.ಎಸ್. ರಾಜಮೌಳಿ ಅವರೊಂದಿಗಿನ ಮಾನವನ ಮೇಲೆ ಸೇಡು ತೀರಿಸಿಕೊಳ್ಳುವ ನೊಣದ ಬಗ್ಗೆ ತಮಾಷೆ ಮಾಡುತ್ತಿದ್ದರು. ವಿಜಯೇಂದ್ರ ಅವರಿಗೆ ಈಗ ಸಿನಿಮಾದ ಕಥೆಯ ಮೂಲ ಕಲ್ಪನೆ ಹುಟ್ಟಿದ್ದು 1999ರಲ್ಲಿ. ಆ ಬಳಿಕ ಹುಟ್ಟಿದ್ದೇ ಈಗ ಸಿನಿಮಾದ ಕಲ್ಪನೆ. 

ಈ ಸಿನಿಮಾ ಕತೆಯು ಪೂರ್ಣಗೊಂಡ ಬಳಿಕ ನಾನಿಯನ್ನು ಮೊದಲು ಆಯ್ಕೆ ಮಾಡಿದರು. ಸಿನಿಮಾಗೆ ನಾಯಕಿಯಾಗಿ ಸಮಂತಾ ರುತ್‌ ಪ್ರಭು ಸೆಲೆಕ್ಟ್‌ ಆದರು. ಆ ಹೊತ್ತಿಗೆ ಸುದೀಪ್‌ ಅವರ ರನ್ನ ಸಿನಿಮಾ ರಿಲೀಸ್‌ ಆಗಿತ್ತು. ಈ ಸಿನಿಮಾದಲ್ಲಿ ಸುದೀಪ್‌ ಅವರನ್ನು ನೋಡಿ, ಈಗ ಸಿನಿಮಾಗೆ ರಾಜಮೌಳಿ ಆಫರ್‌ ಕೊಟ್ಟರು. 

ಇದನ್ನೂ ಓದಿ: Salaar Teaser:ಪ್ರಭಾಸ್ ಪವರ್ ಫುಲ್ ಲುಕ್‌, ಗೂಸ್‌ಬಂಪ್ಸ್‌ ಫಿಕ್ಸ್‌.. ಪ್ರಶಾಂತ್‌ ನೀಲ್‌ ಕಮಾಲ್‌!

ಈಗ ಸಿನಿಮಾ ಸಂಪೂರ್ಣ ವಿಎಫ್‌ಎಕ್ಸ್‌ ಆಧಾರಿತವಾಗಿದೆ. ವಿಎಫ್‌ಎಕ್ಸ್ ಅನ್ನು ಹೈದರಾಬಾದ್ ಮೂಲದ ಆನಿಮೇಷನ್ ಕಂಪನಿಯಾದ ಮಕುಟಾ ಮಾಡಿದೆ. ಅವರು 80% ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ವಿತರಿಸಿದರು. ಕೇವಲ 20% ಗ್ರಾಫಿಕ್ಸ್ ಕೆಲಸವನ್ನು ಹೊರಗುತ್ತಿಗೆ ವಹಿಸಲಾಗಿದೆ.

ರಾಬಿನ್ ಹುಡ್: ಪ್ರಿನ್ಸ್ ಆಫ್ ಥೀವ್ಸ್ (1991), ಹ್ಯಾಕರ್ಸ್ (1995) ಮತ್ತು ವೇಕಿಂಗ್ ನೆಡ್ ಡಿವೈನ್ (1998) ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ಹಾಲಿವುಡ್ ಛಾಯಾಗ್ರಾಹಕ ಜೇಮಿ ಫೌಲ್ಡ್ಸ್ ಅವರನ್ನು ಕರೆತರಲು ರಾಜಮೌಳಿ ಆರಂಭದಲ್ಲಿ ಯೋಜಿಸಿದ್ದರು ಆದರೆ ನಂತರ ಕೆಕೆ ಸೆಂಥಿಲ್ ಕುಮಾರ್ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಹಿಡಿಯಲಾಯಿತು. 

 

 

ಈಗ ಸಿನಿಮಾ ರಾಜಮೌಳಿಯ ಅವರ ಮೊದಲ ದ್ವಿಭಾಷಾ ಸಿನಿಮಾ. ತೆಲುಗು ಮತ್ತು ತಮಿಳಿನಲ್ಲಿ ಎರಡು ಬಾರಿ ಸಿನಿಮಾ ಚಿತ್ರೀಕರಿಸಲಾಯಿತು. ನಂತರ ಮಲಯಾಳಂನಲ್ಲಿ 'ಈಚ' ಎಂಬ ಶೀರ್ಷಿಕೆಯೊಂದಿಗೆ ಮತ್ತು ಹಿಂದಿಗೆ 'ಮಕ್ಕಿ' ಎಂದು ಡಬ್ ಮಾಡಲಾಗಿದೆ.

ಇದನ್ನೂ ಓದಿ:  ʻಕಿಚ್ಚʼನಿಗೆ ʻಜುಲೈ 6ʼ ಸಖತ್ ಸ್ಪೆಷಲ್.. ʻಐರನ್‌ ಲೆಗ್‌ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!

 2012 ರ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಪ್ರವೇಶವಾಗಿ ಕಳುಹಿಸಲಾದ ತೆಲುಗು ಚಲನಚಿತ್ರ ಈಗ. ಎಸ್‌ಎಸ್ ರಾಜಮೌಳಿ ಅವರು ಮಕುಟ ವಿಎಫ್‌ಎಕ್ಸ್ ಕೆಲಸದಿಂದ ತೃಪ್ತರಾಗಲಿಲ್ಲ ಮತ್ತು ಅವರು 10 ದಿನಗಳ ಚಿತ್ರೀಕರಣದ ನಂತರ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದರು ಮತ್ತು ಸಾಯಿ ಕೊರ್ರಪಾಟಿ ಆಗಾಗಲೇ ಚಲನಚಿತ್ರಕ್ಕಾಗಿ 4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು. ನಂತರ ಎಲ್ಲವೂ ಅಂದುಕೊಂಡಂತೆ ನಡೆಯಿತು. 

 

 

ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಈಗ ಚಿತ್ರದ ನಾಯಕ ಮತ್ತು ಖಳನಾಯಕರ ಹೆಸರುಗಳಿಗೆ ಅವರ ಮೂಲ ಹೆಸರುಗಳನ್ನೇ ಅಂದರೆ ನಾನಿ ಮತ್ತು ಸುದೀಪ್ ಎಂದೇ ನೀಡಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News