Kiccha Sudeep: ʻಕಿಚ್ಚʼನಿಗೆ ʻಜುಲೈ 6ʼ ಸಖತ್ ಸ್ಪೆಷಲ್.. ʻಐರನ್‌ ಲೆಗ್‌ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!

Sudeep Starrer Huchcha movie: ಸುದೀಪ್‌ ಸಿನಿ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ಆಗಿದ್ದೇ ʻಹುಚ್ಚʼ ಸಿನಿಮಾ. ಈ ಸಿನಿಮಾದ ಮೂಲಕವೇ ಸುದೀಪ್‌ ಜನಪ್ರಿಯತೆ ಪಡೆದರು.   

Written by - Chetana Devarmani | Last Updated : Jul 6, 2023, 02:56 PM IST
  • ಸುದೀಪ್‌ ಸಿನಿ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ಕೊಟ್ಟ ಸಿನಿಮಾ
  • ಈ ಸಿನಿಮಾದ ಮೂಲಕವೇ ಸುದೀಪ್‌ ಜನಪ್ರಿಯತೆ ಪಡೆದರು
  • ʻಐರನ್‌ ಲೆಗ್‌ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!
Kiccha Sudeep: ʻಕಿಚ್ಚʼನಿಗೆ ʻಜುಲೈ 6ʼ ಸಖತ್ ಸ್ಪೆಷಲ್.. ʻಐರನ್‌ ಲೆಗ್‌ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!  title=

   #22YearsForHuccha: ನಟ ಸುದೀಪ್ ಅವರಿಗೆ ಕಿಚ್ಚ ಎಂದು ಖ್ಯಾತಿ ನೀಡಿದ ದಿನ ಇದು. ಜುಲೈ 6 ಸುದೀಪ್‌ ಸಿನಿ ಜರ್ನಿಯ ಸಖತ್ ಸ್ಪೆಷಲ್ ಡೇ. 90ರ ದಶಕದಲ್ಲಿ ತಾಯವ್ವ ಸಿನಿಮಾ ಮೂಲಕ ಸುದೀಪ್‌ ಸಿನಿರಂಗಕ್ಕೆ ಕಾಲಿಟ್ಟರು. ವಿ. ಉಮಾಕಾಂತ್ ನಿರ್ದೇಶನದ ತಾಯವ್ವ ಸಿನಿಮಾದಲ್ಲಿ ರಾಮು ಪಾತ್ರದಲ್ಲಿ ಸುದೀಪ್‌ ನಟಿಸಿದ್ದರು. 1999ರಲ್ಲಿ ಪ್ರತ್ಯರ್ಥ ಸಿನಿಮಾ ತೆರೆಕಂಡಿತು. ರಮೇಶ್ ಅರವಿಂದ್ ಈ ಸಿನಿಮಾದ ನಾಯಕರಾಗಿದ್ದರು. 2000 ದಲ್ಲಿ  ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಸುದೀಪ್‌ ಚಂದನವನಕ್ಕೆ ಕಾಲಿಟ್ಟರು. ಸುದೀಪ್‌ ನಟಿಸುತ್ತಿದ್ದ ಅನೇಕ ಸಿನಿಮಾಗಳು ಫ್ಲಾಪ್‌ ಆಗುತ್ತಿದ್ದವು. ಇಷ್ಟಲ್ಲ ಚಿತ್ರಗಳಲ್ಲಿ ನಟಿಸಿದ್ದರು ಸುದೀಪ್‌ ಅವರಿ ನೇಮ್‌, ಫೇಮ್‌ ಬಂದಿರಲಿಲ್ಲ. 

 

 

 

 

ಸುದೀಪ್‌ ಸಿನಿ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ಆಗಿದ್ದೇ ʻಹುಚ್ಚʼ ಸಿನಿಮಾ. ಈ ಸಿನಿಮಾದ ಮೂಲಕವೇ ಸುದೀಪ್‌ ಜನಪ್ರಿಯತೆ ಪಡೆದರು. ಸುದೀಪ್‌ ಒಳಗಿದ್ದ ಆ ಅಭಿನಯ ಚಕ್ರವರ್ತಿ ʻಹುಚ್ಚʼ ಸುನಿಮಾ ಮೂಲಕ ಜನರ ಮುಂದೆ ಬಂದರು. ಸ್ಟಾರ್ ನಟರಾದರು. 2001ರ ಜುಲೈ 6ರಂದು ʻಹುಚ್ಚʼ ಸಿನಿಮಾ ಬಿಡುಗಡೆಯಾಯಿತು. ಸ್ಟಾರ್ ನಟ, ಮಾಸ್ ಇಮೇಜ್ ಜೊತೆಗೆ ʻಕಿಚ್ಚʼ ಎಂಬ ಬಿರುದನ್ನು ಈ ಸಿನಿಮಾ ಸುದೀಪ್‌ಗೆ ತಂದುಕೊಟ್ಟಿತು. 

ಇದನ್ನೂ ಓದಿ: Salaar: ಪ್ರಭಾಸ್ ಸಲಾರ್‌ಗಾಗಿ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಹುಚ್ಚ ಸಿನಿಮಾ ತೆರೆಕಂಡು ಇಂದಿಗೆ 22 ವರ್ಷ. ಕೆ. ಮುಸ್ತಾಫಾ, ಮೆಹರುನ್ನೀಸಾ ರೆಹಮಾನ್ ಹುಚ್ಚ ಸಿನಿಮಾಗೆ ಬಂಡವಾಳ ಹೂಡಿದ್ದರು. ಹುಚ್ಚ ಸಿನಿಮಾ ತಮಿಳಿನ ಸೇತು' ಸಿನಿಮಾದ ರಿಮೇಕ್‌ ಆಗಿದೆ. ಓಂ ಪ್ರಕಾಶ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಎರಡು ಶೇಡ್‌ನಲ್ಲಿ ಸುದೀಪ್‌ ನಟಿಸಿದ್ದಾರೆ. ಆ್ಯಂಗ್ರಿ ಯಂಗ್‌ಮ್ಯಾನ್‌ ಆಗಿ ಎಲ್ಲರ ಮನಗೆಲ್ಲುವ ಪಾತ್ರ ಒಂದೆಡೆಯಾದ್ರೆ, ಪ್ರೀತಿಯಲ್ಲಿ ಸೋತು ಮಾನಸಿಕ ಅಸ್ವಸ್ಥನಾಗಿ ಜನರ ಕಣ್ಣಾಲೆಯನ್ನು ಒದ್ದೆಯಾಗಿಸುವ ಅಮೋಘ ಅಭಿನಯ ಮತ್ತೊಂಡೆ. ಈ ಸಿನಿಮಾದಿಂದ ಸುದೀಪ್‌ ಅನೇಕ ಜನರ ನೆಚ್ಚಿನ ನಾಯಕರಾದರು. 

 

 

ಇನ್ನೂ ಇದೇ ದಿನ ತೆರೆಕಂಡ ಮತ್ತೊಂದು ಸಿನಿಮಾ ಸುದೀಪ್‌ ಅವರ ಸಿನಿ ಜೀವನದ ಮರೆಯಲಾಗದ ಚಿತ್ರ. ಮೊದಲ ಬಾರಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚಿತ್ರದ ಮೂಲಕ ಸುದೀಪ್‌ಗೆ ಪರಭಾಷಾ ಸಿನಿಮಾವೊಂದರ ಆಫರ್ ಸಿಕ್ಕಿತ್ತು. ಇದು ಹಿಂದಿ ಸಿನಿಮಾ ಆಗಿತ್ತು. ಆದರೆ ಸುದೀಪ್‌ ಅವರ ಅಭಿನಯಕ್ಕೆ ಕಿರೀಟವಿಟ್ಟಂತೆ ಬಂದ ಸಿನಿಮಾ ʻಈಗʼ. ಈ ಸಿನಿಮಾ ಮೂಲಕ ಸುದೀಪ್‌ ಮಗದೊಮ್ಮೆ ಅಭಿನಯ ಚಕ್ರವರ್ತಿ ತಾವೇ ಎಂದೂ ಪ್ರೂವ್‌ ಮಾಡಿದ್ಧರು. 

ಇದನ್ನೂ ಓದಿ: Kiccha Sudeep: ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!

ರಾಜಮೌಳಿ ನಿರ್ದೇಶನದ ತೆಲುಗಿನ 'ಈಗ' ಸಿನಿಮಾ ತೆಲುಗು, ಹಿಂದಿ, ತಮಿಳಿನಲ್ಲಿ ಬಿಡುಗಡೆಯಾಯಿತು. ಸುದೀಪ್ ʻಈಗʼ ಸಿನಿಮಾದಲ್ಲಿ ಖಳನಾಯಕನಾಗಿ ಅದ್ಭುತ ನಟನೆ ಮಾಡಿದ್ದರು. ನೊಣದೊಂದಿಗೆ ಸುದೀಪ್‌ ಹೋರಾಡುವ ಆ ದೃಶ್ಯಗಳು ನೋಡುಗನನ್ನು ರೋಮಾಂಚನಗೊಳಿಸಿದವು. ಅವರ ನಟನೆಗೆ ಸಿನಿಪ್ರಿಯರು ಫುಲ್‌ ಮಾರ್ಕ್ಸ್‌ ನೀಡಿದರು. ʻಈಗʼ ಸಿನಿಮಾ ಕೂಡ ಇದೇ ದಿನ ತೆರೆಕಂಡಿದೆ. ʻಈಗʼ ಸಿನಿಮಾ ರಿಲೀಸ್‌ ಆಗಿ ಇಂದಿಗೆ 11 ವರ್ಷ. 

ಈ ದಿನ 'ಹುಚ್ಚ' ತೆರೆಕಂಡು 22 ವರ್ಷ ಜೊತೆಗೆ 'ಈಗ' ಸಿನಿಮಾ ತೆರೆಕಂಡು 11 ವರ್ಷ ಪೂರ್ಣಗೊಂಡಿದೆ. ಈ ಎರಡೂ ಸಿನಿಮಾಗಳೂ ಸುದೀಪ್‌ ಸಿನಿ ಜರ್ನಿಯಲ್ಲಿ ಮರೆಯಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಜುಲೈ 06 ಸುದೀಪ್‌ ಅವರಿಗೆ ತುಂಬಾ ಅಂದ್ರೆ ತುಂಬಾ ಸ್ಪೆಷಲ್‌ ದಿನವಾಗಿದೆ. 

ಇದನ್ನೂ ಓದಿ: Sanchith Sanjeev: ಸ್ಯಾಂಡಲ್‌ವುಡ್‌ಗೆ ಜೂ ಕಿಚ್ಚನ ಎಂಟ್ರಿ, ಮಾವನಿಗೆ ತಕ್ಕ ಅಳಿಯ ಎಂದ ಫ್ಯಾನ್ಸ್‌!

 

 Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

  

 

  

Trending News