ಬೆಂಗಳೂರು : ವೈದಿಕ ಗ್ರಂಥಗಳ ಪ್ರಕಾರ, ಎಲ್ಲಾ ನವಗ್ರಹಗಳು ನಿಯಮಿತ ಅವಧಿಯಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಸಂಚಾರ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
50 ವರ್ಷಗಳ ನಂತರ ಇದೀಗ ಅಪರೂಪದ ಯೋಗ ರೂಪುಗೊಂಡಿದೆ. ಈ ಸಮಯದಲ್ಲಿ ಜ್ಯೋತಿಷ್ಯದ ಪ್ರಕಾರ ಪ್ರಸ್ತುತ ಮಂಗಳ ಮತ್ತು ಗುರು ಸಿಂಹ ರಾಶಿಯಲ್ಲಿ ಒಟ್ಟಿಗೆ ಸೇರಿಕೊಂಡಿದೆ. ಈ ಎರಡು ಗ್ರಹಗಳ ಒಗ್ಗೂಡುವಿಕೆಯಿಂದ , ಅಪರೂಪದ 'ನವಪಂಚಮ ರಾಜ ಯೋಗ ನಿರ್ಮಾಣವಾಗಿದೆ. ಈ ಅಪರೂಪದ ರಾಜಯೋಗದ ರಚನೆಯಿಂದ ಅದೃಷ್ಟವು 4 ರಾಶಿಯವರ ಕೈ ಹಿಡಿಯಲಿದೆ
ಧನು ರಾಶಿ : 'ನವಪಂಚಮ ರಾಜಯೋಗದ ಪರಿಣಾಮ ನಿಮ್ಮ ಅದೃಷ್ಟ ಬೆಳಗುವುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಕನಸು ನನಸಾಗಬಹುದು. ಕೈ ಸೇರದೇ ಹೊರಗೆ ಉಳಿದಿರುವ ಹಣ ಕೈ ಸೇರುವುದು. ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗುವುದು. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳೆಲ್ಲಾ ಕಳೆದು ಸಂತಸದ ಹೊನಲು ಕಾಣಿಸುವುದು.
ಕಟಕ ರಾಶಿ : ಈ ಅಪರೂಪದ ರಾಜ್ಯಯೋಗದ ಪರಿಣಾಮದಿಂದಾಗಿ ಉದ್ಯೋಗಿಗಳು ಪ್ರಗತಿ ಹೊಂದಬಹುದು. ಸಾಲದ ಬಲೆಯಿಂದ ಹೊರಬರುತ್ತೀರಿ. ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ಈ ಸಮಯದಲ್ಲಿ, ಮಂಗಳನು ಸಂಪತ್ತಿನ ಸ್ಥಳದಲ್ಲಿ ಕುಳಿತಿದ್ದಾನೆ. ಈ ಕಾರಣದಿಂದಾಗಿ ನೀವು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ.
ಸಿಂಹ ರಾಶಿ : ಮಂಗಳನ ಪ್ರಭಾವದಿಂದ ನಿಮ್ಮ ಜಾತಕದಲ್ಲಿ ತ್ರಿಕೋನ ರಾಜಯೋಗ ರೂಪುಗೊಂಡಿದೆ. ಅದರ ಪರಿಣಾಮದಿಂದಾಗಿ, ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ.
ಮೇಷ ರಾಶಿ : ನಿಮ್ಮ ರಾಶಿಯ ಅಧಿಪತಿ ಮಂಗಳ. ಪ್ರಸ್ತುತ ಮಂಗಳ ಪ್ರಸ್ತುತ ಸಿಂಹರಾಶಿಯಲ್ಲಿದೆ. ಅದರ ಪರಿಣಾಮದಿಂದ, ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ನವಪಂಚಮ ರಾಜ ಯೋಗದ ಮೂಲಕ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)