ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮೌಲ್ಯಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
On Dr Babasaheb Ambedkar’s jayanti, let us re-dedicate ourselves to the 4 universal values of JUSTICE, LIBERTY, EQUALITY & FRATERNITY enshrined in our Constitution.
Those who pay him tributes on this day, while insidiously weakening these values, do his memory disservice.
— Rahul Gandhi (@RahulGandhi) April 14, 2019
"ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಂದು ನಾವು ಸಂವಿಧಾನದಲ್ಲಿರುವ 4 ಸಾರ್ವತ್ರಿಕ ಮೌಲ್ಯಗಳಾದ ನ್ಯಾಯ,ಸ್ವಾತಂತ್ರ,ಸಮಾನತೆ ಮತ್ತು ಭ್ರಾತೃತ್ವಗಳಿಗೆ ನಮ್ಮನ್ನು ಮತ್ತೊಮ್ಮೆ ಸಮರ್ಪಿಸಿಕೊಳ್ಳಬೇಕಾಗಿದೆ.ಈ ದಿನದಂದು ಅವರಿಗೆ ಗೌರವ ಸಲ್ಲಿಸುವವರು, ಅವರ ಮೌಲ್ಯಗಳನ್ನು ದುರ್ಬಲಗೊಳಿಸುತ್ತಾ, ಅವರ ಸ್ಮರಣೆಗೆ ಅನ್ಯಾಯ ಬಗೆಯುತ್ತಿದ್ದಾರೆ " ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
संविधान निर्माता और सामाजिक न्याय के प्रणेता बाबासाहेब डॉ. भीमराव अम्बेडकर को उनकी जयंती पर सादर नमन। जय भीम! pic.twitter.com/KIZVJC725r
— Chowkidar Narendra Modi (@narendramodi) April 14, 2019
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಈ ಟ್ವೀಟ್ ಪ್ರಮುಖವಾಗಿ ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ ಟ್ವೀಟ್ ಮಾಡಿದ ಬಂದಿದೆ.ಮೋದಿ ಟ್ವೀಟ್ ಮೂಲಕ ಶೇರ್ ಮಾಡಿಕೊಂಡಿರುವ ವೀಡಿಯೋವೊಂದರಲ್ಲಿ "ಅಂಬೇಡ್ಕರ್ ಅವರು ನಾನು ಸೇರಿದಂತೆ ಕೋಟ್ಯಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟುವುದು ಅನಿವಾರ್ಯವಲ್ಲ, ಆದರೆ ಬಡ ಕುಟುಂಬದಲ್ಲಿ ಹುಟ್ಟಿದವನು ಕೂಡ ಭಾರತದಲ್ಲಿ ದೊಡ್ಡ ಕನಸುಗಳನ್ನು ಕಾಣಬಹುದು ಮತ್ತು ಅವುಗಳನ್ನು ಈಡೇರಿಸಬಹುದು" ಎಂದು ಹೇಳಿದ್ದಾರೆ.