ಬೆಂಗಳೂರು : ನೀವು ಬ್ಯಾಂಕ್ ನಿಂದ ಗೃಹ ಸಾಲ, ಕಾರ್ ಲೋನ್, ಪರ್ಸನಲ್ ಲೋನ್ ಹೀಗೆ ಯಾವುದೇ ರೀತಿಯ ಲೋನ್ ತೆಗೆದುಕೊಳ್ಳಬೇಕು ಅಂದುಕೊಂಡಿದ್ದರೂ ಅಥವಾ ಈಗಾಗಲೇ ಲೋನ್ ತೆಗೆದುಕೊಂಡಿದ್ದರೆ RBI ನಿರ್ಧಾರ ಸಮಾಧಾನ ನೀಡಲಿದೆ. 44ನೇ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ (ಎಂಪಿಸಿ ಸಭೆ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್, ಜೂನ್ ಮತ್ತು ಈಗ ಆಗಸ್ಟ್ನಲ್ಲಿ ಸತತ ಮೂರನೇ ಬಾರಿಗೆ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಹಳೆಯ ಮಟ್ಟದಲ್ಲಿಯೇ ಇರಿಸಿಕೊಂಡಿದೆ.
6.5 ಪ್ರತಿಶತದಲ್ಲಿ ರೆಪೊ ದರ :
ಗುರುವಾರ ನಡೆದ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ. ಸತತ ಮೂರನೇ ಬಾರಿಗೆ ಒಮ್ಮತದ ಮೂಲಕ ರೆಪೊ ದರವನ್ನು ಶೇ.6.5ಕ್ಕೆ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ, ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು, ಆರ್ಬಿಐ ರೆಪೊ ದರವನ್ನು ಎರಡೂವರೆ ಶೇಕಡಾ ಹೆಚ್ಚಿಸಿತ್ತು. ರೆಪೊ ದರದಲ್ಲಿ ಈ ಬದಲಾವಣೆಯನ್ನು ಮೇ 2022 ರಿಂದ ಮಾರ್ಚ್ 2023 ರವರೆಗೆ ಮಾಡಲಾಗಿತ್ತು. ಕಳೆದ ವರ್ಷ, ರೆಪೊ ದರವು ಮೇ 2022 ರವರೆಗೆ 4 ಪ್ರತಿಶತದಲ್ಲಿತ್ತು. ಆದರೆ ಪ್ರಸ್ತುತ ಇದರ ದರ ಶೇ.6.5ರಷ್ಟಿದೆ.
ಇದನ್ನೂ ಓದಿ : ಇಳಿಕೆಯಾಗುವುದು ಅಕ್ಕಿ ಗೋಧಿ ಬೆಲೆ ! 29 ರೂ.ಗೆ ಸಿಗುವುದು ಕೆ.ಜಿ ಅಕ್ಕಿ
EMI ಮೇಲೆ ಯಾವುದೇ ಪರಿಣಾಮವಿಲ್ಲ :
RBI ಸತತವಾಗಿ ಮೂರನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ, ರೆಪೊ ದರ ಹಳೆಯ ಮಟ್ಟದಲ್ಲಿಯೇ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ, ನಿಮ್ಮ EMI ಕೂಡಾ ಹಳೆಯ ಮಟ್ಟದಲ್ಲಿಯೇ ಉಳಿಯುತ್ತದೆ. ಆದರೆ ಮುಂಬರುವ ದಿನಗಳಲ್ಲಿ, FDಯ ಬಡ್ಡಿದರವನ್ನು ಬ್ಯಾಂಕುಗಳು ಕಡಿತಗೊಳಿಸಬಹುದು. ರೆಪೋ ದರವು ಪ್ರಸ್ತುತ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ, ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದಾದ ಬಳಿಕ ಹಣದುಬ್ಬರ ದರದಲ್ಲಿ ಇಳಿಕೆ ಕಂಡುಬಂದಿದೆ.
ಯಾರಿಗೆ ಪರಿಹಾರ ಸಿಗಲಿದೆ? :
ಬ್ಯಾಂಕ್ನಿಂದ ಸಾಲ ಪಡೆಯಲು ಯೋಜಿಸುವ ಗ್ರಾಹಕರು ರೆಪೊ ದರದಲ್ಲಿ ಯಾವುದೇ ಬದಲಾವಣೆಯಿಲ್ಲದ ಪ್ರಯೋಜನವನ್ನು ಪಡೆಯುತ್ತಾರೆ. ಇದೀಗ ಯಾವುದೇ ರೀತಿಯ ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ಗಳು ಹೆಚ್ಚಿಸುವುದಿಲ್ಲ. ಆರ್ಬಿಐ ರೆಪೊ ದರವನ್ನು ಹೆಚ್ಚಿಸಿದರೆ, ಅದು ಗ್ರಾಹಕರಿಗೆ ಲಭ್ಯವಿರುವ ಸಾಲದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಧಾರವಾಡದಲ್ಲಿ 900 ಕೋಟಿ ರೂ. ಹೂಡಿಕೆಗೆ ಮುಂದಾದ ವಿಶ್ವ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್
ರೆಪೋ ದರ ಎಂದರೇನು? :
ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರವನ್ನು ಹೆಚ್ಚಿಸುವುದರಿಂದ ಬ್ಯಾಂಕ್ಗಳು ಆರ್ಬಿಐನಿಂದ ದುಬಾರಿ ದರದಲ್ಲಿ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತದೆ. ಇದು ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ