ನವದೆಹಲಿ: ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಎಕದಿನ ಪಂದ್ಯಕ್ಕೂ ಮೊದಲು ಮಗಳ ಅನಾರೋಗ್ಯದ ಕಾರಣದಿಂದಾಗಿ ಪತ್ನಿಯೊಂದಿಗೆ ರಾತ್ರಿಯಿಡಿ ಕಳೆದರೂ ಕೂಡ ಪಂದ್ಯದಲ್ಲಿ ಶತಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕ್ ವಿರುದ್ಧದ ಐದು ಏಕದಿನಗಳ ಸರಣಿಯಲ್ಲಿ ರಾಯ್ ಅವರ 114 ರನ್ ಗಳ ನೆರವಿನಿಂದ ಪಾಕ್ ಗಳಿಸಿದ 340 ರನ್ ಗಳ ಸವಾಲನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಇಂಗ್ಲೆಂಡಿನ ಆರಂಭಿಕ ಆಟಗಾರರಾಗಿರುವ ಇವರು ತನ್ನ ಮಗಳ ಅನಾರೋಗ್ಯದ ಕಾರಣದಿಂದಾಗಿ ಇಡೀ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿರಬೇಕಾಗಿತ್ತು. ಈ ಕಾರಣದಿಂದಾಗಿ ಅವರು ಪತ್ನಿ ಜತೆ ಆಸ್ಪತ್ರೆಯಲ್ಲಿ ಏಳು ಗಂಟೆಗಳ ಕಾಲ ಕಳೆದರು.
ಈಗ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಬಿಬಿಸಿ ರೇಡಿಯೋಗೆ ಪ್ರತಿಕ್ರಿಯಿಸಿರುವ ಅವರು ಈ ಪಂದ್ಯ ತಮಗೆ ಮತ್ತು ತಮ್ಮ ಕುಟುಂಬಕ್ಕೆ ವಿಶೇಷವಾದದ್ದು ಎಂದು ತಿಳಿಸಿದರು.ನಾವು ಬೆಳಿಗ್ಗೆ 1:30 ಕ್ಕೆ ತನಕ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಾನು 8:30 ರ ತನಕ ಅಲ್ಲಿಯೇ ಇದ್ದೆ ಎಂದು ರಾಯ್ ವಿವರಿಸಿದರು.89 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದ್ದ ರಾಯ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಲಾಯಿತು.