ಸ್ಟಾರ್ ವಿಕೆಟ್ ಕೀಪರ್ ಸೇರಿ ಏಷ್ಯಾಕಪ್’ಗೆ ಆಯ್ಕೆಯಾಗಿದ್ದ ಇಬ್ಬರು ಆಟಗಾರರಿಗೆ ಕೊರೊನಾ! ರದ್ದಾಗುತ್ತಾ Asia Cup?

Asia Cup 2023: ಇನ್ನೇನು ನಾಲ್ಕು ದಿನಗಳಲ್ಲಿ ಏಷ್ಯಾಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ನೆಲದಲ್ಲಿ ಆರಂಭವಾಗಲಿದೆ. ಆದರೆ ಶ್ರೀಲಂಕಾ ಆಟಗಾರರಾದ ಅವಿಷ್ಕಾ ಫರ್ನಾಂಡೋ ಮತ್ತು ವಿಕೆಟ್ ಕೀಪರ್ ಕುಸಲಾ ಪೆರೆರಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

Written by - Bhavishya Shetty | Last Updated : Aug 26, 2023, 07:25 AM IST
    • ಏಷ್ಯಾಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ನೆಲದಲ್ಲಿ ಆರಂಭವಾಗಲಿದೆ.
    • ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಶ್ರೀಲಂಕಾ ತಂಡ ಕೊರೊನಾ ವೈರಸ್‌ ಹಿಡಿತಕ್ಕೆ ಸಿಲುಕಿದೆ.
    • ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ಹಸರಂಗ ಏಷ್ಯಾಕಪ್ ನಿಂದ ಹೊರಗುಳಿಯುವುದು ಬಹುತೇಕ ಖಚಿತ
ಸ್ಟಾರ್ ವಿಕೆಟ್ ಕೀಪರ್ ಸೇರಿ ಏಷ್ಯಾಕಪ್’ಗೆ ಆಯ್ಕೆಯಾಗಿದ್ದ ಇಬ್ಬರು ಆಟಗಾರರಿಗೆ ಕೊರೊನಾ! ರದ್ದಾಗುತ್ತಾ Asia Cup? title=
Asia Cup 2023

COVID-19 virus in Asia Cup 2023: ಇನ್ನೇನು ನಾಲ್ಕು ದಿನಗಳಲ್ಲಿ ಏಷ್ಯಾಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ನೆಲದಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯಾವಳಿಗೂ ಮುನ್ನ ಕೊರೊನಾ ಕರಿಛಾಯೆ ಆವರಿಸಿದ್ದು, ಏಷ್ಯಾ ಕಪ್‌’ನಲ್ಲಿ ಬಿಕ್ಕಟ್ಟಿನ ವಾತಾವರಣವನ್ನು ಸೃಷ್ಟಿಸಿದೆ. ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಆತಿಥೇಯ ಶ್ರೀಲಂಕಾ ತಂಡ ಕೊರೊನಾ ವೈರಸ್‌’ನ ಹಿಡಿತಕ್ಕೆ ಸಿಲುಕಿದೆ.

ಇದನ್ನೂ ಓದಿ: ವರ್ಗೋತ್ತಮಗೊಂಡ ಶನಿದೇವನಿಂದ ಕುಬೇರಾರಗುವರು ಈ ರಾಶಿಯವರು… ಉನ್ನತಿ-ಪ್ರಗತಿಯ ಪರ್ವ, ಇವರಿಗಿದೆ ಶನಿಕೃಪೆ

ಶ್ರೀಲಂಕಾ ಕ್ರಿಕೆಟ್ ತಂಡದ ಇಬ್ಬರು ಆಟಗಾರರ ಕೊರೊನಾ ವೈರಸ್ ವರದಿ ಪಾಸಿಟಿವ್ ಬಂದಿದೆ. ಶ್ರೀಲಂಕಾದ ಆಟಗಾರರಾದ ಅವಿಷ್ಕಾ ಫರ್ನಾಂಡೋ ಮತ್ತು ವಿಕೆಟ್ ಕೀಪರ್ ಕುಸಲಾ ಪೆರೆರಾಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಆಟಗಾರರು ಏಷ್ಯಾಕಪ್‌ ತಂಡದ ಭಾಗವಾಗುತ್ತಾರೆಯೇ ಎಂಬುದರ ಕುರಿತು ಇನ್ನಷ್ಟೇ ಮಾಹಿತಿ ಹೊರಬೀಳಲಿದೆ.

ಈ ಮೊದಲು ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆ ಆಗಿತ್ತು. ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ಹಸರಂಗ ಏಷ್ಯಾಕಪ್ ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ಆಡಿದ ಲಂಕಾ ಪ್ರೀಮಿಯರ್ ಲೀಗ್ ವೇಳೆ ಹಸರಂಗ ಗಾಯಗೊಂಡಿದ್ದರು. ಗಾಯದ ನಡುವೆಯೂ ಹಸರಂಗ ಆಟ ಮುಂದುವರಿಸಿ ಅಮೋಘ ಪ್ರದರ್ಶನ ನೀಡಿದ್ದರು. ಹಸರಂಗ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವುದರ ಜೊತೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈಗ ಹಸರಂಗ ಅವರ ಗಾಯ ಗಂಭೀರವಾಗಿದೆ. ಟೂರ್ನಿಯಿಂದ ನಿರ್ಗಮಿಸುವ ಬಗ್ಗೆ ಒಂದೆರೆಡು ದಿನದಲ್ಲಿ ಮಾಹಿತಿ ಸಿಗಲಿದೆ.

ಇನ್ನು ಕೊನೆಯ ಕ್ಷಣದಲ್ಲಿ ಶ್ರೀಲಂಕಾ ಕೂಡ ಏಷ್ಯಾಕಪ್ ಆತಿಥ್ಯ ವಹಿಸುವ ಹಕ್ಕನ್ನು ಪಡೆದುಕೊಂಡಿತು. ಈ ವರ್ಷ ಏಷ್ಯಾಕಪ್ ಆಯೋಜಿಸುವ ಹಕ್ಕನ್ನು ಪಾಕಿಸ್ತಾನ ಹೊಂದಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿತ್ತು. ಇದರ ನಂತರ, ಹೋಸ್ಟಿಂಗ್ ಬಗ್ಗೆ ವಿವಾದವು ದೀರ್ಘಕಾಲದವರೆಗೆ ಮುಂದುವರೆದು, ಕಡೆಗೆ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿ: ಶ್ರಾವಣ ಶನಿವಾರದಂದು ಈ ರಾಶಿಯ ಅದೃಷ್ಟ ಬೆಳಗುವನು ಶನಿಮಹಾತ್ಮ: ಕೈಯಿಟ್ಟಲ್ಲೆಲ್ಲಾ ಯಶಸ್ಸು!

ಟೂರ್ನಿಯ ಐದು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಟೀಂ ಇಂಡಿಯಾ ಪಾಕಿಸ್ತಾನದ ನೆಲದಲ್ಲಿ ಒಂದೇ ಒಂದು ಪಂದ್ಯವನ್ನು ಆಡುವುದಿಲ್ಲ ಎಂಬುದು ಗಮನಾರ್ಹ ವಿಚಾರ. ಅಂತಿಮ ಪಂದ್ಯವೂ ಶ್ರೀಲಂಕಾದಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News