India’s most successful actress: ಒಂದು ಸಿನಿಮಾ ಸಕ್ಸಸ್ ಆಗಬೇಕೆಂದರೆ ಅಲ್ಲಿ ಹೀರೋ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹೀರೋಯಿನ್ ಕೂಡ ಆಗಿರುತ್ತಾರೆ. ಇನ್ನು ಭಾರತೀಯ ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಮುಖಗಳೇ ಹೆಚ್ಚು ಕಾಣುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಒಂದು ಸಿನಿಮಾ ಸಕ್ಸಸ್ ಆಗಬೇಕೆಂದರೆ ಅಲ್ಲಿ ಹೀರೋ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹೀರೋಯಿನ್ ಕೂಡ ಆಗಿರುತ್ತಾರೆ. ಇನ್ನು ಭಾರತೀಯ ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಮುಖಗಳೇ ಹೆಚ್ಚು ಕಾಣುತ್ತಿದೆ. ಆದರೆ ಹಿಂದೊಮ್ಮೆ ಕೆಲವೇ ಕೆಲವು ನಟಿಯರು ಸಿನಿರಂಗದಲ್ಲಿದ್ದರು, ಅವರ ಸಿನಿಮಾಗಳೇ ಬಾಕ್ಸ್ ಆಫೀಸ್’ನಲ್ಲಿ ಸದ್ದು ಮಾಡುತ್ತಿತ್ತು.
ನಾವಿಂದು ಈ ಲೇಖನಲ್ಲಿ ಓರ್ವ ನಟಿಯ ಯಶಸ್ಸಿನ ಬಗ್ಗೆ ಮಾತನಾಡಲಿದ್ದೇವೆ. ಈಕೆಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹಿಟ್ ಸಾಧಿಸಿದ್ದಲ್ಲದೆ, ಬರೋಬ್ಬರಿ 4 ಸಾವಿರ ಕೋಟಿ ರೂ. ಗಳಿಕೆ ಮಾಡಿತ್ತು.
ಬಾಲಿವುಡ್ ಸ್ಟಾರ್ ನಟಿ ಬೇಬೋ ಕರೀನಾ ಕಪೂರ್ ಸುಮಾರು 23 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಈಕೆ ಯಾವ ಹೀರೋಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಕರೀನಾ 23 ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದು, ಅತ್ಯಂತ ಯಶಸ್ವಿ ಆಧುನಿಕ ಕಾಲದ ಬಾಲಿವುಡ್ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕರೀನಾ ಕಪೂರ್ ಭಜರಂಗಿ ಬಾಯಿಜಾನ್, 3 ಈಡಿಯಟ್ಸ್, ಕಭಿ ಖುಷಿ ಕಭಿ ಗಮ್, ಜಬ್ ವಿ ಮೆಟ್ ಹೀಗೆ ಹಲವಾರು ಹಿಟ್ಮತ್ತು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಆಕೆಗೆ ವಿಶ್ವಾದ್ಯಂತ 4000 ಕೋಟಿ ರೂ. ತಂದುಕೊಟ್ಟಿದೆ.
ಈ ಮೂಲಕ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆಗಿಂತ ಬಾಲಿವುಡ್ ಸಂಭಾವನೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಕರೀನಾ.