2024 Horoscope In Kannada: 2024ರಲ್ಲಿ ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ

2024 Horoscope In Kannada: ಇನ್ನೂ ಕೆಲವೇ ತಿಂಗಳುಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರ ವರ್ಷ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯದ ಬೆಳಕನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /6

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ ವರ್ಷ ಎಂದರೆ 2024ರ ವರ್ಷ ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. 2024ರಲ್ಲಿ ಐದು ರಾಶಿಯವರು ಉದ್ಯೋಗ ರಂಗ, ವೈಯಕ್ತಿಕ ಬದುಕು, ಕೌಟುಂಬಿಕ ಜೀವನ, ಪ್ರೀತಿ-ಪ್ರೇಮ ಹೀಗೆ ಯಾವುದೇ ವಿಷಯದಲ್ಲೂ ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ. ಇವರಿಗೆ ಯಾವುದೇ ಕ್ಷೇತ್ರದಲ್ಲಿ ಸೋಲು ಎಂಬುದೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, 2024ರ ಅದೃಷ್ಟದ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ... 

2 /6

2024ರ ವರ್ಷವನ್ನು ಮೇಷ ರಾಶಿಯವರಿಗೆ ಅದೃಷ್ಟದ ವರ್ಷ ಎಂತಲೇ ಹೇಳಬಹುದು. ಈ ವರ್ಷ ಮೇಷ ರಾಶಿಯವರು ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಮಾತ್ರವಲ್ಲ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ತಮ್ಮ ಕನಸಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಪ್ರೀತಿ-ಪ್ರೇಮದಲ್ಲಿರುವವರಿಗೆ 2024ರ ಮಧ್ಯಾಂತರದಲ್ಲಿ ಒಳ್ಳೆಯ ಫಲಗಳು ಲಭ್ಯವಾಗಲಿದೆ. ನಿಮ್ಮ ಪ್ರೀತಿಗೆ ಮನೆಯವರ ಸಮ್ಮತಿ ದೊರೆತು ವೈವಾಹಿಕ ಜೀವನಕ್ಕೆ ಕಾಲಿಡಬಹುದು. ಸ್ವಂತ ಉದ್ಯೋಗ-ವ್ಯವಹಾರ ಮಾಡಲು ಬಯಸುವವರು ಹಿಂದೂ ನೂತನ ವರ್ಷ ಯುಗಾದಿ ಹಬ್ಬದ ಬಳಿಕ ಪ್ರಯತ್ನಿಸಬಹುದು. 

3 /6

2024ರಲ್ಲಿ ತುಲಾ ರಾಶಿಯ ಜನರಿಗೆ ಭರವಸೆಯ ಹೊಸ ಬೆಳಕು ಕಾಣಿಸಲಿದೆ. ಇದು ನಿಮಗೆ ಅದೃಷ್ಟದ ಸಂಕೇತವಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೌಶಲ್ಯಗಳ ಮುಖಾಂತರ ನಿಮ್ಮದೇ ಆದ ಛಾಪು ಮೂಡಿಸಲು ಸಾಧ್ಯವಾಗುತ್ತದೆ. ಇದರಿಂದ ಕಚೇರಿಯಲ್ಲಿ ನಿಮ್ಮ ಕೀರ್ತಿ ಹೆಚ್ಚುತ್ತದೆ. ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಸುಸಮಯ ಇದಾಗಿದ್ದು ನೀವು ಕೊಂಚ ಪ್ರಯತ್ನಿಸಿದರೂ ಸಹ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಒಟ್ಟಾರೆಯಾಗಿ, 2024ರ ವರ್ಷವೂ ತುಲಾ ರಾಶಿಯ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಸುವರ್ಣ ಕಾಲ ಎಂದು ಸಾಬೀತುಪಡಿಸಲಿದೆ. 

4 /6

2024ರ ವರ್ಷವು ವೃಶ್ಚಿಕ ರಾಶಿಯವರ ಬದುಕಿನಲ್ಲಿ ಹಲವು ಆಯಾಮಗಳಲ್ಲಿ ಬಂಗಾರದ ಸಮಯ ಎಂದು ಸಾಬೀತುಪಡಿಸಲಿದೆ. ಈ ವರ್ಷ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದಾಗ್ಯೂ, ನೀವು ನಿಮ್ಮ ನಗುಮುಖದಿಂದ ಸಂತೋಷದಿಂದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗ್ಲೌ ಲಭ್ಯವಾಗಲಿದ್ದು ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಹೊಸ ಮನೆ, ವಾಹನ ಖರೀದಿಸಲು ಚಿಂತಿಸುವವರಿಗೆ ಸಕಾಲ ಎಂತಲೇ ಹೇಳಬಹುದು. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಚಿಂತಿಸುವವರಿಗೂ 2024ರ ವರ್ಷ ತುಂಬಾ ಒಳ್ಳೆಯದು. 

5 /6

2024ರ ವರ್ಷವು ಮಕರ ರಾಶಿಯವರಿ ಹಲವು ಸವಾಲುಗಳನ್ನು ತಂದೊಡ್ಡಲಿದೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಅದೃಷ್ಟದ ಬೆಂಬಲ ಸಂಪೂರ್ಣ ನಿಮ್ಮೊಂದಿಗಿದ್ದು,  ಯಾವುದೇ ರೀತಿಯ ಅಡೆತಡೆಗಳು ಬಂದರೂ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿ ಇರುತ್ತದೆ. ವರ್ಷಾಂತ್ಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀವು ಅನುಭವಿಸುವಿರಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ನಯವಾಗಿ ನಡೆದುಕೊಳ್ಳುವುದರಿಂದ ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ. 

6 /6

2024ರ ವರ್ಷವು ಕುಂಭ ರಾಶಿಯವರಿಗೆ ಶ್ರಮದಾಯಕ ವರ್ಷವಾಗಿದೆ. ಆದರೂ, ನಿಮ್ಮ ಶ್ರಮಕ್ಕೆ ತಕ್ಕ ಫಲವನ್ನೂ ನೀವು ಈ ವರ್ಷ ಅನುಭವಿಸುವಿರಿ. 2024ರಲ್ಲಿ ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸಬಹುದು. ಹೊಸ ವರ್ಷ ನೀವು ನಿಮ್ಮ ಹೊಸ ಮನೆಗೆ ಸ್ಥಳಾಂತರಗೊಳ್ಳಬಹುದು. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ದೂರ ದೇಶದಲ್ಲಿರುವ ನಿಮ್ಮ ಮಕ್ಕಳು ಈ ವರ್ಷ ಮರಳಿ ಬರುವ ಸಾಧ್ಯತೆ ಇರುವುದರಿಂದ ಮಕ್ಕಳಿಂದ ಸಂತೋಷವನ್ನು ಅನುಭವಿಸುವಿರಿ. ಒಟ್ಟಾರೆಯಾಗಿ, 2024ರ ವರ್ಷವು ಕುಂಭ ರಾಶಿಯವರಿಗೆ ಹಲವು ಆಶ್ಚರ್ಯಕರ ಸಂಗತಿಗಳಿಂದ ಕೂಡಿದ ವರ್ಷ ಎಂದು ಸಾಬೀತುಪಡಿಸಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.