ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ತಿಂಗಳು ಬುಧ, ಶುಕ್ರ, ಸೂರ್ಯ, ಮಂಗಳರ ಜೊತೆಗೆ ರಾಹು-ಕೇತು ಗ್ರಹಗಳು ಕೂಡ ತಮ್ಮ ರಾಶಿಯನ್ನು ಪರಿವರ್ತಿಸಲಿವೆ. ಬುಧ ಅಕ್ಟೋಬರ್ 1 ರಂದು ಕನ್ಯಾ ರಾಶಿಗೆ ಪ್ರವೇಶಿಸಿದರೆ, 3 ರಂದು ಮಂಗಳ ತುಲಾ ರಾಶಿಗೆ ಹಾಗೂ 18 ರಂದು ಸೂರ್ಯ ತುಲಾ ರಾಶಿಗೆ, 19 ರಂದು ಮತ್ತೆ ಬುಧ ರಾಶಿ ಪರಿವರ್ತನೆ ಮಾಡಿ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಗ್ರಹಗಳ ಈ ನಡೆ ಪರಿವರ್ತನೆ ಒಟ್ಟು 12 ರಾಶಿಗಳ ಜನರ ಜೀವನದಲ್ಲಿ ಯಾವುದಾದರೊಂದು ಪ್ರಭಾವ ಖಂಡಿತ ಬೀರಲಿದೆ. ಬನ್ನಿ ಅಕ್ಟೋಬರ್ ತಿಂಗಳು ವಿವಿಧ ರಾಶಿಗಳ ಜನರ ಪಾಲಿಗೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋನ.
ಮೇಷ ರಾಶಿ: ಈ ತಿಂಗಳಿನಲ್ಲಿ ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ, ಹಾಗೂ ಸಂರಚನಾತ್ಮಕ ಕ್ರಿಯೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಒಂದು ವೇಳೆ ನಿಬಂಧಕರ ಹುದ್ದೆಯನ್ನು ನೀವು ಅಲಂಕರಿಸಿದ್ದರೆ, ನಿಮ್ಮಲ್ಲಿರುವ ನೇತೃತ್ವದ ಗುಣಗಳು ನಿಮಗೆ ಹೊಳೆಯಲು ಹಾಗೂ ಸುದ್ದಿಯಲ್ಲಿ ಬರಲು ಸಹಕಾರಿಯಾಗಿವೆ. ಈ ಅವಧಿಯನ್ನು ನೀವು ನಿಮ್ಮ ಕಲಾತ್ಮಕ ಯೋಜನೆಗಳನ್ನು ಮುನ್ನಡೆಸಲು ಹಾಗೂ ಪ್ರಪಂಚದ ಮುಂದೆ ನಿಮ್ಮ ಪ್ರತಿಭೆಯನ್ನು ತೋರಿಸಲು ಉಪಯೋಗಿಸಿ. ಆದರೆ, ಅಹಂಕಾರದಿಂದ ದೂರವಿರಿ, ಇತರರ ಅನಿಸಿಕೆ ಹಾಗೂ ಮಾರ್ಗದರ್ಶನವನ್ನು ಆಲಿಸಿ. 1, 6, 9 ನಿಮ್ಮ ಪಾಲಿಗೆ ಅನುಕೂಲಕರ ಸಂಖ್ಯೆಗಳಾಗಿವೆ, ಶುಭ ಬಣ್ಣ - ಕೆಂಪು.
ವೃಷಭ ರಾಶಿ: ಈರ ರಾಶಿಯ ಜನರು ಅಕ್ಟೋಬರ್ ತಿಂಗಳಿನಲ್ಲಿ ಆತ್ಮ ನಿರೀಕ್ಷೆಯಲ್ಲಿ ಕಳೆಯುವರು. ಇವರು ತಮ್ಮ ಕುರಿತು ಹೊಸ ಹುಡುಕಾಟವನ್ನು ನಡೆಸುವರು, ತಮ್ಮ ಜೀವನದ ಉದ್ದೇಶದ ಹುಡುಕಾಟ ನಡೆಸುವರು. ತಮ್ಮ ಆಂತರಿಕ ವಿಶ್ವದ ಜೊತೆಗೆ ಇವರ ಬಂಧ ಮತ್ತಷ್ಟು ಉತ್ತಮವಾಗಲಿದೆ, ಇದು ಇವರಿಗೆ ಧ್ಯಾನ ಹಾಗೂ ಒಗ್ಗಟ್ಟಿನ ಗತಿವಿಧಿಗಳ ವಿಚಾರಗಳನ್ನು ಸ್ಪಷ್ಟಪಡಿಸಲು ಮತ್ತು ಅವುಗಳ ವಿಶಿಷ್ಟತೆಗೆ ಮಃಹತ್ವ ನೀಡುತ್ತ, ಆತ್ಮ ಅಭಿವ್ಯಕ್ತಿಯ ಹೊಸ ದಾರಿಯನ್ನು ಹುಡುಕಲು ಸಹಕಾರಿಯಾಗಲಿದೆ. ಶುಭ ಸಂಖ್ಯೆ - 6, ಶುಭ ಬಣ್ಣ-ಬಿಳಿ
ಮಿಥುನ ರಾಶಿ: ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯ ಜನರಿಗೆ ವೈಯಕ್ತಿಕ ವಿಕಾಸಕ್ಕೆ ಅವಕಾಶಗಳನ್ನು ನೀಡಲಿದೆ. ಈ ತಿಂಗಳಿನಲ್ಲಿ ನೀವು ನಿಮ್ಮ ಗುರಿಯನ್ನು ನಿಗದಿಪಡಿಸುವಿರಿ ಹಾಗೂ ನಿಮ್ಮ ದಿನಚರ್ಯಯನ್ನು ವ್ಯವಸ್ಥಿತಗೊಳಿಸಲು ಪ್ರಯತ್ನಿಸುವಿರಿ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಮೇಲೆ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವಿರಿ. ಏಕೆಂದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಆಹಾರ ಹಾಗೂ ಫಿಟ್ನೆಸ್ ದಿನಚರಿಯ ಬಗ್ಗೆ ವಿಶೇಷ ಎಚ್ಚರಿಕೆವಹಿಸಿ. ಇದು ಸಕಾರಾತ್ಮಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನಿಮಗೆ ಸಹಕಾರಿಯಾಗಲಿದೆ. ಗ್ರಹ-ನಕ್ಷತ್ರಗಳ ಸ್ಥಿತಿಗತಿ ನಿಮ್ಮ ಪರವಾಗಿರಲಿದ್ದು, ಸವಾಲುಗಳನ್ನು ನೀವು ಮೆಟ್ಟಿ ನಿಲ್ಲುವಿರಿ. ಶುಭಸಂಖ್ಯೆ - 2,5. ಶುಭ ಬಣ್ಣ-ಹಸಿರು
ಕರ್ಕ ರಾಶಿ: ಈ ಜಾತಕದವರಿಗೆ ಅಕ್ಟೋಬರ್ 2023 ರಲ್ಲಿ ಸಂವೇದನಶೀಲತೆಯ ತೀವ್ರ ಅವಧಿಯ ಅನುಭವ ಉಂಟಾಗಲಿದೆ. ನಿಮ್ಮ ಪ್ರವೃತ್ತಿಯನ್ನು ಪಾಲಿಸಿ ಹಾಗೂ ನಿಮ್ಮ ಕನಸುಗಳ ಮೇಲೆ ಗಮನ ಕೇಂದ್ರೀಕರಿಸಿ. ಏಕೆಂದರೆ ಒಂದು ಹೊಸ ಮೈಲಿಗಲ್ಲು ಸಾಧಿಸಲು ನೀವು ಮಾರ್ಗದರ್ಶನ ಮಾಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ನಿಮ್ಮಪರವಾಗಿರಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನೀವು ನಿರತರಾಗುವ ಕಾರಣ ಮಾನಸಿಕ ಹಾಗೂ ಭಾವನಾತ್ಮಕ ಶಾಂತಿ ನಿಮಗೆ ಲಭಿಸಲಿದೆ. ಪ್ರತಿಯೊಂದು ಸಂಗತಿಗಳಲ್ಲಿ ನೀವು ನಿಮ್ಮ ಆರೋಗ್ಯಕ್ಕೆ ಆದ್ಯತೆಯನ್ನು ನೀಡಬೇಕು ಮತ್ತು ನಿಮ್ಮ ಶಕ್ತಿಯನ್ನು ನೀವು ರಕ್ಷಿಸಿಕೊಳ್ಳಬೇಕು. ಶುಭ ಸಂಖ್ಯೆ- 2, 3, 7, ಶುಭ ಬಣ್ಣ-ಕೇಸರಿ
ಸಿಂಹ ರಾಶಿ: ಜೀವನದಲ್ಲಿ ಹೊಸ ಸಂಗತಿಗಳ ಅನುಭವಕ್ಕೆ ನಿಮ್ಮ ಕ್ಷಿತಿಜಕ್ಕೆ ವ್ಯಾಪ್ತಿಯನ್ನು ನೀಡಿ. ಹೊಸ ಅನುಭವಗಳಿಗಾಗಿ ಹುಡುಕಾಟ ನಡೆಸಿ. ಮನಸ್ಸನ್ನು ಮುಕ್ತವಾಗಿಡಿ ಹಾಗೂ ವಿಭಿನ್ನ ಸಂಸ್ಕೃತಿಗಳ ಅನ್ವೇಷಣೆಗಾಗಿ ಆಧ್ಯಾತ್ಮಿಕ ಯಾತ್ರೆ ಆರಂಭಿಸಿ. ವೈಯಕ್ತಿಕ ವಿಕಾಸಕ್ಕಾಗಿ ಕಲಿಕೆಗೆ ಸಿಕ್ಕ ಅವಕಾಶದ ಲಾಭವನ್ನು ಪಡೆದುಕೊಳ್ಳಿ. ಆದರೆ ನಿಮ್ಮ ಹಿಂದಿನ ಕಟಿಬದ್ಧತೆ ಹಾಗೂ ಜವಾಬ್ದಾರಿಗಳ ಪರ ಎಚ್ಚರದಿಂದಿರಿ. ಶುಭ ಸಂಖ್ಯೆ- 2, 3, 5 ಶುಭಬಣ್ಣ - ಕೆಂಪು
ಕನ್ಯಾ ರಾಶಿ: ಅಕ್ಟೋಬರ್ ತಿಂಗಳು ನಿಮ್ಮ ಜಾತಕದವರ ಪಾಲಿಗೆ ಹೊಸ ಅವಕಾಶಗಳು ಹಾಗೂ ಪ್ರೇರಣೆಯಿಂದ ತುಂಬಿರಲಿದೆ. ನಿಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸಿ. ಹೊಸ ಯೋಜನೆಗಳ ಮೇಲೆ ನೀವೊಮ್ಮೆ ಕಾರ್ಯಾರಂಭ ಮಾಡಿ, ಇದಕ್ಕಾಗಿ ವೃತ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಅದೃಷ್ಟ ನಿಮ್ಮೊಂದಿಗೆ ಇರಲಿದೆ. ಖಾಸಗಿ ಜೀವನ ಸಂಘರ್ಷದಿಂದ ತುಂಬಿರಬಹುದು. ಹೀಗಾಗಿ ಸಮತೋಲನ ಸಾಧಿಸಲು ಕೂಟ ನೀತಿಯ ಅಭ್ಯಾಸ ನಡೆಸಿ. ಶುಭ ಸಂಖ್ಯೆ 2,5,7 ಶುಭ ಬಣ್ಣ- ನೀಲಿ
ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಈ ತಿಂಗಳು ತುಂಬಾ ಮಹತ್ವಪೂರ್ಣವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಹಾಗೂ ಕೌಟುಂಬಿಕ ಕಲಹಗಳು ಕೊನೆಗೊಳ್ಳಲಿವೆ. ಕುಟುಂಬಕ್ಕಾಗಿ ಕೊಡುಗೆಗಳನ್ನು ಖರೀದಿಸುವ ಸಾಧ್ಯತೆ ಇದೆ ಹಾಗೂ ಯಾತ್ರೆ ಕೂಡ ಸಂಭವಿಸುವ ಸಾಧ್ಯತೆ ಇದೆ. ಮಾತಿನ ಮೇಲೆ ಹಾಗೂ ವಾಹನ ಚಲಾವಣೆಯಲ್ಲಿ ಎಚ್ಚರಿಕೆವಹಿಸುವ ಅವಶ್ಯಕತೆ ಇದೆ. ಶುಭ ಸಂಖ್ಯೆ - 7, 11, 18, ಶುಭ ಬಣ್ಣ- ಬಿಳಿ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಿರ ಹಾಗೂ ಗಟ್ಟಿ ವಾಸ್ತವಿಕತೆಯ ಅನುಭವ ಉಂಟಾಗಲಿದೆ. ನಿಮ್ಮ ಆರ್ಥಿಕ, ಪ್ರೇಮ ಜೀವನ ಹಾಗೂ ಆರೋಗ್ಯವನ್ನು ವಿಸ್ತರಿಸುವುದರ ಮೇಲೆ ಕೆಲಸ ಮಾಡಿ, ಆತ್ಮನಿರೀಕ್ಷಣೆಗಾಗಿ ಸಮಯವನ್ನು ಮೀಸಲಿಡಿ. ಆರಾಮ ಮಾಡಿ ಹಾಗೂ ನಿಮಗೆ ಖುಷಿ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಿ. ಶುಭ ಸಂಖ್ಯೆ 1, 6, 9, ಶುಭ ಬಣ್ಣ- ಬೂದು ಬಣ್ಣ.
ಧನು ರಾಶಿ: ಅಕ್ಟೋಬರ್ ತಿಂಗಳು ಭಾವನಾತ್ಮಕವಾಗಿ ನಿಮ್ಮ ಪಾಲಿಗೆ ತೀವ್ರವಾಗಿರಲಿದೆ. ಇದರಿಂದ ನೀವು ನಿಮ್ಮ ಆಳವಾದ ಭಯ ಹಾಗೂ ಇಚ್ಚೆಗಳನ್ನು ಅರ್ಥೈಸಿಕೊಳ್ಳುವಿರಿ. ಮನೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಲು ಖುದ್ದು ಹಾಗೂ ನಿಮ್ಮ ಅಕ್ಕಪಕ್ಕರನ್ನು ಪೋಷಿಸಿ. ಒಂದು ವೇಳೆ ನಿಮಗೆ ಒಂಟಿತನದ ಅನುಭವ ಉಂಟಾದರೆ ಅಥವಾ ನಿಮಗೆ ಸಹಾಯದ ಅವಶ್ಯಕತೆ ಇದ್ದರೆ. ನಿಮ್ಮ ಹಿತೈಷಿಗಳು ಹಾಗೂ ಸ್ನೇಹಿತರನ್ನು ಸಂಪರ್ಕಿಸಲು ಸಂಕೋಚಪಡಬೇಡಿ. ಶುಭಸಂಖ್ಯೆ- 6, 9, 12 ಶುಭಬಣ್ಣ- ಗುಲಾಬಿ,
ಮಕರ ರಾಶಿ: ಅಕ್ಟೋಬರ್ ತಿಂಗಳು ನಿಮ್ಮ ಗಮನವನ್ನು ನಿಮ್ಮ ಸಂಬಂಧಗಳತ್ತ ಸೆಳೆಯಲಿದೆ. ಪ್ರೇಮ ಜೀವನದಲ್ಲಿ ಸಂತುಲನವನ್ನು ಸಾಧಿಸುತ್ತ, ಗಾಢ ಸಂಬಂಧದ ಅನ್ವೇಷಣೆಯನ್ನು ನಡೆಸುವಿರಿ. ನಿಮ್ಮ ಆಲೋಚನೆಯನ್ನು ವಿಸ್ತರಿಸಿ ಹಿತೈಷಿಗಳು ಹಾಗೂ ಬಂಧ್-ಮಿತ್ರರ ಜೊತೆಗಿನ ವಿವಾದಗಳನ್ನು ಬಗೆಹರಿಸಿ. ಈ ತಿಂಗಳಿನಲ್ಲಿ ಆದಷ್ಟು ನಿಮ್ಮ ಜೀವನದಲ್ಲಿ ಸಂತುಲನ ಸಾಧಿಸಲು ಪ್ರಯತ್ನಿಸಿ, ಏಕೆಂದರೆ ಇದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ವೇದಿಕೆಗಳಲ್ಲಿ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಶುಭ ಸಂಖ್ಯೆ -5,6, 8 ಶುಭ ಬಣ್ಣ- ಬದನೆ ಬಣ್ಣ
ಕುಂಭ ರಾಶಿ: ಅಕ್ಟೋಬರ್ ತಿಂಗಳು ನಿಮ್ಮ ಪಾಲಿಗೆ ಭಾರಿ ಪರಿವರ್ತನೆಯ ಶಕ್ತಿಯನ್ನು ತರಲಿದೆ. ಇದು ನಿಮಗೆ ಹಳೆ ಭಯಗಳಿಂದ ಮುಂದುವರೆಯಲು ಹಾಗೂ ವೈಯಕ್ತಿಕ ವಿಕಾಸಕ್ಕೆ ಬದಲಾವಣೆಗಳನ್ನು ಸ್ವೀಕರಿಸಲು ಪ್ರೋತ್ಸಾಹಿಸಲಿದೆ. ಪ್ರೇಮ ಜೀವನದಲ್ಲಿ ಹುರುಪು ತರಲಿದೆ, ಇದು ನಿಮ್ಮ ವೃತ್ತಿ ಜೀವನದಲ್ಲಿ ಗುರಿಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸಲಿದೆ. ಸಾಕಷ್ಟು ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ವೈಯಕ್ತಿಕ ವಿಕಾಸವನ್ನು ಸುನೀಶ್ಚಿತಗೊಳಿಸಲು ನಿಮ್ಮ ಅಂತರ್ಜ್ಞಾನವನ್ನು ಪಾಲಿಸಿ. ಶುಭ ಸಂಖ್ಯೆ - 7,15, 19 ಹಾಗೂ ಶುಭ ಬಣ್ಣ- ಕಿತ್ತಳೆ ಬಣ್ಣ,
ಇದನ್ನೂ ಓದಿ-
ಮೀನ ರಾಶಿ: ಅಕ್ಟೋಬರ್ ತಿಂಗಳು ನಿಮಗೆ ನಿಮ್ಮ ಭಾಗ್ಯ ಹಾಗೂ ವೃತ್ತಿಜೀವನ ವಿಕಾಸಕ್ಕೆ ಹೊಸ ಅವಕಾಶಗಳನ್ನು ತರಲಿದೆ. ಸ್ಥಿರತೆಯನ್ನು ಸಾಧಿಸುವತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಹಾಗೂ ಹೊಸ ಎತ್ತರವನ್ನು ಸಾಧಿಸಲು ನಿಮ್ಮನ್ನು ನೀವು ಪ್ರೇರೇಪಿಸಿ. ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಹೊಸ ಕಾರ್ಯತಂತ್ರಗಳನ್ನು ರೂಪಿಸಿ. ಆದರೆ ಇದರರ್ಥ ನೀವು ನಿಮ್ಮ ವೈಯಕ್ತಿಕ ಜೀವನದ ಜೊತೆಗೆ ರಾಜಿ ಮಾಡಿಕೊಳ್ಳಿ ಎಂದಲ್ಲ. ಗುರಿ ಸಾಧನೆ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸಿ. ಶುಭ ಸಂಖ್ಯೆ- 1, 3, 6. ಶುಭ ಬಣ್ಣ- ತಿಳಿ ಹಸಿರು.
ಇದನ್ನೂ ಓದಿ-
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ